Goa-Mumbai highway accident: ಮುಂಬೈ-ಗೋವಾ ಹೆದ್ದಾರಿಯಲ್ಲಿ ಭೀಕರ ಅಪಘಾತ; ಮಗು ಸೇರಿ ಒಂಬತ್ತು ಸಾವು
ಮುಂಬೈ, ಜನವರಿ, 19: ಗುರುವಾರ ಬೆಳಗ್ಗೆ ಮುಂಬೈ - ಗೋವಾ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಕಾರೊಂದು ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದು ಮಗು ಮತ್ತು ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.
ಪೊಲೀಸರ ಪ್ರಕಾರ, ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ರಾಯಗಢ ಜಿಲ್ಲೆಯ ರೆಪೋಲಿ ಪ್ರದೇಶದಲ್ಲಿ ಗೋವಾ-ಮುಂಬೈ ಹೆದ್ದಾರಿಯ ಮಂಗಾವ್ ಬಳಿ ಅಪಘಾತ ಸಂಭವಿಸಿದೆ.
ಮೃತರಲ್ಲಿ ಐವರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಹಿನ್ನೆಲೆ ನಿಂತಿದ್ದ ಹೆದ್ದಾರಿಯಲ್ಲಿ ಸಂಚಾರ ಪುನರಾರಂಭಗೊಂಡಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ಈಡಾಗಿರುವ ಟ್ರಕ್ ಮುಂಬೈಗೆ ತೆರಳುತ್ತಿದ್ದು, ಕಾರು ರತ್ನಗಿರಿ ಜಿಲ್ಲೆಯ ಗುಹಾಗರ್‌ಗೆ ತೆರಳುತ್ತಿತ್ತು. ಕಾರಿನ ಅವಶೇಷಗಳು ಭಾರೀ ಪ್ರಮಾಣದಲ್ಲಿ ಹಾಳಾಗಿದ್ದು, ಇದನ್ನು ಗಮನಿಸಿದರೇ ಅಪಘಾತದ ತೀವ್ರತೆ ಅರ್ಥವಾಗುತ್ತದೆ.












Click it and Unblock the Notifications