ಸೆಕ್ಸ್ ಹಗರಣದಲ್ಲಿ ಸಿಕ್ಕಿಬಿದ್ದ ಜಲ ಸಂಪನ್ಮೂಲ ಸಚಿವ!

ಪಣಜಿ, ನವೆಂಬರ್ 07: ಗೋವಾದ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಅವರಿರುವ ಸೆಕ್ಸ್ ವಿಡಿಯೋ ನಮ್ಮ ಬಳಿ ಇದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ವಾಟ್ಸಪ್ ಸಂದೇಶ ಕಳಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರ ವಾಟ್ಸಾಪ್ ಗುಂಪಿನಲ್ಲಿ ಈ ಸಂದೇಶ ಹರಿದಾಡುತ್ತಿದೆ. ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಸೆಕ್ಸ್ ವಿಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ, ಅಪರಿಚಿತ ಮಹಿಳೆ ಜೊತೆ ಸಚಿವರು ಅಶ್ಲೀಲ ಸ್ಥಿತಿಯರುವ ವಿಡಿಯೋ ಇದೆ ಎಂಬ ಸುದ್ದಿ ಖಚಿತವಾಗಿದೆ.

Goa minister 'caught' in sleazy video racket, blames drug mafia

ಗೋವಾದ ಫಾರ್ವರ್ಡ್ ಪಾರ್ಟಿ ಶಾಸಕರಾಗಿ, ಸಚಿವರಾಗಿರುವ ಪಾಲೇಕರ್ ಅವರು. ಗೋವಾದಲ್ಲಿ ನಡೆಯುತ್ತಿರುವ ಡ್ರಗ್ ಲಾಬಿ ಬಗ್ಗೆ ಅವರು ಧ್ವನಿ ಎತ್ತಿದ್ದರು. ಈಗ ಡ್ರಗ್ ಮಾಫಿಯಾ ತಮ್ಮ ವಿರುದ್ಧ ಈ ಆರೋಪ ಹೊರಿಸಿದೆ, ತಮಗೆ ಜೀವ ಬೆದರಿಕೆಯಿದೆ ಎಂದು ಪಾಲೇಕರ್ ದೂರಿದ್ದಾರೆ.

ಗೋವಾ ಫಾರ್ವರ್ಡ್ ಪಾರ್ಟಿ ಮುಖ್ಯಸ್ಥ ವಿಜಯ್ ಸರ್ದೇಸಾಯಿ ಕೂಡ ಪಾಲೇಕರ್ ಬೆಂಬಲಕ್ಕೆ ನಿಂತು, ಇದೆಲ್ಲ ಡ್ರಗ್ಸ್ ಮಾಫಿಯಾದವರ ಕೈವಾಡ, ಪಾಲೇಕರ್ ಹೆಸರು ಹಾಳು ಮಾಡಲು ಸಾಮಾಜಿಕ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ರಾಜ್ಯಪಾಲರ ಅನುಮತಿ ನಂತರ ಪಾಲೇಕರ್ ವಿಡಿಯೋವನ್ನು ಮಾಧ್ಯಮಗಳಿಗೆ ನೀಡಲು ಸಾಮಾಜಿಕ ಕಾರ್ಯಕರ್ತರು ಮುಂದಾಗಿದ್ದಾರೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+