ವಿಮಾನದಲ್ಲಿ ವೃದ್ಧನ ಮಾನ ಹರಾಜು ಹಾಕಿದ ಯುವತಿ

ಭುವನೇಶ್ವರ್, ಫೆ. 3: ಲೈಂಗಿಕ ಕಿರುಕುಳ ನೀಡುವ ತೆವಲು ವೃದ್ಧರನ್ನೂ ಬಿಟ್ಟಿಲ್ಲ. ದೇಶಾದ್ಯಂತ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ ನಡೆದರೂ ಕೀಚಕ ಮನಸ್ಥಿತಿಯವರು ಬದಲಾಗಿಲ್ಲ. ಇದಕ್ಕೆ ಮುಂಬೈನಿಂದ ಭುವನೇಶ್ವಕ್ಕೆ ಬಂದ ಇಂಡಿಗೋ ಏರ್‌ಲೈನ್ಸ್‌ನಲ್ಲಿ ನಡೆದ ಘಟನೆಯೇ ಸಾಕ್ಷಿ.

ಏರ್‌ಲೈನ್‌ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧನೋರ್ವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದಾಗ ಮಹಿಳೆ ಆತನಿಗೆ ವಾಚಾಮಗೋಚರ ಬೈಯ್ದಿದ್ದು, ಈ ಬೆಳವಣಿಗೆಯಿಂದ ಬೆದರಿದ ವೃದ್ಧ ಅವಮಾನದಿಂದ ಮುಖ ಮುಚ್ಚಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ಅನ್ನು ಶ್ರೇಯಸ್ ರಾವ್ ಎಂಬುವರು ಯೂಟ್ಯೂಬ್‌ನಲ್ಲಿ ಜನವರಿ 31ರಂದೇ ಲಗತ್ತಿಸಿದ್ದರು. ಅಲ್ಲದೆ, ವಿಮಾನದಲ್ಲಿ ಏನಾಗಿತ್ತು ಎಂಬುದರ ಕುರಿತೂ ಅಲ್ಲಿ ಸಂದೇಶ ಹಾಕಿದ್ದಾರೆ. [23 ಮಕ್ಕಳ ತಂದೆಯಿಂದ ಲೈಂಗಿಕ ಕಿರುಕುಳ]

rape

ವಿಡಿಯೋದಲ್ಲಿ ಮಹಿಳೆ ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ...

"ನನ್ನ ಹಿಂದೆ ಕುಳಿತಿದ್ದ ಈ ವ್ಯಕ್ತಿ ನನಗೆ ಲೈಂಗಿಕ ಕಿರುಕುಳ ನೀಡಿದ್ದ. ಆತ ಸೀಟಿನ ಮಧ್ಯೆ ಇರುವ ಸಂದಿಯಿಂದ ಬೆರಳು ತೂರಿಸಿ ನನ್ನನ್ನು ಮುಟ್ಟುತ್ತಿದ್ದ. ಇದರಿಂದ ನನಗೆ ಮೊದಲು ಆಘಾತವಾಯಿತು. ಆದ್ದರಿಂದ ಸುಮ್ಮನುಳಿದಿದ್ದೆ. ವಿಮಾನ ಕೆಳಕ್ಕೆ ಇಳಿಯುವ ಸಂದರ್ಭದಲ್ಲಿ ಮತ್ತೆ ಮುಟ್ಟಿದ. ನೆಲಕ್ಕೆ ಇಳಿದ ಮೇಲೆ ನಾನು ಎದ್ದು ನಿಂತು ನೋಡಿದೆ. ಆತ ಮತ್ತೆ ತನ್ನ ಕೈಯನ್ನು ಸೀಟಿನ ಸಂದಿಯಿಂದ ತೂರಿಸಿ ನನ್ನನ್ನು ಮುಟ್ಟಲು ತಯಾರಾಗಿ ಕುಳಿತಿದ್ದ. ಇದರಿಂದ ಕೋಪಗೊಂಡ ನಾನು ಆತನನ್ನು ತರಾಟೆಗೆ ತೆಗೆದುಕೊಂಡ ವಿಮಾನದಲ್ಲಿದ್ದ ಎಲ್ಲರ ಎದುರು ಆತನಿಗೆ ಅವಮಾನ ಮಾಡಿದೆ" [ಸನ್ ನೆಟ್ವರ್ಕ್ ಸಿಒಒ ಬಂಧನ]

"ಆತನ ಪ್ರಕಾರ ಮಹಿಳೆಯರು ಮರ್ಯಾದೆಗೆ ಹೆದರಿ ಸುಮ್ಮನುಳಿಯುತ್ತಾರೆ. ಆದ್ದರಿಂದ ಆತ ಸುಲಭವಾಗಿ ಪಾರಾಗಬಹುದು ಎಂದು ತಿಳಿದಿದ್ದ. ಆದರೆ, ನಾನು ಆತನ ವಿರುದ್ಧ ದೂರು ನೀಡಿದ್ದೇನೆ. ಆತ ಒರಿಸ್ಸಾದ ಭುವನೇಶ್ವರದಲ್ಲಿ ಓರ್ವ ಶ್ರೀಮಂತ ವ್ಯಕ್ತಿ. ಆದರೆ, ಈಗ ಜನರ ಎದುರು ತಲೆ ತಗ್ಗಿಸುವಂತಾಗಿದೆ." [ವಿದ್ಯಾರ್ಥಿಯೊಂದಿಗೆ ಪ್ರಾಂಶುಪಾಲರ ಕಾಮದಾಟ]

"ನನ್ನ ಪ್ರಕಾರ ಇಂತಹ ಸಂದರ್ಭದಲ್ಲಿ ಮಹಿಳೆಯರು ಪ್ರತಿಭಟಿಸದೆ ಸುಮ್ಮನುಳಿಯುವುದು ತಪ್ಪು. ನಾನು ಪ್ರತಿಭಟಿಸಿದಾಗ ವಿಮಾನದ ಸಿಬ್ಬಂದಿ ನನ್ನ ಪರವಾಗಿ ವಾದಿಸಿದರು. ಪೊಲೀಸರೂ ಸಹಕರಿಸಿದ್ದಾರೆ. ಆರೋಪಿ ವ್ಯಕ್ತಿ ಈಗ ಪೊಲೀಸ್ ವಶದಲ್ಲಿದ್ದಾನೆ." [ರೋಹ್ಟಕ್ ಸಹೋದರಿಯರ ಪ್ರಕರಣಕ್ಕೆ ತಿರುವು]

"ಈ ಸಂದರ್ಭದಲ್ಲಿ ನಾನು ಆತನ ಫೋಟೊ ತೆಗೆದಿದ್ದೆ. ಜೊತೆಗೆ ವಿಡಿಯೋ ಕೂಡ ಮಾಡಿದ್ದೆ. ಜೋರಾಗಿ ಕಿರುಚುವ ಮೂಲಕ ಸಂಪೂರ್ಣ ವಿಮಾನದ ಜನರೆದುರು ಆತನಿಗೆ ಅವಮಾನ ಮಾಡುವುದು ನನ್ನ ಉದ್ದೇಶವಾಗಿತ್ತು" ಎಂದು ಶ್ರೇಯಸ್ ರಾವ್ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+