ಚುಡಾಯಿಸಿದ ಹುಡುಗರಿಗೆ ರಸ್ತೆಯಲ್ಲೇ ಬೆತ್ತದ ರುಚಿ ತೋರಿಸಿದ ಯುವತಿ!
ಭರತ್ಪುರ, ಜುಲೈ 17: ಚುಡಾಯಿಸಿದ ಹುಡುಗನಿಗೆ ಹುಡುಗಿಯೊಬ್ಬಳು ಚೆನ್ನಾಗಿ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗಿದೆ.
ಘಟನೆ ನಡೆದಿದ್ದು ರಾಜಸ್ಥಾನದ ಭರತ್ಪುರ ಎಂಬಲ್ಲಿ. ತನ್ನನ್ನು ಚಾಡಯಿಸಿ, ತನ್ನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಹುಡುಗನಿಗೆ ಬೆತ್ತದ ರುಚಿ ತೋರಿಸಿದ್ದಾಳೆ ಹುಡುಗಿ!
"ಕೆಲವು ಹುಡುಗರು ನನ್ನ ತೇಜೋವಧೆ ಪ್ರಯತ್ನಿಸುತ್ತಿದ್ದಾರೆ. ಅವರಿಗೆಲ್ಲ ಇದು ನನ್ನ ಸಂದೇಶ. ಹುಡುಗಿಯರನ್ನು ಯಾವ ಕಾರಣಕ್ಕೂ ದುರ್ಬಲರು ಎಂದು ತಿಳಿಯಬೇಡಿ" ಎಂದು ಆಕೆ ಹೇಳಿದ್ದಾರೆ.

"ಅಕಸ್ಮಾತ್ ನೀವೇನಾದರೂ ಡೊನಾಲ್ಡ್ ಟ್ರಂಪ್ ನ ಮಕ್ಕಳು ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ! ಯಾವ ಹುಡುಗಿಯೂ ದುರ್ಬಲಳಲ್ಲ. ನೀವು ಗೆರೆ ದಾಟಿದರೆ ನಾವು ನಮ್ಮ ಧ್ವನಿ ಎತ್ತಲೇ ಬೇಕಾಗುತ್ತದೆ. ಆಗ ನಿಮ್ಮ ಬದುಕು ಅಷ್ಟೇ! ನಾನು ಪೊಲೀಸರಿಗೆ ದೂರು ನೀಡುವುದಿಲ್ಲ. ಆತನಿಗೆ ಬದಲಾಗುವುದಕ್ಕೆ ಮತ್ತೊಂದು ಅವಕಾಶ ನೀಡಿದ್ದೇನೆ" ಎಂದು ಆಕೆ ಹೇಳಿದ್ದಾರೆ.

ಬೆತ್ತದಿಂದ ಆಕೆ ಯುವಕರಿಗೆ ಥಳಿಸುತ್ತಿದ್ದುದನ್ನು ರಸ್ತೆಯ ಮೇಲೆ ಹೋಗುವವರೆಲ್ಲ ನೋಡಿ, ಆಕೆಯ ಧೈರ್ಯಕ್ಕೆ ಶಹಬ್ಬಾಸ್ ಎಂದಿದ್ದಾರೆ. ಚುಡಾಯಿಸುವ ಗಂಡು ಮಕ್ಕಳಿಗೆ ಇದು ನನ್ನ ಉತ್ತರ ಎಂದು ಆಕೆ ಧೈರ್ಯವಾಗಿ ಹೇಳುತ್ತಾರೆ.












Click it and Unblock the Notifications