ಅಸ್ಸಾಂನಲ್ಲಿ ಬಾಲಕಿ ಮೇಲೆ ಅತ್ಯಾಚಾರ: 7 ಹೈಸ್ಕೂಲ್ ವಿದ್ಯಾರ್ಥಿಗಳ ಬಂಧನ
ತೇಜ್‌ಪುರ, ಮಾರ್ಚ್ 2: ಅಸ್ಸಾಂನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಮರಕ್ಕೆ ನೇಣು ಹಾಕಿದ ಆರೋಪದ ಮೇಲೆ ಹತ್ತನೇ ತರಗತಿ ಓದುತ್ತಿರುವ 7 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಮಿನ ವಿಶ್ವನಾಥ್ ಜಿಲ್ಲೆಯಲ್ಲಿ ನಡೆದಿದಿದೆ. ಛಾಕ್ಲಾ ಹಳ್ಳಿಯಲ್ಲಿ ಬಾಲಕಿಯ ದೇಹವು ಮರದಲ್ಲಿ ನೇತಾಡುತ್ತಿತ್ತು. ಆ ಆರೋಪಿಗಳೆಲ್ಲರೂ ಹತ್ತನೇ ತರಗತಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.ಈ ವಿದ್ಯಾರ್ಥಿಗಳಲ್ಲಿ ಓರ್ವ ಬಾಲಕಿಯನ್ನು ಮನೆಯಲ್ಲಿ ಬರ್ತ್ ಡೇ ಪಾರ್ಟಿಗೆಂದು ಆಹ್ವಾನಿಸಿ ಬಳಿಕ ಅತ್ಯಾಚಾರವೆಸಗಿ ಕೊಲೆ ಮಾಡಿ, ಮರಕ್ಕೆ ನೇಣು ಹಾಕಿದ್ದರು.

ಶುಕ್ರವಾರ ರಾತ್ರಿಯೇ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಆಕೆಯ ಮನೆಯ ಸಮೀಪವಿರುವ ಅರಣ್ಯದಲ್ಲಿ ಆಕೆಯನ್ನು ನೇಣು ಹಾಕಿದ್ದರು.












Click it and Unblock the Notifications