Video: ರೊಟ್ಟಿಗಾಗಿ ಹಿಟ್ಟು ಕಲಿಸಲು ಮೂತ್ರ ಬಳಸಿದ ಮನೆ ಕೆಲಸದಾಕೆ: ಅನಾರೋಗ್ಯಕ್ಕೆ ಒಳಗಾದ ಕುಟುಂಬ!
ಸಾಮಾಜಿಕ ಜಾಲತಾಣದಲ್ಲಿ ಅಘಾತಕಾರಿ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ವೈರಲ್ ಆದ ವಿಡಿಯೋ ನೋಡಿ ಜನ ವಾಕರಿಸಿದ್ದಾರೆ. ಮನೆ ಕೆಲಸದಾಕೆ ಅಡುಗೆ ಮಾಡಲು ಮೂತ್ರವನ್ನು ಬಳಕೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು.. ಗಾಜಿಯಾಬಾದ್‌ನ ಮನೆಯೊಂದರಲ್ಲಿ ಹಿಟ್ಟನ್ನು ಕಲಿಸಲು ಮನೆಯ ಕೆಲಸದಾಕೆ ಮೂತ್ರವನ್ನು ಬಳಸಿದ ಘಟನೆ ನಡೆದಿದೆ. ಗಾಜಿಯಾಬಾದ್‌ನ ಕ್ರಾಸಿಂಗ್ಸ್ ರಿಪಬ್ಲಿಕ್ ಸೊಸೈಟಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಕುಟುಂಬ ಅಡುಗೆಮನೆಯಲ್ಲಿ ಮೊಬೈಲ್ ಫೋನ್ ಇರಿಸಿ ತಮ್ಮ ಆಹಾರವನ್ನು ಹೇಗೆ ತಯಾರಿಸಲಾಗುತ್ತಿದೆ ಎಂಬುದನ್ನು ಗಮನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಮನೆ ಕೆಲಸದಾಕೆ ಮಾಡುತ್ತಿದ್ದ ಆಹಾರವನ್ನು ಸೇವಿಸಿ ಕುಟುಂಬ ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿರಲಿಲ್ಲ. ಹೀಗಾಗಿ ಕುಟುಂಬದ ಆರೋಗ್ಯ ಸಮಸ್ಯೆಗಳನ್ನು ಸೂಕ್ಷ್ಮಿವಾಗಿ ಗಮನಿಸಿದ ಮನೆ ಮಾಲೀಕ, ಉದ್ಯಮಿ ಮನೆಯಲ್ಲಿ ತಯಾರಿಸುವ ಆಹಾರದಲ್ಲಿ ಏನೋ ತಪ್ಪಾಗಿರಬಹುದು ಎಂದು ಶಂಕಿಸಿದ್ದಾರೆ. ಅನುಮಾನ ಬಂದು ಒಂದು ದಿನ ಅಡುಗೆ ಮನೆಯಲ್ಲಿ ಮೊಬೈಲ್ ಫೋನ್ ಅನ್ನು ಇರಿಸಿದ್ದಾರೆ.
गाजियाबाद में घरेलू नौकरानी रीना मूत्र में आटा गूंथकर बनाकर खिलाती थी रोटियां , मालिक लोग उसको घर का टॉयलेट इस्तेमाल नहीं करने देते थे ,,, #Ghaziabad #यूपी pic.twitter.com/u5PgXa6iag
— TANVIR RANGREZ (@virjust18) October 16, 2024
ಮೊಬೈಲ್‌ನಲ್ಲಿ ಸೆರೆಯಾದ ವಿಡಿಯೋದಲ್ಲಿ ಮನೆ ಕೆಲಸದಾಕೆ ಅಡುಗೆಮನೆಯ ಬಾಗಿಲನ್ನು ಮುಚ್ಚುತ್ತಾಳೆ. ನಂತರ ಅವಳು ಬೌಲ್‌ನಲ್ಲಿ ಮೂತ್ರ ವಿಸರ್ಜಿಸುತ್ತಾಳೆ. ಬಳಿಕ ಅದನ್ನು ಹಿಟ್ಟನ್ನು ಕಲಿಸಲು ಬಳಸುತ್ತಾಳೆ. ಅದರಿಂದ ಕುಟುಂಬಕ್ಕೆ ರೊಟ್ಟಿ ತಯಾರಿಸಿದ್ದಾಳೆ. ನಿತ್ಯ ಇದೇ ರೀತಿ ಮಾಡಿದ್ದರಿಂದ ಕುಟುಂಬಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಉದ್ಯಮಿ ಆರೋಪ ಮಾಡಿದ್ದಾರೆ. ಜೊತೆಗೆ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.
ಮನೆ ಕೆಲಸದಾಕೆ ವಿರುದ್ಧ ಪ್ರಕರಣ
ಈ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಕೆಯನ್ನು ಬಂಧಿಸಲಾಗಿದೆ. ಎಬಿಪಿ ವರದಿಯ ಪ್ರಕಾರ, ವೇವ್ ಸಿಟಿಯ ಸಹಾಯಕ ಪೊಲೀಸ್ ಕಮಿಷನರ್ ಲಿಪಿ ನಾಗಯಾಚ್ ಪ್ರಕರಣವನ್ನು ದೃಢಪಡಿಸಿದ್ದಾರೆ. ಆದರೆ ವಿಚಾರಣೆಯ ಸಮಯದಲ್ಲಿ ಮನೆಗೆಲಸದ ಮಹಿಳೆ ಹಿಟ್ಟಿನಲ್ಲಿ ಮೂತ್ರವನ್ನು ಬೆರೆಸುವುದನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಿಟ್ಟನ್ನು ಕಲಿಸಲು ಮೂತ್ರವನ್ನು ಬಳಸುತ್ತಿದ್ದ ಮಹಿಳೆ ಕಳೆದ ಎಂಟು ವರ್ಷಗಳಿಂದ ಕುಟುಂಬಕ್ಕಾಗಿ ದುಡಿಯುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ನಿವಾಸದಲ್ಲಿ ಕಳ್ಳತನ ನಡೆದಿದ್ದರೂ, ಉದ್ಯಮಿ ಮನೆಕೆಲಸದಾಕೆಯ ಮೇಲೆ ಅನುಮಾನ ಪಡಲಿಲ್ಲ. ಆದರೆ ಆಹಾರದಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತಿರಬಹುದು ಎಂಬ ಶಂಕೆಯಿಂದ ಮೊಬೈಲ್ ಪೋನ್ ಅನ್ನು ಅಡುಗೆ ಮನೆಯಲ್ಲಿ ಇರಿಸಿದಾಗ ಸತ್ಯ ಬಯಲಾಗಿದೆ.
ಮತ್ತೊಂದು ವಿಕೃತಿ ಘಟನೆ
ಈ ವರ್ಷದ ಏಪ್ರಿಲ್‌ನಿಂದ ಇದೇ ರೀತಿಯ ಗೊಂದಲದ ಘಟನೆಯ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಇತ್ತೀಚೆಗೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು 'ಫಲುದಾ' ಮಾರಾಟ ಮಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. ಅವರು ಹಸ್ತಮೈಥುನ ಮತ್ತು ಆಹಾರದಲ್ಲಿ ವೀರ್ಯವನ್ನು ಸೇರಿಸುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಶೀಘ್ರದಲ್ಲೇ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಕಾನೂನು ಜಾರಿ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿ ಕಾಲೂರಮ್ ಕುರ್ಬಿಯಾ ಎಂಬ ವ್ಯಕ್ತಿಯನ್ನು ಬಂಧಿಸಿದರು. ರಾಜಸ್ಥಾನ ಮೂಲದ ಕುರ್ಬಿಯಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 294 ರ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯಗಳನ್ನು ಎಸಗಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications