ಚುನಾವಣಾ ಫಲಿತಾಂಶ ವೀಕ್ಷಣೆಗೆ ಸುಸ್ವಾಗತ
ಬೆಂಗಳೂರು, ಮೇ 15 : ಭಾರತ ಲೋಕಸಭೆಯ 543 ಕ್ಷೇತ್ರಗಳಿಗೆ ಒಂಭತ್ತು ಹಂತಗಳಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗುತ್ತದೆ. ಹೊಸ ಶಕೆಯ ಆರಂಭಕ್ಕೆ ಶಂಖನಾದ ಮೊಳಗುತ್ತದೆ!
ಮತ ಎಣಿಕೆಯ ನಡುನಡುವೆ ಅಭ್ಯರ್ಥಿ ಹಾಗೂ ಪಕ್ಷಗಳ ಹಿನ್ನಡೆ ಮುನ್ನಡೆ ಮತ್ತು ಫಲಿತಾಂಶದ ನೇರ ವರದಿಗಳನ್ನು, ಕ್ಷಣಕ್ಷಣದ ಸುದ್ದಿಗಳನ್ನು ನಮ್ಮ ತಾಣದಲ್ಲಿ ಪ್ರಕಟಿಸಲಾಗುತ್ತದೆ. ಮುಖ್ಯವಾಗಿ ಸ್ಕೋರ್ ಎಷ್ಟು, ಯಾರು ಗೆದ್ದರು, ಯಾರು ಬಿದ್ದರು ಇತ್ಯಾದಿ. [ಕರ್ನಾಟಕ Live: ಮೊದಲಿಗೆ ಅಂಚೆ ಮತಗಳ ಎಣಿಕೆ]

ಪ್ರಮುಖವಾಗಿ ಕರ್ನಾಟಕದ 28 ಕ್ಷೇತ್ರಗಳ ಮತ ಎಣಿಕೆ ಮತ್ತು ಫಲಿತಾಂಶಗಳ ಮೇಲೆ ನಮ್ಮ ಗಮನ. ಮಂಡ್ಯದಿಂದ ಉಡುಪಿಯವರೆಗೆ, ಮೈಸೂರಿನಿಂದ ಮಂಗಳೂರವರೆಗೆ, ಬೆಂಗಳೂರು ದಕ್ಷಿಣದಿಂದ ಶಿವಮೊಗ್ಗದವರೆಗೆ ಎಲ್ಲ ಕ್ಷೇತ್ರಗಳ ಫಲಿತಾಂಶದ ಪೂರ್ಣ ವಿವರಗಳನ್ನು ನೀಡಲಾಗುತ್ತದೆ.
ಇಡೀ ಭಾರತದ ಚುನಾವಣಾ ಫಲಿತಾಂಶದ ಅಂಕಿ ಅಂಶಗಳನ್ನು ಬಿಂಬಿಸುವ ಕೋಷ್ಟಕ ಪುಟದ ಮೇಲ್ಭಾಗದಲ್ಲಿ ಇರುತ್ತದೆ. ಎಲ್ಲಾ ರಾಜಕೀಯ ಪಕ್ಷಗಳು, ರಾಜ್ಯವಾರು ಫಲಿತಾಂಶ, ಎನ್‌ಡಿಎ ಸ್ಕೋರ್ ಎಷ್ಟು? ಯುಪಿಎ ಸ್ಕೋರ್ ಎಷ್ಟು? ಜತೆಗೆ ಅಣ್ಣಾಡಿಎಂಕೆ, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮುಂತಾದ ಪಕ್ಷಗಳ ಸಾಧನೆ ಎನು? ಕಂಪ್ಲೀಟ್ ಸ್ಕೋರ್ ಕಾರ್ಡ್ ಇರ್ತದೆ. [ಕರ್ನಾಟಕ ಲೋಕಸಭೆ : ಗೆದ್ದವರು ಸೋತವರು]
ಫಲಿತಾಂಶಗಳು ಬಂದನಂತರ ಉಧ್ಬವಿಸುವ ರಾಜಕೀಯ ಬೆಳವಣಿಗೆಗಳ ಚಿತ್ರಣ ಸಿಗುತ್ತದೆ. ತಪ್ಪದೆ ನೋಡುತ್ತಿರಿ. ನಿಮ್ಮ ಸ್ನೇಹಿತರಿಗೆ ಹೇಳಿ.












Click it and Unblock the Notifications