Gen Z: ಹೊಸ ತಲೆಮಾರಿನ ಹೊಸ ಟ್ರಾವೆಲ್ ಟ್ರೆಂಡ್: ದೀರ್ಘ ರಜೆಗಿಂತ ಶಾರ್ಟ್ ಟ್ರಿಪ್ಗೆ ಹೆಚ್ಚು ಒಲವು
Gen Z: ಪ್ರವಾಸ ಮಾಡುವುದಕ್ಕೆ ಸಂಬಂಧಿಸಿದಂತೆ ಹೊಸ ತಲೆಮಾರಿನ ಆಯ್ಕೆಗಳ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೆನ್ ಜೀ ಪೀಳಿಗೆಯ ಆಯ್ಕೆಗಳು ಬೇರೆ ಪೀಳಿಗೆಗಿಂತ ಅಥವಾ 90 ಕಿಡ್ಸ್ಗಳಿಗಿಂತಲೂ ಭಿನ್ನವಾಗಿದೆ. ಪ್ರವಾಸ ಮಾಡುವುದನ್ನು ಇಂದಿನ ಯುವಕ ಮತ್ತು ಯುವತಿಯರು ಇಷ್ಟಪಡುತ್ತಿದ್ದಾರೆ. ಅದರಲ್ಲೂ ಅವರು ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ಹೆಚ್ಚು ಇಷ್ಟಪಡುತ್ತಾರೆ. ಈ ಜನರೇಷನ್ ಉಳಿದ ಜನರೇಷನ್ನವರಂತೆ ವಾರಗಳ ಗಟ್ಟಲೆ ಪ್ರವಾಸ ಮಾಡುವುದನ್ನು ಇಷ್ಟಪಡುವುದಿಲ್ಲ. ಪ್ರವಾಸೋದ್ಯಮ ವಿಚಾರದಲ್ಲಿ ಜೆನ್ ಜೀ ಅವರ ಅಭಿರುಚಿಯು ಭಿನ್ನವಾಗಿದೆ. ಪ್ರವಾಸ ಮಾಡುವುದನ್ನು ಈ ಪೀಳಿಗೆಯು ಹೆಚ್ಚು ಇಷ್ಟಪಡುತ್ತೆಯಾದರೂ ಒಂದು ವಾರದ ಲೆಕ್ಕದಲ್ಲಿ ಪ್ರವಾಸಕ್ಕೆ ಹೋಗುವುದನ್ನು ಇಷ್ಟಪಡುವುದಿಲ್ಲ. ವಾರಾಂತ್ಯದ ವಿರಾಮಗಳು ಮತ್ತು ಸಣ್ಣ ವಿಹಾರವನ್ನು ಇಂದಿನ ಯುವಕ ಮತ್ತು ಯುವತಿಯರು ಇಷ್ಟಪಡುತ್ತಾರೆ.
New Airbnb ವರದಿಯ ಪ್ರಕಾರ, ಭಾರತೀಯ Gen Zನಲ್ಲಿ ಶೇ 87 ಪ್ರತಿಶತದಷ್ಟು ಜನರು ಕಡಿಮೆ ಅವಧಿಯ ಪ್ರವಾಸ ಮಾಡುವುದನ್ನು ಇಷ್ಟಪಡುತ್ತಾರೆ. ಈ ಅಂಕಿ - ಅಂಶಗಳನ್ನು ಗಮನಿಸಿದರೆ, ಹತ್ತು ಜನರಲ್ಲಿ ಏಳು ಜನರು ದೀರ್ಘ ವಾರ್ಷಿಕ ರಜೆಯಲ್ಲಿ ಮೂರು ಸಣ್ಣ ಪ್ರವಾಸಗಳನ್ನು ಮಾಡುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ವರದಿ ಉಲ್ಲೇಖಿಸಿದೆ.

ವಸತಿ ಆಯ್ಕೆಗಳು ಸಹ ತುಂಬಾ ಭಿನ್ನವಾಗಿವೆ. ಗುಂಪಿನಲ್ಲಿ ಪ್ರಯಾಣ ಮಾಡುವವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪ್ರತ್ಯೇಕ ಹೋಟೆಲ್ ಕೊಠಡಿಗಳಿಗಿಂತ ಎಲ್ಲರೂ ಸೇರಿ ಇರುವ ಒಂದು ಮನೆ ಅಥವಾ ಸಾಮೂಹಿಕ ವಾಸವನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ವರದಿ ಹೇಳಿದೆ.
ಹಲವರಿಗೆ ತಾವು ಯಾವ ಸ್ಥಳಕ್ಕೆ ಹೋಗುತ್ತಾರೆ ಎನ್ನುವುದಕ್ಕಿಂತ, ಯಾರ ಜೊತೆ ಪ್ರಯಾಣಿಸುತ್ತಾರೆ ಎನ್ನುವುದು ಹೆಚ್ಚು ಮುಖ್ಯವಾಗಿದೆ ಎಂಬುದನ್ನೂ ಸಮೀಕ್ಷೆ ತಿಳಿಸಿದೆ. ಶೇ 95% ರಷ್ಟು ಯುವ ಪ್ರಯಾಣಿಕರು ತಮ್ಮ ಪ್ರವಾಸವು ವಿಶಿಷ್ಟ ಅಥವಾ ಪೂರ್ವ ಯೋಜಿತವಲ್ಲದಂತೆ ಇದ್ದರೆ ಚೆಂದ ಎಂದು ಭಾವಿಸುವುದು ಸಹ ಇದೆ. ಆದರೆ ಶೇ.87 % ರಷ್ಟು ಜನರು ತಾವು ಪ್ರಯಾಣ ಮಾಡುವುದು ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದೂ ನಂಬುತ್ತಾರೆ.














Click it and Unblock the Notifications