Gen Z ಡಿಕ್ಷನರಿ: 80 - 90 ದಶಕದವರಿಗೆ ಈ ಪದಗಳ ಅರ್ಥ ಗೊತ್ತಿದ್ದರೆ ಮಜಾ!
ಈಗ ಎಲ್ಲಾ ಕಡೆಗಳಲ್ಲೂ Gen Z / ಜೆನ್ ಜಿ ಜನರೇಷನ್‌ದೇ ಸುದ್ದಿ. ಜೆನ್ ಜಿ ಜನರೇಷನ್ ಈ ವರ್ಷ ಎರಡು ಪ್ರಮುಖ ಕಾರಣಗಳಿಗೆ ಸುದ್ದಿಯಲ್ಲಿದೆ. ಮೊದಲನೆಯದಾಗಿ ಅವರ ಸ್ಲ್ಯಾಗ್ (ಪದಕೋಶದಿಂದ) ಮತ್ತೊಂದು ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಹೊಸ ತಲೆಮಾರು ಮಾಡಿರುವ ಪ್ರತಿಭಟನೆಗಳಿಂದ. 1997ರಿಂದ 2012ರವರೆಗೆ ಜನಿಸಿದವರನ್ನು Gen Z ತಲೆಮಾರಿನವರು ಎಂದು ಕರೆಯಲಾಗುತ್ತದೆ. ಇವರ ನಡವಳಿಕೆ, ಭಾಷೆ ಹಾಗೂ ಸ್ವಭಾವ ಎಲ್ಲವೂ 90ರ ದಶಕದವರಿಗೆ ಹೊಸದಾಗಿ ಕಾಣಿಸುತ್ತದೆ. ಭಾಷೆ ಬಳಕೆಯೂ ಹೌದು. ಇಲ್ಲಿ ಅವರು ನಿತ್ಯವೂ ಬಳಸುವ ಹಾಗೂ 2025ರಲ್ಲಿ ಟ್ರೆಂಡ್ ಸೃಷ್ಟಿ ಮಾಡಿರುವ ಕೆಲವೊಂದು ಪದಗಳಿವೆ.
ಹೊಸ ತಲೆಮಾರಿನ ಯುವಕ ಹಾಗೂ ಯುವತಿಯರು ಬಳಕೆ ಮಾಡುವ ಪದಗಳ ಬಗ್ಗೆ ಕೆಲವರು ತಲೆಕೆಡಿಸಿಕೊಳ್ಳುವುದು ಇದೆ. ಈ ಪದದ ಅರ್ಥವೇನು ಅಂತ ತಡಕಾಡುವುದು ಸಹ ಇದೆ. Gen Z / ಜೆನ್ ಜಿ ಜನರೇಷನ್ ಯುವಕ ಮತ್ತು ಯುವತಿಯರು ಹೆಚ್ಚಾಗಿ ಬಳಕೆ ಮಾಡುವ ಕೆಲವೊಂದು ಪ್ರಮುಖ ಪದಗಳು ಹಾಗೂ ಅದರ ಅರ್ಥವೇನು ಅಂತ ಈ ಲೇಖನದಲ್ಲಿ ನೋಡೋಣ.

Boomer Energy: ಹೇಗೆ ಹಳೆಯ ತಲೆಮಾರು ಹೊಸ ತಲೆಮಾರು ಜೆನ್ ಜಿ ಜನರೇಷನ್ ಬಗ್ಗೆ ವ್ಯಂಗ್ಯವಾಡುತ್ತಾರೋ ಅದೇ ರೀತಿ ಅವರೂ ಸಹ ಹಳೆಯ ತಲೆಮಾರಿನ ಬಗ್ಗೆ ವ್ಯಂಗ್ಯವಾಡುವುದಿದೆ. ಇದರಲ್ಲಿ Boomer Energy ಪದವೂ ಒಂದು. ಹಳೆಯ ಕಾಲದವರ ತರ, ಫ್ಯಾಷನ್ ಸೆನ್ಸ್ ಇಲ್ಲ ಅಂತ ಹೇಳುವುದಕ್ಕೂ ಇದನ್ನು ಬಳಸುವುದು ಇದೆ!
IYKYK: If You know, you know ನಿಮಗೆ ಗೊತ್ತಿದ್ದರೆ ಗೊತ್ತಿದೆ
Chill: ತಲೆಕೆಡಿಸಿಕೊಳ್ಳಬೇಡ, ಎಲ್ಲವೂ ಸರಿ ಹೋಗುತ್ತದೆ ಎನ್ನುವುದಕ್ಕೆ ಈ ಪದವನ್ನು ಬಳಸುತ್ತಾರೆ.
Vibe: ಎಂಜಾಯ್ ಮಾಡುವುದು, ಒಳ್ಳೆಯ ವಾತಾವರಣದಲ್ಲಿ ಅಥವಾ ಮನೋಲ್ಲಾಸಕ್ಕೆ ಈ ಪದ ಬಳಸುವುದಿದೆ.
E-boy/E-girl: ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿ ಇರುವ ಯುವಕ ಮತ್ತು ಯುವತಿಯರಿಗೆ ಈ ಪದವನ್ನು ಬಳಸಲಾಗುತ್ತದೆ.
Savage: ಕ್ರೂರ ಪ್ರತಿಕ್ರಿಯೆ, ನಿಷ್ಠುರವಾಗಿ ಹೇಳುವುದಕ್ಕೆ ಈ ಪದವನ್ನು ಬಳಕೆ ಮಾಡಲಾಗುತ್ತದೆ. ಸಖತ್ ರಿಪ್ಲೈ ಎನ್ನುವುದಕ್ಕೂ ಇದನ್ನು ಬಳಕೆ ಮಾಡುವುದು ಇದೆ.
Finsta: ಖಾಸಗಿ ಇನ್‌ಸ್ಟಾಗ್ರಾಮ್ ಖಾತೆ ಅಥವಾ ಮುಖ್ಯವಲ್ಲದ ಖಾತೆ ಎನ್ನುವುದಕ್ಕೆ ಈ ಪದವನ್ನು ಬಳಕೆ ಮಾಡಲಾಗುತ್ತದೆ.
Bae: ಪ್ರೀತಿಯ ಸಂಗಾತಿಗೆ ಈ ಪದವನ್ನು ಬಳಕೆ ಮಾಡುವುದು ಇದೆ. ಇದು ಸಾಮಾನ್ಯವಾಗಿ ಪ್ರೀತಿಸುವವರಿಗೆ ಅಥವಾ ತೀರ ಆತ್ಮೀಯರಿಗೂ ಬಳಸುತ್ತಾರೆ.
Gucci: ಉತ್ತಮ ಅಥವಾ ಅತ್ಯುತ್ತಮವಾಗಿದೆ ಎಂದು ಹೇಳುವುದಕ್ಕೆ ಗುಸ್ಸಿ ಅಂತ ಬಳಸೋದು ಇದೆ.
No Cap: ಸುಳ್ಳಲ್ಲ... ನಿಜವಾಗಿಯೂ ಇದು ತುಂಬಾ ಚೆನ್ನಾಗಿದೆ ಎಂಬರ್ಥದಲ್ಲಿ ಈ ಪದ ಬಳಕೆ ಮಾಡಲಾಗುತ್ತದೆ.
Bet: ಮೀಟ್‌ಗೆ ಬದಲಾಗಿ ಬಳಕೆ ಮಾಡುವ ಪದ ಇದಾಗಿದೆ. ಸಂಜೆ ಮೀಟ್ ಆಗೋಣ ಎನ್ನುವುದಕ್ಕೆ ಬೀಟ್ ಅಂತ ಬಳಸುತ್ತಾರೆ.
Toxic: ವಿಷಕಾರಿ, ನಕಾರಾತ್ಮಕ ವ್ಯಕ್ತಿ ಅಥವಾ ವಿಷಯಗಳನ್ನು ಹೇಳುವಾಗ ಈ ಪದವನ್ನು ಬಳಸಲಾಗುತ್ತದೆ.
Dank: ಒಳ್ಳೆಯ ಕ್ವಾಲಿಟಿ ಇಲ್ಲವೇ ಉತ್ತಮವಾಗಿರುವುದಕ್ಕೆ ಈ ಪದವನ್ನು ಹೊಸ ತಲೆಮಾರು ಬಳಸುವುದು.
Pog: ಆಶ್ವರ್ಯ, ಉತ್ಸಾಹದ ವಿಷಯವನ್ನು ಕೇಳಿದಾಗ ಈ ಪದ ಉಪಯೋಗಿಸುತ್ತಾರೆ.
Hundo P: ಪಕ್ಕಾ... 100% ಅಂತ ಹೇಳುವುದಕ್ಕೆ ಈ ಪದ ಬಳಕೆಯಲ್ಲಿದೆ.
Receipts: ದಾಖಲೆ ಇದೆ, ನೀವು ಮಾಡಿದ ತಪ್ಪಿಗೆ ನನ್ನ ಬಳಿ ದಾಖಲೆ ಇದೆ ಎಂಬರ್ಥ.
Slay: ಸಖತ್ ಆಗಿತ್ತು ಅಥವಾ ಚಿಂದಿ ಎಂಬರ್ಥದಲ್ಲಿ ಈ ಪದ ಬಳಕೆ ಇದೆ.
Rizz: ಇತರರನ್ನು ಮೆಚ್ಚಿಸುವುದು ಅಥವಾ ಮೋಡಿ ಮಾಡುವುದಕ್ಕೆ ಈ ಪದ ಬಳಕೆ ಮಾಡುವುದಿದೆ.
Glowed Up: ರೀಬ್ರಾಂಡ್, ಉತ್ತಮವಾಗಿ ಕಾಣಿಸುವುದಕ್ಕೆ ಈ ಪದ ಬಳಸುವುದಿದೆ.
Vaxxed and Waxed: ಹೊರಗೆ ಹೋಗಿ ಸುತ್ತಾಡುವುದು, ಎಂಜಾಯ್ ಮಾಡುವುದಕ್ಕೆ ಈ ಪದಗಳನ್ನು ಬಳಸುವುದಿದೆ.
Sus / Suss: ಅನುಮಾನಾಸ್ಪದ ಅಥವಾ ಏನೋ ಸರಿ ಇಲ್ಲ ಎಂದು ಅನಿಸುತ್ತಿದೆ ಎಂಬರ್ಥವನ್ನು ಈ ಪದ ಒಳಗೊಂಡಿದೆ.
Snatched: ನೇರವಾಗಿ ವಿಷಯಕ್ಕೆ ಬಾ, ಇಲ್ಲ ಪಾಯಿಂಟ್ ಏನು ಹೇಳು ಎನ್ನುವ ಅರ್ಥ.
Boujee: ಐಷಾರಾಮಿ, ದುಬಾರಿ ಎಂದರ್ಥ
Stan: ನಿಯತ್ತಿನ ಮನುಷ್ಯ, ನಿಯತ್ತಿನ ವ್ಯಕ್ತಿ.
Fire: ಬೆಂಕಿ.. ಆಕರ್ಷಕವಾಗಿದೆ, ಅದ್ಭುತವಾಗಿದೆ ಎನ್ನುವುದಕ್ಕೆ ಬಳಸುತ್ತಾರೆ.
Flex: ಪ್ರತಿಭಾವಂತರು, ಟ್ಯಾಲೆಂಟ್ ಇರುವವರು ಎಂದರ್ಥ.
Ghosting: ಸಂವಹನವನ್ನು ಇದಕ್ಕಿದ್ದಂತೆಯೇ ಕಡಿಮೆ ಮಾಡುವುದು/ ಮಾತನಾಡುತ್ತಿರುವಾಗಲೇ ಮಾತು ನಿಲ್ಲಿಸುವುದು.
Yeet: ಬಲವಾಗಿ ಯಾವುದನ್ನಾದರೂ ಎಸೆಯುವುದು, ಎತ್ತಿ ಬಿಸಾಕುವುದು












Click it and Unblock the Notifications