ತವರಿಗೆ ಬಂದ ಗೀತಾ ಪಾಲಕರು ಯಾರು? ಉತ್ತರ ಸಿಕ್ಕಿಲ್ಲ
ನವದೆಹಲಿ, ನವೆಂಬರ್. 19: ಪಾಕಿಸ್ತಾನದಿಂದ ತವರಿಗೆ ಆಗಮಿಸಿದ್ದ ಗೀತಾ ಪಾಲಕರ ಕುರಿತಾಗಿ ಎದ್ದಿದ್ದ ಅನುಮಾನಗಳಿಗೆ ಕೇಂದ್ರ ಸರ್ಕಾರ ಶುಕ್ರವಾರ ತೆರೆ ಎಳೆದಿದೆ.
ಡಿಎನ್ ಎ ವರದಿ ಬಂದಿದ್ದು ಪಾಲಕರು ಎಂದು ಹೇಳಿಕೊಂಡಿದ್ದ ಬಿಹಾರದ ಮಹಾತೋ ಕುಟುಂಬಕ್ಕೆ ಗೀತಾ ಡಿಎನ್ ಎ ಹೊಂದಿಕೆಯಾಗಿಲ್ಲ. ಈ ಮೂಲಕ ಗೀತಾ ಪಾಲಕರು ಯಾರು? ಎಂಬ ಪ್ರಶ್ನೆ ಹಾಗೆ ಉಳಿದುಕೊಂಡಿದೆ.[ಭಾರತಕ್ಕೆ ಬಂದ ಗೀತಾ]

ಸದ್ಯ ಇಂದೋರ್ ನಲ್ಲಿ ವಾಸ ಮಾಡುತ್ತಿರುವ ಗೀತಾ ಅವರನ್ನು ನವೆಂಬರ್ 23 ರಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.[ಭಜರಂಗಿ ಭಾಯಿಜಾನ್ ಕತೆ ಕೇಳ್ಕೊಂಡು ಬನ್ನಿ]
ಎಐಎಂಎಸ್ ನಡೆಸಿದ ಡಿಎನ್ ಎ ಟೆಸ್ಟ್ ಫಲಿತಾಂಶಗಳು ಹೊಂದಿಕೆಯಾಗಿಲ್ಲ. ಮೂಕ ಮತ್ತು ಕಿವುಡ ಹುಡುಗಿ ಗೀತಾ ಮೊದಲಿಗೆ ಮಹಾತೋ ಕುಟುಂಬವನ್ನು ತನ್ನ ಕುಟುಂಬ ಎಂದಿದ್ದಳು. 13 ವರ್ಷಗಳ ಹಿಂದೆ ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಗೀತಾ ಅಕ್ಟೋಬರ್ 26 ರಂದು ತಾಯಿ ನಾಡಿಗೆ ಆಗಮಿಸಿದ್ದರು.












Click it and Unblock the Notifications