ವಾಯುಪಡೆಯ ತೇಜಸ್ ಎಂಜಿನ್‌ಗಳಿಗೆ ಭಾರತದಲ್ಲೇ ಡಿಪೋ: IAF ಜೊತೆ ಜಿಇ ಒಪ್ಪಂದ

ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ 'ತೇಜಸ್' ನಲ್ಲಿ ಬಳಕೆಯಾಗುವ F404-IN20 ಇಂಜಿನ್‌ಗಳ ಲಭ್ಯತೆ ಮತ್ತು ನಿರ್ವಹಣೆಗೆ ಉತ್ತೇಜನ ನೀಡಲು ರಕ್ಷಣಾ ಸಚಿವಾಲಯ ಪ್ಲ್ಯಾನ್ ಮಾಡಿಕೊಂಡಿದೆ. ಈ ಉದ್ದೇಶದಿಂದ ದೇಶದಲ್ಲಿ ಇಂಜಿನ್‌ಗಳ ನಿರ್ವಹಣೆ ಡಿಪೋ ಸೌಲಭ್ಯವನ್ನು ಸ್ಥಾಪಿಸಲು ಜಿಇ ಏರೋಸ್ಪೇಸ್ ಜೊತೆಗೆ ಭಾರತೀಯ ವಾಯುಪಡೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಭವಿಷ್ಯದಲ್ಲಿ ವಿದೇಶಗಳ ಮೇಲಿನ ಅವಲಂಬನೆ ತಪ್ಪಲಿದೆ.

ಸ್ವದೇಶಿ ರಕ್ಷಣಾ ವ್ಯವಸ್ಥೆಗೆ ಬಲ

ಈ ಘಟಕವನ್ನು ಜಿಇ ಏರೋಸ್ಪೇಸ್‌ ನ ತಾಂತ್ರಿಕ ನೆರವಿನೊಂದಿಗೆ ಭಾರತೀಯ ವಾಯುಪಡೆಯು ಸ್ಥಾಪಿಸಲಿದೆ. ಇದು ಭಾರತದ ಸ್ವದೇಶಿ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಬಲ ನೀಡುವ ನಿರೀಕ್ಷೆಯಿದೆ. ಈ ಘಟಕವು ಕಾರ್ಯಾರಂಭ ಮಾಡಿದ ನಂತರ, ದುರಸ್ತಿಗಾಗಿ ವಿದೇಶಿ ಕೇಂದ್ರಗಳ ಮೇಲೆ ಅವಲಂಬಿತವಾಗುವ ಅಗತ್ಯ ಕ್ರಮೇಣ ತಪ್ಪಲಿದೆ. ಇದು ಇಂಜಿನ್ ದುರಸ್ತಿಯ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

GE Aerospace

ಬಿಡಿಭಾಗ, ವಿಶೇಷ ಉಪಕರಣ ಪೂರೈಕೆ

ಈ ಡಿಪೋ ಘಟಕದ ಮಾಲೀಕತ್ವ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಾಯುಪಡೆಯೇ ನಿರ್ವಹಿಸಲಿದೆ. ಜಿಇ ಏರೋಸ್ಪೇಸ್ ತಾಂತ್ರಿಕ ಮಾಹಿತಿ, ತರಬೇತಿ, ಪೂರಕ ಸಿಬ್ಬಂದಿ ಹಾಗೂ ಅಗತ್ಯ ಬಿಡಿಭಾಗಗಳು ಮತ್ತು ವಿಶೇಷ ಉಪಕರಣಗಳನ್ನು ಒದಗಿಸಲಿದೆ. ಈ ಸಹಯೋಗವು ಜಿಇ ಏರೋಸ್ಪೇಸ್ ಮತ್ತು ಭಾರತೀಯ ವಾಯುಪಡೆಯ ನಡುವಿನ ನಾಲ್ಕು ದಶಕಗಳ ಸುದೀರ್ಘ ಪಾಲುದಾರಿಕೆಯ ಮುಂದಿನ ಮಹತ್ವದ ಹೆಜ್ಜೆಯಾಗಿದೆ.

ಒಪ್ಪಂದದ ಬಳಿಕ ಯೋಜನೆ ಕುರಿತು ಜಿಇ ಏರೋಸ್ಪೇಸ್‌ ನ ಡಿಫೆನ್ಸ್ ಆಂಡ್ ಸಿಸ್ಟಮ್ಸ್ ವಿಭಾಗದ ಮಾರಾಟ ಮತ್ತು ವ್ಯವಹಾರ ಅಭಿವೃದ್ಧಿ ಉಪಾಧ್ಯಕ್ಷೆ ರೀಟಾ ಫ್ಲಾಹರ್ಟಿ ಮಾತನಾಡಿದರು. "ಭಾರತೀಯ ಸಶಸ್ತ್ರ ಪಡೆಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ. ತೇಜಸ್ ವಿಮಾನಗಳನ್ನು ಸ್ಥಳೀಯವಾಗಿ ನಿರ್ವಹಿಸುವ ಸಾಮರ್ಥ್ಯ ಹೆಚ್ಚಿಸಲು ಮಾರ್ಗದರ್ಶನ ನೀಡುತ್ತಲೇ ಇರುತ್ತೇವೆ ಎಂದರು.

ಭವಿಷ್ಯದಲ್ಲಿ ಈ ನೂತನ ಡಿಪೋ ಘಟಕದ ಮೂಲಕ, ನಾವು ಭಾರತೀಯ ವಾಯುಪಡೆಗೆ F404-IN20 ಇಂಜಿನ್‌ ಗಳು ನಿರಂತರವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಿದ್ದೇವೆ ಮತ್ತು ಅವರ ರಕ್ಷಣಾ ಅಗತ್ಯಗಳಿಗೆ ಪೂರಕವಾದ ಅತ್ಯಾಧುನಿಕ ತಂತ್ರಜ್ಞಾನವು ಅವರಿಗೆ ಸುಲಭವಾಗಿ ಸಿಗುವಂತೆ ಮಾಡುತ್ತೇವೆ ಎಂದು ಒಪ್ಪಂದ ಕುರಿತು ವಿವರಿಸಿದರು.

ಜಿಇ ಏರೋಸ್ಪೇಸ್ ಸಂಸ್ಥೆಯು ವಾಣಿಜ್ಯ ಮತ್ತು ಮಿಲಿಟರಿ ವಿಮಾನಯಾನ ಕ್ಷೇತ್ರಗಳ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ನಿರ್ವಹಣೆ ಸೇರಿದಂತೆ ಭಾರತದ ಏರೋಸ್ಪೇಸ್ ವಿಭಾಗವನ್ನು ಅಭಿವೃದ್ಧಿಪಡಿಸಲಾಗುವುದು. ಎಂಜಿನಿಯರಿಂಗ್ ನಾಯಕರನ್ನು ರೂಪಿಸುವ ಕಂಪನಿಯ ಎರಡು ವರ್ಷಗಳ 'ಎಡಿಸನ್ ಎಂಜಿನಿಯರಿಂಗ್ ಡೆವಲಪ್‌ ಮೆಂಟ್ ಪ್ರೋಗ್ರಾಂ'ನಿಂದ ಈಗಾಗಲೇ 150 ಎಂಜಿನಿಯರ್‌ ಗಳು ತೇರ್ಗಡೆ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.

5,000ಕ್ಕೂ ಹೆಚ್ಚು ಜನರಿಗೆ ಕೌಶಲ್ಯ

ಇನ್ನೂ ಕಳೆದ ಹತ್ತು ವರ್ಷಗಳಲ್ಲಿ ಕೈಗೊಂಡ ಹಲವು ಕೌಶಲ್ಯ ಅಭಿವೃದ್ಧಿ ಯೋಜನೆಗಳು ಪುಣೆಯಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ 5,000ಕ್ಕೂ ಹೆಚ್ಚು ಜನರಿಗೆ ಪ್ರಮುಖ ಉತ್ಪಾದನಾ ಕೌಶಲ್ಯಗಳಲ್ಲಿ ತರಬೇತಿ ನೀಡಲು ಸಹಾಯ ಮಾಡಿವೆ. ಸೆಪ್ಟೆಂಬರ್ 2025 ರಲ್ಲಿ, ಜಿಇ ಏರೋಸ್ಪೇಸ್ ಫೌಂಡೇಶನ್ ಯುನೈಟೆಡ್ ವೇ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ 'ನೆಕ್ಸ್ಟ್ ಎಂಜಿನಿಯರ್ಸ್' ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ನಾಲ್ಕು ವರ್ಷಗಳ ಕಾಲೇಜು ಮತ್ತು ವೃತ್ತಿ ಸಿದ್ಧತೆ ಯೋಜನೆಯು 4,000 ಯುವ ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ನೆರವಾಗಲಿದೆ ಎಂದು ತಿಳಿಸಿದರು.

ಯುದ್ಧ ವಿಮಾನಗಳಿಗೆ ಶಕ್ತಿ

ತೇಜಸ್ ವಿಮಾನಗಳಲ್ಲದೆ, ಜಿಇ ಏರೋಸ್ಪೇಸ್ ಇಂಜಿನ್‌ ಗಳು ಭಾರತೀಯ ನೌಕಾಪಡೆಯ P-8I ಕಡಲ ಗಸ್ತು ವಿಮಾನಗಳು ಮತ್ತು MH60R ಹೆಲಿಕಾಪ್ಟರ್‌ ಗಳಿಗೆ ಹಾಗೂ ಭಾರತೀಯ ವಾಯುಪಡೆಯ AH-64 ಅಪಾಚೆ ಹೆಲಿಕಾಪ್ಟರ್‌ ಗಳಿಗೆ ಶಕ್ತಿ ತುಂಬುತ್ತಿವೆ. ಹಾಗೆಯೇ, ವಾಯುಪಡೆಯ LM2500 ಮರೈನ್ ಗ್ಯಾಸ್ ಟರ್ಬೈನ್‌ ಗಳು ಐಎನ್‌ಎಸ್ ವಿಕ್ರಾಂತ್ ಯುದ್ಧ ವಿಮಾನ ವಾಹಕ ನೌಕೆ ಮತ್ತು P-17 ಶಿವಾಲಿಕ್ ಯುದ್ಧನೌಕೆಗಳಿಗೆ ಕೂಡ ಶಕ್ತಿ ನೀಡುತ್ತಿವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+