Get Updates
Get notified of breaking news, exclusive insights, and must-see stories!

G20 Summit 2023 Live: ಜಿ20 ಶೃಂಗಸಭೆ ಮುಕ್ತಾಯ

ನವದೆಹಲಿ, ಸೆಪ್ಟಂಬರ್ 10: ಹದಿನೆಂಟನೇ ಜಿ 20 ಶೃಂಗಸಭೆಯ ಎರಡನೇ ದಿನದ ಅಧಿವೇಶನ ಯಶಸ್ವಿಯಾಗಿ ಮುಗಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ಸಮಾರೋಪ ಭಾಷಣದ ಮೂಲಕ ಭಾರತದ ರಾಜಧಾನಿ ದೆಹಲಿಯಲ್ಲಿ ನಡೆದ G20 ಶೃಂಗಸಭೆಯು ಮುಕ್ತಾಯಗೊಂಡಿದೆ ಎಂದು ಘೋಷಣೆ ಮಾಡಿದರು. ಜಿ-20 ರಾಷ್ಟ್ರಗಳ ಪ್ರಸ್ತುತ ಅಧ್ಯಕ್ಷರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯ ಸಮಾರೋಪದಲ್ಲಿ ಬ್ರೆಜಿಲ್‌ಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದರು. ಜಿ20ರ ಸಮಾರೋಪ ಭಾಷಣದಲ್ಲಿ ಪ್ರಧಾನಿ ಮೋದಿ, 'ನಾನು ಇಡೀ ಜಗತ್ತಿನಲ್ಲಿ ಭರವಸೆ ಮತ್ತು ಶಾಂತಿಯನ್ನು ಹರಡಲು ಬಯಸುತ್ತೇನೆ' ಎಂದು ಹೇಳಿದರು.

G20 Summit 2023 Delhi Live Updates On 10th Sep G20 Leaders Meetings Latest News Highlights in Kannada

Sep 10, 2023, 6:50 pm IST

ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಟ್ವೀಟ್

ಭಾನುವಾರ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಮುಕ್ತಾಯದ ನಂತರ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಎಕ್ಸ್‌ನಲ್ಲಿ ಹೀಗೆ ಬರೆದಿದ್ದಾರೆ, "ಭಾರತದೊಂದಿಗಿನ ಬಲವಾದ ಪಾಲುದಾರಿಕೆಯು ಯುರೋಪ್‌ಗೆ ಅತ್ಯುನ್ನತವಾಗಿದೆ. ನಮ್ಮ ಟ್ರೇಡ್ ಮತ್ತು ಟೆಕ್ ಕೌನ್ಸಿಲ್ ಕಾರ್ಯರೂಪಕ್ಕೆ ಬರಲು ಸಂತೋಷವಾಗಿದೆ. ಐತಿಹಾಸಿಕ ಯೋಜನೆಯಾದ ಭಾರತ - ಮಧ್ಯಪ್ರಾಚ್ಯ - ಯುರೋಪ್ ಆರ್ಥಿಕ ಕಾರಿಡಾರ್ ಪ್ರಾರಂಭಿಸಲು ನಾವು ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿಯನ್ನು ಎದುರು ನೋಡುತ್ತಿದ್ದೇವೆ. ಜಿ20 ನ ನಿಮ್ಮ ಕೌಶಲ್ಯಪೂರ್ಣ ನಾಯಕತ್ವಕ್ಕೆ ಧನ್ಯವಾದಗಳು." ಎಂದು ಹೇಳಿದ್ದಾರೆ.
Sep 10, 2023, 6:28 pm IST

ಬ್ರೆಜಿಲ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರೊಂದಿಗೆ ಜಿ20 ಶೃಂಗಸಭೆಯ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ಜಿ 20 ಶೃಂಗಸಭೆ ನಡೆಯಲಿದೆ, ಶನಿವಾರ, ಪ್ರಧಾನಿ ಮೋದಿ ಅವರು ಬ್ರೆಜಿಲ್‌ಗೆ ವಿಧ್ಯುಕ್ತವಾದ ಗ್ಯಾವೆಲ್ ಅನ್ನು ಹಸ್ತಾಂತರಿಸಿದ್ದರು. "ನಾನು ಬ್ರೆಜಿಲ್ ಅಧ್ಯಕ್ಷ ಮತ್ತು ನನ್ನ ಸ್ನೇಹಿತ ಲುಲಾ ಡಾ ಸಿಲ್ವಾ ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರಿಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಲು ಬಯಸುತ್ತೇನೆ" ಎಂದು ಮೋದಿ ಹೇಳಿದರು.
Sep 10, 2023, 6:27 pm IST

ದಕ್ಷಿಣ ಕೊರಿಯಾ ಅಧ್ಯಕ್ಷರ ಬಗ್ಗೆ ಮೋದಿ ಟ್ವೀಟ್

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯ ನಂತರ, ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋಡಿ "ವಿಸ್ತೃತ ಚರ್ಚೆಗಳು" ನಡೆದವು ಎಂದು ಹೇಳಿದರು. "ಅಧ್ಯಕ್ಷ ಯೂನ್ ಸುಕ್ ಯೋಲ್ ಅವರೊಂದಿಗಿನ ಚರ್ಚೆಗಳು ವ್ಯಾಪಕವಾಗಿದ್ದವು. ದ್ವಿಪಕ್ಷೀಯ ಸಂಬಂಧಗಳ ಸಂಪೂರ್ಣ ಪರಿಸ್ಥಿತಿಗಳನ್ನು ಅನ್ನು ಪರಿಶೀಲಿಸಿದ ನಂತರ, ಭಾರತ ಮತ್ತು ಕೊರಿಯಾ ಗಣರಾಜ್ಯದ ನಡುವಿನ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ನಾವು ಒಪ್ಪಿಕೊಂಡಿದ್ದೇವೆ ಎಂದು ಮೋದಿ ಎಕ್ಸ್‌ (ಟ್ವಿಟರ್) ನಲ್ಲಿ ಬರೆದಿದ್ದಾರೆ.
Sep 10, 2023, 6:21 pm IST

ಭಾರತವನ್ನು ಅಭಿನಂದಿಸಿದ ಗಿಲ್ಬರ್ಟ್ ಎಫ್. ಹೌಂಗ್ಬೊ

ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಡೈರೆಕ್ಟರ್ ಜನರಲ್ ಗಿಲ್ಬರ್ಟ್ ಎಫ್. ಹೌಂಗ್ಬೊ ಶನಿವಾರ ಅಂಗೀಕರಿಸಲಾದ "ಜಿ20 ಘೋಷಣೆ" ಗಾಗಿ ಭಾರತೀಯ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ. "ಈ ಘೋಷಣೆಗಾಗಿ ನಾನು ಭಾರತೀಯ ಅಧ್ಯಕ್ಷರನ್ನು ಅಭಿನಂದಿಸಲು ಬಯಸುತ್ತೇನೆ. ಮಾತುಕತೆ ನಡೆಸುವುದು ಸುಲಭವಲ್ಲ ಆದರೆ ಆ ವೇಗದ ಒಮ್ಮತವು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ನನಗೆ ಸಂತೋಷವಾಯಿತು" ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಮಹಾನಿರ್ದೇಶಕರು ಹೇಳಿದ್ದಾರೆ. "ಒಂದು ಗ್ರಹ, ಒಂದು ಕುಟುಂಬ, ಒಂದು ಭವಿಷ್ಯ ಮಾತ್ರವಲ್ಲದೆ ನಾವು ಇಡೀ ಆರ್ಥಿಕತೆಯನ್ನು, ಇಡೀ ಜೀವನವನ್ನು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಹೆಚ್ಚಿನ ಬಳಕೆಗೆ ಚಾಲನೆ ಮಾಡುವ ಭವಿಷ್ಯವನ್ನು ನೋಡುತ್ತಿದ್ದೇವೆ." ಎಂದು ಹೇಳಿದ್ದಾರೆ.
Sep 10, 2023, 5:57 pm IST

ಭಾವುಕರಾದ ಆಫ್ರಿಕನ್ ಯೂನಿಯನ್ ಅಧ್ಯಕ್ಷ

ಆಫ್ರಿಕನ್ ಯೂನಿಯನ್ (AU) ಜಿ20 ಯ ಖಾಯಂ ಸದಸ್ಯನಾದ ಬಗ್ಗೆ ಅಧ್ಯಕ್ಷ ಅಜಲಿ ಅಸ್ಸೌಮಾನಿ ಮಾತನಾಡಿ, "ನನಗೆ ಅಳು ಬರುವಂತಾಗಿತ್ತು. ಇದು ಒಂದು ದೊಡ್ಡ ಭಾವನೆ, ಈ ಬಗ್ಗೆ ಚರ್ಚೆ ನಡೆಸಿ ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ನಾವು ನಿರೀಕ್ಷೆ ಮಾಡಿದ್ದೆವು, ಆದರೆ ಶೃಂಗಸಭೆಯ ಪ್ರಾರಂಭದಲ್ಲಿ ನಾವು ಸದಸ್ಯರಾಗಿದ್ದೇವೆ ಎಂದು ಘೋಷಿಸಲಾಯಿತು." ಎಂದು ಭಾವುಕರಾಗಿ ಮಾತನಾಡಿದ್ದಾರೆ. ನವದೆಹಲಿಯಲ್ಲಿ ನಡೆದ ವಿಶ್ವದ ಅತಿದೊಡ್ಡ ಆರ್ಥಿಕತೆಗಳ ನಾಯಕರ ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್ ಶನಿವಾರ ಜಿ20 ಯ ಖಾಯಂ ಸದಸ್ಯರಾದರು, 1999 ರಲ್ಲಿ ರಚಿಸಲ್ಪಟ್ಟ ನಂತರದ ಮೊದಲ ಬಾರಿಗೆ ಹೊಸ ಸದಸ್ಯ ರಾಷ್ಟ್ರವನ್ನು ಸೇರ್ಪಡೆ ಮಾಡಲಾಗಿದೆ.
Sep 10, 2023, 5:32 pm IST

ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, "ದೆಹಲಿಯಲ್ಲಿ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗಿನ ಭೇಟಿ ತುಂಬಾ ಉತ್ತಮವಾಗಿತ್ತು. ಅವರ ಅಭಿಪ್ರಾಯಗಳಿಂದ ಜಿ-20 ಶೃಂಗಸಭೆಯನ್ನು ಉತ್ತಮಗೊಳಿಸಿದ್ದಕ್ಕೆ ಅವರಿಗೆ ಧನ್ಯವಾದಗಳು. ಭಾರತ ಮತ್ತು ಜರ್ಮನಿ ಸ್ವಚ್ಛ ಇಂಧನ, ನಾವೀನ್ಯತೆ ಮತ್ತು ಉತ್ತಮ ಭೂಮಿಯ ಕಡೆಗೆ ಹೇಗೆ ಕೆಲಸ ಮಾಡುವುದನ್ನು ಮುಂದುವರಿಸಬಹುದು ಎನ್ನುವ ಬಗ್ಗೆ ಚರ್ಚಿಸಲಾಗಿದೆ" ಎಂದು ಹೇಳಿದ್ದಾರೆ.
Sep 10, 2023, 4:24 pm IST

'ಪರಮಾಣು ಶಸ್ತ್ರಾಸ್ತ್ರಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ'

ಉಕ್ರೇನ್-ರಷ್ಯಾ ಯುದ್ಧದ ಕುರಿತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಸಭೆಗಳ ಉದ್ದಕ್ಕೂ ರಷ್ಯಾದ ಸೈನ್ಯವನ್ನು ಉಕ್ರೇನ್ ನಿಂದ ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು ಎಂದು ಅವರು ಹೇಳಿದರು. ರಷ್ಯಾ ಪರಮಾಣು ಬೆದರಿಕೆಯನ್ನು ಒಡ್ಡುತ್ತದೆ, ಅದರ ಬಳಕೆಯನ್ನು ಬಿಡಿ ಎಂದು ನಾವು ನಮ್ಮ ನಿಲುವನ್ನು ಹೇಳಿದ್ದೇವೆ. ಪರಮಾಣು ಶಸ್ತ್ರಾಸ್ತ್ರಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಸಂಘರ್ಷದ ಅಡಿಯಲ್ಲಿ ದುರ್ಬಲ ಜನರಿಗೆ ಜಾಗತಿಕ ಸಮುದಾಯದಿಂದ ಸಹಾಯದ ಅವಶ್ಯಕತೆಯನ್ನು ನಾನು ತೋರಿಸಿದ್ದೇನೆ ಎಂದರು.
Sep 10, 2023, 2:37 pm IST

ನವೆಂಬರ್‌ನಲ್ಲಿ ಜಿ-20 ವರ್ಚುವಲ್ ಅಧಿವೇಶನವನ್ನು ಆಯೋಜಿಸಲು ಪ್ರಧಾನಿ ಮೋದಿ ಪ್ರಸ್ತಾಪ

ನಿಮಗೆಲ್ಲರಿಗೂ ತಿಳಿದಿರುವಂತೆ 2023ರ ನವೆಂಬರ್‌ವರೆಗೆ ಜಿ20 ಅಧ್ಯಕ್ಷರಾಗುವ ಜವಾಬ್ದಾರಿ ಭಾರತಕ್ಕಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಎರಡು ದಿನಗಳಲ್ಲಿ ನೀವೆಲ್ಲರೂ ಅನೇಕ ಸಲಹೆಗಳನ್ನು ಮತ್ತು ಪ್ರಸ್ತಾಪಗಳನ್ನು ನೀಡಿದ್ದೀರಿ. ನಾವು ನವೆಂಬರ್ ಅಂತ್ಯದಲ್ಲಿ G20 ನ ವರ್ಚುವಲ್ ಅಧಿವೇಶನವನ್ನು ನಡೆಸಬೇಕೆಂದು ನಾನು ಪ್ರಸ್ತಾಪಿಸುತ್ತೇನೆ. ಆ ವರ್ಚುವಲ್ ಅಧಿವೇಶನದಲ್ಲಿ ಈ ಶೃಂಗಸಭೆಯಲ್ಲಿ ನಿರ್ಧರಿಸಿದ ವಿಷಯಗಳನ್ನು ನಾವು ಪರಿಶೀಲಿಸಬಹುದು. ನೀವೆಲ್ಲರೂ ವರ್ಚುವಲ್ ಸೆಷನ್‌ಗೆ ಸೇರುತ್ತೀರಿ ಎಂದು ನಾನು ಭಾವಿಸುತ್ತೇನೆ. ಇದರೊಂದಿಗೆ ನಾನು G20 ಶೃಂಗಸಭೆಯನ್ನು ಮುಕ್ತಾಯಗೊಳಿಸುತ್ತೇನೆ ಎಂದು ಘೋಷಿಸುತ್ತೇನೆ ಎಂದರು.
Sep 10, 2023, 2:27 pm IST

ಜಿ20 ಶೃಂಗಸಭೆ ಮುಕ್ತಾಯ

ಪಿಎಂ ಮೋದಿ ಜಿ 20 ಶೃಂಗಸಭೆಯ ಮುಕ್ತಾಯವನ್ನು ಘೋಷಿಸಿದರು, ನವೆಂಬರ್‌ನಲ್ಲಿ ವರ್ಚುವಲ್ ವಿಮರ್ಶೆ ಅಧಿವೇಶನವನ್ನು ಪ್ರಸ್ತಾಪಿಸಿದರು.
Sep 10, 2023, 2:26 pm IST

ಜಿ 20: ಖಾದಿ ಆತ್ಮನಿರ್ಭರ ಭಾರತದ ಸಂಕೇತ

ಭಾರತದಲ್ಲಿ ಜಿ 20- ದೆಹಲಿಯ ರಾಜ್‌ಘಾಟ್‌ನಲ್ಲಿ ದೇಶದ ಮುಖ್ಯಸ್ಥರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ ಖಾದಿ ಶಾಲು ಕುರಿತು ಖಾದಿ ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್, "ಖಾದಿ 'ಆತ್ಮನಿರ್ಭರ ಭಾರತ'ದ ಸಂಕೇತವಾಗಿದೆ... ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಮತ್ತು ಇಂದು ವಿದೇಶಿ ಅತಿಥಿಗಳಿಗೆ ಖಾದಿಯನ್ನು ಉಡುಗೊರೆಯಾಗಿ ನೀಡುತ್ತಿರುವುದು ನಮ್ಮ ದೇಶಕ್ಕೆ ಹೆಮ್ಮೆಯ ವಿಷಯ... ಈ ಪ್ರದರ್ಶನದಲ್ಲಿರುವ ಖಾದಿ ಸ್ಟಾಲ್ ವಿದೇಶಿ ಪ್ರತಿನಿಧಿಗಳ ಆಕರ್ಷಣೆಯ ಕೇಂದ್ರವಾಗಿದೆ... ಖಾದಿ ಗ್ರಾಮೋದ್ಯೋಗದ ಎಲ್ಲಾ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ... ಪ್ರಧಾನಿ ಯಾವಾಗಲೂ ಖಾದಿಯ ಮೇಲೆ ವಿಶೇಷ ಪ್ರೀತಿಯನ್ನು ತೋರಿಸುತ್ತಾರೆ... ಹೆಚ್ಚು ಗಮನ ಸೆಳೆಯುವ ಉತ್ಪನ್ನವೆಂದರೆ ಖಾದಿ ಜಾಕೆಟ್ ಮತ್ತು ಕುರ್ತಾ... ವಿದೇಶಿ ಪ್ರತಿನಿಧಿಗಳಲ್ಲಿ ಮೋದಿ ಜಾಕೆಟ್ ಬಹಳ ಪ್ರಸಿದ್ಧವಾಗಿದೆ... ನಾವು ಕಳೆದ ಹಣಕಾಸು ವರ್ಷದಲ್ಲಿ 9 ಲಕ್ಷದ 45 ಸಾವಿರ ಜನರಿಗೆ ಉದ್ಯೋಗ ನೀಡಿದ್ದೇವೆ... ಮುಂಬರುವ ವರ್ಷದಲ್ಲಿ ಈ ದಾಖಲೆಗಳನ್ನು ಮುರಿಯಲಿದ್ದೇವೆ..." ಎಂದರು.
Sep 10, 2023, 1:41 pm IST

ಭಾರತದಲ್ಲಿ G20: 'ಇದು ಸಂತೋಷದ ಕ್ಷಣ' ಕಲಾವಿದೆ ವಿದುಷಿ ಶಶಿಕಲಾ ದಾನಿ

ಭಾರತದಲ್ಲಿ G20: ಜಲ ತರಂಗದ ಪ್ರಚಾರಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆ ಮತ್ತು ನಮ್ಮಂತಹ ಕಲಾವಿದರಿಗೆ ಹೊಸ ಅವಕಾಶಗಳು ಸಿಗುತ್ತಿರುವುದು ನಿಜಕ್ಕೂ ಸಂತೋಷದ ಕ್ಷಣ. ಸರ್ಕಾರವು ಅಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದೆ, ಇದು ನಮಗೆ ಒಂದು ದೊಡ್ಡ ಅವಕಾಶವನ್ನು ಒದಗಿಸುತ್ತದೆ ಎಂದು ಕರ್ನಾಟಕದ ಹುಬ್ಬಳ್ಳಿ ಜಲ ತರಂಗ ಕಲಾವಿದೆ ವಿದುಷಿ ಶಶಿಕಲಾ ದಾನಿ ಹೇಳಿದರು.
Sep 10, 2023, 1:37 pm IST

ಜಿ20: Rio de Janeiro Summit

ಭಾರತದಲ್ಲಿ ಜಿ20: ಬ್ರೆಜಿಲ್‌ನ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, "ತಾಂತ್ರಿಕ ಗುಂಪುಗಳು ಮತ್ತು ಪೂರ್ವಸಿದ್ಧತಾ ಮಂತ್ರಿ ಸಭೆಗಳನ್ನು ನಮ್ಮ ದೇಶದ ಎಲ್ಲಾ ಐದು ಪ್ರದೇಶಗಳಲ್ಲಿ ಹಲವಾರು ನಗರಗಳಲ್ಲಿ ಆಯೋಜಿಸಲಾಗುವುದು... ನಿಮ್ಮೆಲ್ಲರನ್ನು ಸ್ವಾಗತಿಸಲು ನನಗೆ ತುಂಬಾ ಗೌರವವಿದೆ. ನವೆಂಬರ್ 2024 ರಲ್ಲಿ ರಿಯೊ ಡಿ ಜನೈರೊ ಶೃಂಗಸಭೆ ನಡೆಯಲಿದೆ" ಎಂದರು.
Sep 10, 2023, 1:29 pm IST

ಜಿ20: 'ಇದೊಂದು ಉತ್ತಮ ಅನುಭವ' ಯುಕೆ ಪ್ರತಿನಿಧಿ ಫ್ರೆಡ್ಡಿ

ಭಾರತದಲ್ಲಿ ಜಿ 20: ಭಾರತ್ ಮಂಟಪದಲ್ಲಿ ನಡೆದ ಪ್ರದರ್ಶನದಲ್ಲಿ ಯುಕೆ ಪ್ರತಿನಿಧಿ ಫ್ರೆಡ್ಡಿ ಮಾತನಾಡಿ, "ಇದೊಂದು ಉತ್ತಮ ಅನುಭವ. ಸಂಸ್ಕೃತಿಯಲ್ಲಿನ ಎಲ್ಲಾ ವ್ಯತ್ಯಾಸಗಳು ಮತ್ತು ಭಾರತದಾದ್ಯಂತ ಮಾರಾಟವಾಗುವ ಐತಿಹಾಸಿಕ ಸರಕುಗಳನ್ನು ನೋಡಲು ಸಂತೋಷವಾಗಿದೆ. ನಾವು ಬಹಳಷ್ಟು ವಿಷಯಗಳನ್ನು ತೆಗೆದುಕೊಂಡು ಹಿಂತಿರುಗುತ್ತೇವೆ'' ಎಂದು ಹೇಳಿದರು.
Sep 10, 2023, 12:22 pm IST

ಭಾರತದಲ್ಲಿ ಜಿ20: ಗಾಲಾ ಔತಣಕೂಟದಲ್ಲಿ 'ಗಂಧರ್ವ ಆಟೋದ್ಯಂ'

ಭಾರತದಲ್ಲಿ ಜಿ20: ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಗಾಲಾ ಔತಣಕೂಟದಲ್ಲಿ ಭಾರತ ತನ್ನ ವೈವಿಧ್ಯಮಯ ಸಂಗೀತ ಪರಂಪರೆಯನ್ನು ಜಗತ್ತಿಗೆ ಪ್ರದರ್ಶಿಸಿತು. ಈ ಔತಣಕೂಟ ದೇಶಾದ್ಯಂತದ ಸಾಂಪ್ರದಾಯಿಕ ಸಂಗೀತದ ಬಳಕೆಗೆ ಸಾಕ್ಷಿಯಾಯಿತು. ಇಲ್ಲಿ ಗಂಧರ್ವ ಆಟೋದ್ಯಂ ನುಡಿಸಲಾಯಿತು. ಇದು ಹಿಂದೂಸ್ತಾನಿ, ಕರ್ನಾಟಕ, ಜಾನಪದ ಮತ್ತು ಸಮಕಾಲೀನ ಸಂಗೀತವನ್ನು ಶಾಸ್ತ್ರೀಯ ವಾದ್ಯಗಳ ಸಮೂಹದೊಂದಿಗೆ ಪ್ರದರ್ಶಿಸ್ಪಟ್ಟಿತು. ಭಾರತದಾದ್ಯಂತದ ಸಂಗೀತ ವಾದ್ಯಗಳ ಸೊಗಸಾದ ಸ್ವರಮೇಳವನ್ನು ಒಳಗೊಂಡಿರುವ ಒಂದು ಅನನ್ಯ ಸಂಗೀತ ಸಂಯೋಜನೆಯಾಗಿದೆ.
Sep 10, 2023, 11:39 am IST

ಭಾರತದಲ್ಲಿ ಜಿ20: ಹರ್ಷ್ ವರ್ಧನ್ ಶ್ರಿಂಗ್ಲಾ ಹೇಳಿಕೆ

ಭಾರತದಲ್ಲಿ ಜಿ 20: ಭಾರತದ ಜಿ20 ಪ್ರೆಸಿಡೆನ್ಸಿಯ ಮುಖ್ಯ ಸಂಯೋಜಕ ಹರ್ಷ್ ವರ್ಧನ್ ಶ್ರಿಂಗ್ಲಾ, "ಭಾರತದಲ್ಲಿ ನಡೆಯುತ್ತಿರುವ ಜಿ20 ಮಹತ್ವದ್ದಾಗಿದೆ. ಏಕೆಂದರೆ ಇದು ದಾಖಲೆಯಲ್ಲಿ ಒಮ್ಮತವನ್ನು ಸಾಧಿಸಲಿದೆ. ನಮ್ಮ ಅಧ್ಯಕ್ಷತೆಯ ಮೊದಲ ದಿನದಂದು ನಮ್ಮ G20 ಪಾಲುದಾರರ ಬೆಂಬಲದೊಂದಿಗೆ ನಾವು ಒಮ್ಮತದ ದಾಖಲೆಯೊಂದಿಗೆ ಬಂದಿದ್ದೇವೆ, ಇದು ಅತ್ಯಂತ ಸಕಾರಾತ್ಮಕ ಸುದ್ದಿಯಾಗಿದೆ " ಎಂದರು.
Sep 10, 2023, 11:27 am IST

ಭಾರತದಲ್ಲಿ ಜಿ 20: ದ್ರೌಪದಿ ಮುರ್ಮು ಆಯೋಜಿಸಿದ್ದ ಡಿನ್ನರ್

ಭಾರತದಲ್ಲಿ ಜಿ 20: ಸೆಪ್ಟೆಂಬರ್ 9 ರಂದು ಅಧ್ಯಕ್ಷೆ ದ್ರೌಪದಿ ಮುರ್ಮು ಆಯೋಜಿಸಿದ್ದ ಗಾಲಾ ಡಿನ್ನರ್ ನಲ್ಲಿ ಪಿಎಂ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ, ಬಿಹಾರ ಸಿಎಂ ನಿತೀಶ್ ಕುಮಾರ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು ಮತ್ತು ಇತರ ನಾಯಕರು ಭಾಗವಹಿಸಿದ್ದರು.
Sep 10, 2023, 11:09 am IST

ನವೀಕರಿಸಬಹುದಾದ ಇಂಧನ ಸಾಮಾರ್ಥ್ಯ 3 ಪಟ್ಟು ಹೆಚ್ಚಿಸಲು ಜಿ20 ಸಮ್ಮತಿ

G20 Summit: ಜಿ-20 ರಾಷ್ಟ್ರಗಳು 2030 ರ ವೇಳೆಗೆ ಜಾಗತಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಲು ಒಪ್ಪಿಕೊಂಡಿವೆ. ಈ ಶತಮಾನದ ಮಧ್ಯದ ವೇಳಗೆ ಅಂದರೆ 2050ರ ಆಸುಪಾಸಿನಲ್ಲಿ ನಿವ್ವಳ ಕಾರ್ಬನ್‌ ಶೂನ್ಯ ಸಾಧಿಸುವ ಬಗ್ಗೆಯೂ ಜಿ-20 ಸಮ್ಮೇಳನದಲ್ಲಿ ಚರ್ಚಿಸಲಾಯಿತು. ಸೆಪ್ಟೆಂಬರ್ 9 ರಂದು ಬಿಡುಗಡೆ ಮಾಡಿದ ಪ್ರಣಾಳಿಕೆಯ ಪ್ರಕಾರ, ಜಿ 20 ಶೃಂಗಸಭೆಯ ಮೊದಲ ದಿನವೇ ಜಿ-20 ಸದಸ್ಯರು ಜಂಟಿ ಹೇಳಿಕೆ ನೀಡಿದ್ದಾರೆ.
Sep 10, 2023, 10:57 am IST

G20: ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

G20 ನಲ್ಲಿ ಆಫ್ರಿಕನ್ ಒಕ್ಕೂಟವನ್ನು ಸೇರಿಸುವುದು ಹೆಚ್ಚು ಅಂತರ್ಗತ ಜಾಗತಿಕ ಸಂಭಾಷಣೆಯತ್ತ ಮಹತ್ವದ ಹೆಜ್ಜೆ ಎಂದು ಪ್ರಧಾನಿ ಮೋದಿ ಹೇಳಿದರು.
Sep 10, 2023, 10:27 am IST

ಅಕ್ಷರಧಾಮ ದೇವಸ್ಥಾನದಲ್ಲಿ ಯುನೈಟೆಡ್ ಕಿಂಗ್‌ಡಂ ಪ್ರಧಾನಿ

ಭಾರತದಲ್ಲಿ ಜಿ 20: ದೆಹಲಿಯ ಅಕ್ಷರಧಾಮ ದೇವಸ್ಥಾನದಲ್ಲಿ ಯುನೈಟೆಡ್ ಕಿಂಗ್‌ಡಂ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ.
Sep 10, 2023, 10:15 am IST

ಅಕ್ಷರಧಾಮ ದೇವಸ್ಥಾನದಲ್ಲಿ ರಿಷಿ ಸುನಕ್ ದಂಪತಿ

ಭಾರತದಲ್ಲಿ ಜಿ 20: ದೆಹಲಿಯ ಅಕ್ಷರಧಾಮ ದೇವಸ್ಥಾನದಲ್ಲಿ ಯುನೈಟೆಡ್ ಕಿಂಗ್‌ಡಂ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ.
Sep 10, 2023, 10:14 am IST

ಜಿ 20: ಸಿಎಂ ಎಂಕೆ ಸ್ಟಾಲಿನ್ ಟ್ವೀಟ್

ಭಾರತದಲ್ಲಿ ಜಿ 20: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾವೇರಿ ಟೇಬಲ್‌ನಲ್ಲಿ ಆಯೋಜಿಸಿದ್ದ ಜಿ 20 ಔತಣಕೂಟದಲ್ಲಿ ಭಾಗವಹಿಸಿದ್ದರು ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
Sep 10, 2023, 9:46 am IST

ರಾಜ್‌ಘಾಟ್‌ನಿಂದ ತೆರಳಿದ ನಾಯಕರು

ಭಾರತದಲ್ಲಿ ಜಿ 20: ಮಹಾತ್ಮಾ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ನಂತರ ದೆಹಲಿಯ ರಾಜ್‌ಘಾಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬಿಡನ್, ಯುಕೆ ಪಿಎಂ ರಿಷಿ ಸುನಕ್ ಹೊರಟ ದೃಶ್ಯ.
Sep 10, 2023, 9:45 am IST

ರಾಜ್‌ಘಾಟ್‌ನಲ್ಲಿ ಮಹಾತ್ಮರಿಗೆ ಗೌರವ ಸಲ್ಲಿಸಿದ ನಾಯಕರು

ಭಾರತದಲ್ಲಿ ಜಿ20: ದೆಹಲಿಯ ರಾಜ್‌ಘಾಟ್‌ನಲ್ಲಿ ಮಹಾತ್ಮರಿಗೆ ಗೌರವ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬಿಡನ್, ಯುಕೆ ಪಿಎಂ ರಿಷಿ ಸುನಕ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಮತ್ತು ಇತರ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು.
Sep 10, 2023, 9:41 am IST

ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಜೋ ಬಿಡನ್

ಭಾರತದಲ್ಲಿ ಜಿ-20: ದೆಹಲಿಯ ರಾಜ್‌ಘಾಟ್‌ಗೆ ಆಗಮಿಸಿದ ಅಮೇರಿಕಾ ಅಧ್ಯಕ್ಷ ಜೋ ಬಿಡನ್ ಮಹಾತ್ಮಾ ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
Sep 10, 2023, 9:39 am IST

ರಾಜ್‌ಘಾಟ್‌ನಲ್ಲಿ ಜಿ20 ನಾಯಕರು

ಭಾರತದಲ್ಲಿ ಜಿ 20: ರಾಜ್‌ಘಾಟ್‌ನಲ್ಲಿ ಜಿ20 ನಾಯಕರು ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿ ಹಾರ ಹಾಕುವ ದೃಶ್ಯಗಳು.
Sep 10, 2023, 9:38 am IST

ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ದ.ಆಫ್ರಿಕಾ ಅಧ್ಯಕ್ಷ

ಭಾರತದಲ್ಲಿ ಜಿ 20: ದೆಹಲಿಯ ರಾಜ್‌ಘಾಟ್‌ಗೆ ಆಗಮಿಸಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ಪುಷ್ಪಗುಚ್ಚವನ್ನು ಅರ್ಪಿಸಿದರು.
Sep 10, 2023, 9:37 am IST

ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಫ್ರೆಂಚ್ ಅಧ್ಯಕ್ಷ

ಭಾರತದಲ್ಲಿ ಜಿ20:ದೆಹಲಿಯ ರಾಜ್‌ಘಾಟ್‌ಗೆ ಆಗಮಿಸಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ಪುಷ್ಪಗುಚ್ಛವನ್ನು ಅರ್ಪಿಸಿದರು.
Sep 10, 2023, 9:36 am IST

ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾದ ಸಚಿವ

ಭಾರತದಲ್ಲಿ ಜಿ 20:ದೆಹಲಿಯ ರಾಜ್‌ಘಾಟ್‌ಗೆ ಆಗಮಿಸಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ಪುಷ್ಪಗುಚ್ಛವನ್ನು ಅರ್ಪಿಸಿದರು.
Sep 10, 2023, 9:24 am IST

ರಾಜ್‌ಘಾಟ್‌ಗೆ ಆಗಮಿಸಿದ ಚೀನಾದ ಪ್ರಧಾನಿ

ಭಾರತದಲ್ಲಿ G-20: ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರು ದೆಹಲಿಯ ರಾಜ್‌ಘಾಟ್‌ಗೆ ಆಗಮಿಸಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
Sep 10, 2023, 9:02 am IST

ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ಟರ್ಕಿಯ ಅಧ್ಯಕ್ಷ

ಭಾರತದಲ್ಲಿ ಜಿ20: ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಲು ದೆಹಲಿಯ ರಾಜ್‌ಘಾಟ್‌ಗೆ ಆಗಮಿಸಿದರು.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+