Andhra Pradesh Assembly Election 2024: ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯ ಸಂಪೂರ್ಣ ವೇಳಾಪಟ್ಟಿ
ಅಮರಾವತಿ, ಮೇ. 11 : ಈ ಬಾರಿಯ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯು ಮೇ 13, 2024 ರಂದು ನಾಲ್ಕನೇ ಹಂತದ ಲೋಕಸಭೆ ಚುನಾವಣೆಯ ಮತದಾನದ ದಿನವೇ ನಡೆಯಲಿದೆ. ಈ ಬಗ್ಗೆ ಭಾರತದ ಚುನಾವಣಾ ಆಯೋಗವು ಮೊದಲೇ ವೇಳಾಪಟ್ಟಿ ಘೋಷಿಸಿದೆ.
ಆಂಧ್ರಪ್ರದೇಶ ವಿಧಾನಸಭೆಯ 175 ಸ್ಥಾನಗಳನ್ನು ಹೊಂದಿದೆ. ಅದರಲ್ಲಿ 29 ಸ್ಥಾನಗಳನ್ನು ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಮತ್ತು ಏಳು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಿಡಲಾಗಿದೆ. 16ನೇ ಆಂಧ್ರ ಪ್ರದೇಶ ವಿಧಾನಸಭೆಗೆ ಮೇ 13 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಜೂನ್ 4, 2024 ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರಬೀಳಲಿದೆ.

ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದ್ದರೆ, ತೆಲುಗು ದೇಶಂ ಪಕ್ಷ (ಟಿಡಿಪಿ) ಎನ್‌ಡಿಎ ಜೊತೆ ಕೈಜೋಡಿಸಲು ನಿರ್ಧರಿಸಿದೆ. 175 ಸ್ಥಾನಗಳಲ್ಲಿ ಟಿಡಿಪಿ 144 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಉಳಿದವುಗಳನ್ನು ಬಿಜೆಪಿ ಮತ್ತು ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ (ಜೆಎಸ್‌ಪಿ)ಕ್ಕೆ ಬಿಟ್ಟುಕೊಟ್ಟಿದೆ.
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ
2024 ರ ಸಾರ್ವತ್ರಿಕ ಚುನಾವಣೆಯ 4 ನೇ ಹಂತದಲ್ಲಿ ಮತದಾನ ಮೇ 13 ರಂದು ನಡೆಯಲಿದೆ. ಅದೇ ದಿನ ಆಂಧ್ರಪ್ರದೇಶ ವಿಧಾನಸಭೆಯ 175 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
- ನಾಮಪತ್ರ ಸಲ್ಲಿಕೆ ಆರಂಭ - ಏಪ್ರಿಲ್ 18
- ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ - ಏಪ್ರಿಲ್ 25
- ನಾಮಪತ್ರ ಪರಿಶೀಲನೆ - ಏಪ್ರಿಲ್ 26
- ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ - ಏಪ್ರಿಲ್ 29
- ಚುನಾವಣಾ ಪ್ರಚಾರಕ್ಕೆ ಕೊನೆಯ ದಿನಾಂಕ - ಮೇ 11
- ಮತದಾನದ ದಿನಾಂಕ - ಮೇ 13
- ಮತ ಎಣಿಕೆಯ ದಿನಾಂಕ - ಜೂನ್ 4

2019 ರ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳನ್ನು ಗಳಿಸಿ ವಿಜಯಶಾಲಿಯಾಗಿದ್ದು, ಟಿಡಿಪಿ ಕೇವಲ 22 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಆಂಧ್ರಪ್ರದೇಶದಲ್ಲಿ ಸರ್ಕಾರ ರಚಿಸಲು ಪಕ್ಷದಕ್ಕೆ ಮ್ಯಾಜಿಕ್ ನಂಬರ್ 88. ಬಹುಮತ ಪಡದ ಸರ್ಕಾರ ಸರ್ಕಾರ ರಚಿಸಲಿದೆ. 175 ವಿಧಾನಸಭಾ ಸ್ಥಾನಗಳು ಒಟ್ಟು 4.80 ಕೋಟಿ ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ.












Click it and Unblock the Notifications