ಎಫ್‌ಟಿಐಐ ವಿದ್ಯಾರ್ಥಿಗಳ 139 ದಿನಗಳ ಪ್ರತಿಭಟನೆ ಅಂತ್ಯ
ಪುಣೆ, ಅಕ್ಟೋಬರ್. 28: ಫಿಲ್ಮ್ ಅಂಡ್ ಟೆಲಿವಿಷನ್ ಆಫ್ ಇಂಡಿಯಾ(ಎಫ್ ಟಿಐಐ) ಅಧ್ಯಕ್ಷ ಸ್ಥಾನದಿಂದ ಗಜೇಂದ್ರ ಚೌಹಾಣ್ ಅವರನ್ನು ಕೆಳಗಿಳಿಸಬೇಕೆಂದು ಪಟ್ಟು ಹಿಡಿದು ಜೂನ್ 12ರಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಬುಧವಾರ ವಿದ್ಯಾರ್ಥಿಗಳು ಮುಕ್ತಾಗೊಳಿಸಿದ್ದಾರೆ. ಕಳೆದ 139 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಅಂತ್ಯವಾಗಿದ್ದು ತರಗತಿಗೆ ಹಾಜರಾಗಿದ್ದಾರೆ.
ಆದರೆ ಸರ್ಕಾರದ ಧೋರಣೆ ವಿರುದ್ಧ ತಮ್ಮ ಶಾಂತಿಯುತ ವಿರೋಧ ಮುಂದುವರಿಯಲಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಎಫ್ ಟಿಐಐ ವಿದ್ಯಾರ್ಥಿ ಮುಖಂಡ ರಾಕೇಶ್ ಶುಕ್ಲಾ ಮುಷ್ಕರವನ್ನು ಅಂತ್ಯ ಮಾಡಿದ್ದೇವೆ. ಆದರೆ ಪ್ರಜಾಪ್ರಭುತ್ವಕ್ಕೆ ಬದ್ಧವಾಗಿ ಮತ್ತು ಶಾಂತಿಯುತವಾಗಿ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದರು.[ಪುಣೆಯಲ್ಲಿ ರಾಹುಲ್ ಗಾಂಧಿ ಜತೆ ಕಾಣಿಸಿಕೊಂಡ ರಮ್ಯಾ!]

ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹಾಗೂ ಇನ್ನಿತರ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಎಫ್ ಟಿಐಐ ವಿದ್ಯಾರ್ಥಿಗಳು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸಹ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದ್ದರು. ವಿದ್ಯಾರ್ಥಿಗಳ ಕ್ರಮವನ್ನು ಗಜೇಂದ್ರ ಚೌಹಾಣ್ ಸ್ವಾಗತಿಸಿದ್ದಾರೆ.












Click it and Unblock the Notifications