Free WiFi: ಇನ್ಮುಂದೆ ವಿಮಾನಗಳಲ್ಲೂ ಸಿಗಲಿದೆ ಫ್ರೀ ವೈಫೈ ಸೌಲಭ್ಯ!
ಹೊಸ ವರ್ಷದ ಬೆನ್ನಲ್ಲೇ ದೇಶದ ವಿಮಾನಯಾನದಲ್ಲಿ ಮಹತ್ವದ ಬದಲಾವಣೆಯಾಗಿದೆ. ಜನ ವಿಮಾನ ಸೇವೆಯಲ್ಲಿ ಆಗಿರುವ ಹೊಸ ಬದಲಾವಣೆಯಿಂದ ಖುಷಿಯಾಗಿದ್ದಾರೆ. ಅಷ್ಟಕ್ಕೂ ಹೊಸ ಬದಲಾವಣೆ ಏನೆಂದರೆ, ವಿಮಾನಗಳಲ್ಲೂ ಇನ್ಮುಂದೆ ವೈಫೈ ಸಿಗಲಿದೆ. ಹೌದು ದೇಶದ ವಿಮಾನಗಳಲ್ಲಿ ಮಹತ್ವದ ಬದಲಾವಣೆ ಆಗಿದೆ. ಈ ಸೇವೆ ಎಲ್ಲಾ ವಿಮಾನಗಳಲ್ಲೂ ಇರಲ್ಲ. ಮುಖ್ಯವಾಗಿ ಏರ್ ಇಂಡಿಯಾದಲ್ಲಿ ಈ ಸೇವೆ ನಿಮಗೆ ಸಿಗಲಿದೆ.
ಏರ್ ಇಂಡಿಯಾ ಟಾಟಾ ಗ್ರೂಪ್ ಸಮೂಹಕ್ಕೆ ಸೇರಿದ ಮೇಲೆ ಹೊಸ ಬದಲಾವಣೆ ಆಗಿದೆ. ಈಗಾಗಲೇ ವಿಮಾನ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಈ ಮೂಲಕ ದೇಶದ ವಿಮಾನಗಳಲ್ಲಿ ಮೊಟ್ಟ ಮೊದಲ ಬಾರಿ ವೈ-ಫೈ ಇಂಟರ್ನೆಟ್ ಸೌಲಭ್ಯ ಕೊಡುತ್ತಿರುವ ವಿಮಾನ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಏರ್ ಇಂಡಿಯಾ ಪಾತ್ರವಾಗಿದೆ.

ಹೌದು ಇನ್ಮುಂದೆ ವಿಮಾನಗಳಲ್ಲೂ ನೀವು ವೈ - ಫೈ ಬಳಸಬಹುದಾಗಿದೆ. ಪ್ರಯಾಣಿಕರಿಗೆ ಒಳ್ಳೆಯ ಅನುಭವಗಳನ್ನು ಹಾಗೂ ಒಳ್ಳೆಯ ಸೇವೆ ಕೊಡುವುದೇ ನಮ್ಮ ಮುಖ್ಯ ಗುರಿಯಾಗಿದೆ. ಹೀಗಾಗಿ ಬದಲಾಗುತ್ತಿರುವ ಅವಶ್ಯಕತೆಗೆ ಅನುಗುಣವಾಗಿ ಹೊಸ ಸೇವೆಗಳನ್ನು ಪರಿಚಯಿಸುತ್ತಿರುವುದಾಗಿ ಏರ್ ಇಂಡಿಯಾ ಹೇಳಿದೆ.
ಇದೀಗ ದೇಶೀಯ ಮಾರ್ಗಗಳ ವಿಮಾನದಲ್ಲಿ ಇನ್‌ಫ್ಲೈಟ್ ವೈಫೈ ಸೇವೆ ಶುರು ಮಾಡಿದೆ. ಡಿಜಿಟಲ್ ಬದಲಾವಣೆಗಳಿಗೆ ತಕ್ಕಂತೆ ಸೇವೆ ಕೊಡುತ್ತಿರುವುದಾಗಿ ಹೇಳಿದೆ. ಏರ್ ಇಂಡಿಯಾ ಪ್ರಯಾಣಿಕರಿಗೆ ಇಂದಿನಿಂದಲೇ (ಜನವರಿ 1) ದೇಶೀಯ ವಿಮಾನಗಳಲ್ಲಿ ವೈಫೈ ಸೇವೆ ಶುರುವಾಗಿದೆ.
ಏರ್ ಇಂಡಿಯಾದ ದೇಶೀಯ ವಿಮಾನಗಳಲ್ಲಿ ವೈ-ಫೈ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಈ ವೈಫೈ ಸೇವೆಯು ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಕನೆಕ್ಟ್ ಆಗಲಿದೆ. ಅಲ್ಲದೆ ವಿಮಾನದಲ್ಲಿ ಹಲವು ಸಾಧನಗಳಿಗೆ ಏಕಕಾಲಕ್ಕೆ ವೈ-ಫೈ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
ಉಚಿತ ಸೇವೆ: ಇನ್ನು ದೇಶದಲ್ಲೇ ಮೊದಲ ಬಾರಿ ವಿಮಾನಗಳಲ್ಲಿ ವೈಫೈ ಸೇವೆಯನ್ನು ಏರ್ ಇಂಡಿಯಾ ಪರಿಚಯಿಸಿದೆ. ಹೀಗಾಗಿ ಹೊಸದಾಗಿ ಪ್ರಾರಂಭಿಸಿರುವ ಉದ್ದೇಶದಿಂದ ವೈಫೈ ಸೇವೆ ಉಚಿತವಾಗಿರಲಿದೆ ಎಂದು ಏರ್ ಇಂಡಿಯಾ ಹೇಳಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ನಿರ್ದಿಷ್ಟ ಮೊತ್ತ ನಿಗದಿ ಮಾಡುವ ಸಾಧ್ಯತೆ ಇದೆ.
ಪ್ರಯಾಣದ ಸಮಯದಲ್ಲಿ ಜನರಿಗೆ ಅನುಕೂಲವಾಗಲಿ ಎನ್ನುವುದು. ಡಿಜಿಟಲ್ ಜಗತ್ತಿಗೆ ತೆರೆದುಕೊಳ್ಳುವುದು ಹಾಗೂ ಹೊಸ ಅನುಭವವನ್ನು ಕೊಡುವುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗಿದೆ. ದೇಶೀಯ ಮಾರ್ಗದಲ್ಲಿ ಸಂಚರಿಸುವ ವಿಮಾನಗಳಲ್ಲಿ ಇನ್‌ಫ್ಲೈಟ್ ವೈಫೈ ಸೇವೆ ಪ್ರಾರಂಭಿಸಲಾಗಿದೆ. ಈ ಸೇವೆ ಪ್ರಾರಂಭಿಸಿದ ಮೊದಲ ವಿಮಾನ ಸಂಸ್ಥೆ ಏರ್ ಇಂಡಿಯಾ ಆಗಿದೆ.
ವೈಫೈ ಸೇವೆ ಬಳಸುವುದು ಹೇಗೆ
ದೇಶದಲ್ಲಿ ವಿಮಾನಗಳಲ್ಲಿ ವೈಫೈ ಸೇವೆ ಎನ್ನುವುದು ಇದೇ ಮೊದಲು. ಹೀಗಾಗಿ, ಇದನ್ನು ಬಳಸುವುದು ಹೇಗೆ ಹಾಗೂ ಇದು ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವ ಕುತೂಹಲ ಜನರಲ್ಲಿ ಇದೆ. ನಾವು ಸಾಮಾನ್ಯವಾಗಿ ವೈಫೈ ಬಳಸುವ ರೀತಿಯಲ್ಲೇ ವಿಮಾನದಲ್ಲೂ ವೈಫೈ ಸೇವೆ ಬಳಸಬಹುದಾಗಿದೆ. ವೈಫೈ ಆಪ್ಷನ್ ಆನ್ ಮಾಡಿದ ಮೇಲೆ ಏರ್ ಇಂಡಿಯಾ ವೈಫೈ ಎನ್ನುವ ನೆಟ್‌ವರ್ಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಮುಂದುವರಿದು ಏರ್‌ಲೈನ್‌ನ ಪೋರ್ಟಲ್‌ಗೆ ಇದು ಕನೆಕ್ಟ್ ಆಗಲಿದೆ. ಕೊನೆಯದಾಗಿ ನಿಮ್ಮ ಪಿಎನ್‌ಆರ್ ಸಂಖ್ಯೆ ಮತ್ತು ಲಾಸ್ಟ್ ನೇಮ್ ನಮೂದಿಸಬೇಕು. ಈ ರೀತಿ ಮಾಡಿದರೆ ನಿಮಗೆ ವೈಫೈ ಕನೆಕ್ಟ್ ಆಗಲಿದೆ.












Click it and Unblock the Notifications