ಮಾವಿನ ಹಣ್ಣು ಕದ್ದಿದ್ದಕ್ಕೆ ಗುಂಡೇಟು: ಬಿಹಾರದ ಬಾಲಕ ಸಾವು
ಪಾಟ್ನಾ, ಜೂನ್ 22: ಚಿಕ್ಕ ಹುಡುಗನೊಬ್ಬ ತುಂಟಾಟಕ್ಕೊ, ಆಸೆಗೋ ಮಾವಿನ ಹಣ್ಣನ್ನು ತೋಟವೊಂದರಿಂದ ಕದ್ದಿದ್ದಕ್ಕೆ ಸಿಕ್ಕ ಫಲ ಸಾವು! ಬಿಹಾರದ ಗೊಗ್ರಿ ಎಂಬಲ್ಲಿಯ ಖಗಾರಿಯಾ ಎಂಬಲ್ಲಿ ನಡೆದ ಘಟನೆ ಇದು.
ತನ್ನ ಓರಗೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದ 12 ವರ್ಷದ ಹುಡುಗನಿಗೆ ಇದ್ದಕ್ಕಿದ್ದಂತೆ ಏನನ್ನಿಸಿತೋ! ಪಕ್ಕದಲ್ಲೇ ಇದ್ದ ಮಾವಿನ ತೋಪಿಗೆ ತೆರಳಿ ಒಂದಷ್ಟು ಹಣ್ಣು ಕಿತ್ತಿದ್ದಾನೆ. ಇದನ್ನು ಕಂಡ ವ್ಯಕ್ತಿಯೊಬ್ಬ ಆತನ ಮೇಲೆ ಗುಂಡು ಹಾರಿಸಿ ಸಾಯಿಸಿದ್ದಾನೆ.

ಆರೋಪಿ ಆ ತೋಟದ ಮಾಲೀಕನೇ ಅಥವಾ ಕೆಲಸಗಾರನೇ ಎಂಬುದು ಗೊತ್ತಾಗಿಲ್ಲ. ಘಟನೆಯ ನಂತರ ಆರೋಪಿ ನಾಪತ್ತೆಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂದಿರುವ ಪೊಲಿಸರು ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ.












Click it and Unblock the Notifications