ಚುನಾವಣೆಗೂ ಮುನ್ನವೇ ಗೆದ್ದ ನಾಗಾಲ್ಯಾಂಡ್ ಮುಖ್ಯಮಂತ್ರಿ ಅಭ್ಯರ್ಥಿ!
ಕೋಹಿಮಾ, ಫೆಬ್ರವರಿ 13: ನಾಗಾಲ್ಯಾಂಡ್ ನ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಶ್ನಲಿಸ್ಟ್ ಡೆಮಾಕ್ರೆಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ(ಎನ್ ಡಿಪಿಪಿ) ಮುಖಂಡ ನೈಫಿಯು ರಿಯೋ ಅವರು ಚುನಾವಣೆಗೂ ಮುನ್ನವೇ ಜಯಗಳಿಸಿದ್ದಾರೆ!
ಇವರ ವಿರುದ್ಧ ಉತ್ತರ ಅಂಗಾಮಿ 2 ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ನಾಮಪತ್ರ ಹಿಂಪಡೆದ ಕಾರಣ ಅವರನ್ನು ಅವಿರೋಧವಾಗಿ ಶಾಸಕರೆಂದು ಆಯ್ಕೆ ಮಾಡಲಾಗಿದೆ.
ರಿಯೋ ಅವರು ಎನ್ ಡಿಪಿಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.

ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ ನಲ್ಲಿ ಇದೇ ಫೆ. 27 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 3 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications