ಮೋದಿಗೇ ಗುಜರಾತ್ ಚುನಾವಣೆ ದಿನಾಂಕ ಘೋಷಣೆ ಅಧಿಕಾರ: ಚಿದು ವ್ಯಂಗ್ಯ

ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡದ ಚುನಾವಣೆ ನಿಯೋಗವನ್ನು ಕೇಂದ್ರದ ಮಾಜಿ ಸಚಿವ- ಕಾಂಗ್ರೆಸ್ ನ ಹಿರಿಯ ನಾಯಕ ಪಿ.ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದಾರೆ. "ಚುನಾವಣೆ ಆಯೋಗವು ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸುವ ಅಧಿಕಾರವನ್ನು ಪ್ರಧಾನಿ ಮೋದಿಗೆ ನೀಡಿದೆ" ಎಂದಿದ್ದಾರೆ.

ಈ ತಿಂಗಳ ಕೊನೆಗೆ ನಡೆಸುವ ಚುನಾವಣೆ ಪ್ರಚಾರದಲ್ಲಿ ಮೋದಿ ಮತದಾನದ ದಿನಾಂಕ ಘೋಷಿಸಲಿದ್ದಾರೆ ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.

Former FM P Chidambaram takes dig at EC for delaying Gujarat poll announcement

ಗುಜರಾತ್ ಸರಕಾರವು ಎಲ್ಲ ಪುಕ್ಕಟೆ ಕೊಡುಗೆ ಹಾಗೂ ವಿನಾಯಿತಿಗಳನ್ನು ಘೋಷಿಸಿದ ಮೇಲೆ ದೀರ್ಘ ಕಾಲದ ರಜಾ ಮುಗಿಸಿ ಬರುವಂತೆ ಕರೆ ನೀಡಲಾಗುತ್ತದೆ. ಗುಜರಾತ್ ನಲ್ಲಿ ಚುನಾವಣೆ ಪ್ರಚಾರದ ಕೊನೆ ಸಭೆಯಲ್ಲಿ ಮತದಾನ ದಿನದ ಘೋಷಣೆ ಮಾಡಲು ಮೋದಿ ಅವರಿಗೇ ಚುನಾವಣೆ ಆಯೋಗ ಅಧಿಕಾರ ನೀಡಿದೆ ಎಂದು ಟ್ವೀಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.

ಚುನಾವಣೆ ಆಯೋಗವು ಹಿಮಾಚಲ ಪ್ರದೇಶದ ಚುನಾವಣೆ ದಿನಾಂಕವನ್ನು ಘೋಷಿಸಿತ್ತು. ಆದರೆ ಗುಜರಾತ್ ವಿಧಾನಸಭಾ ಚುನಾವಣೆ ದಿನ ಘೋಷಣೆ ಮಾಡಿರಲಿಲ್ಲ. ಪುಕ್ಕಟೆ ಕೊಡುಗೆಗಳನ್ನು ಗುಜರಾತ್ ನಲ್ಲಿ ಘೋಷಣೆ ಮಾಡುವುದಕ್ಕೆ ಬಿಜೆಪಿಗೆ ಅವಕಾಶ ನೀಡಲಾಗಿದೆ ಎಂದು ವಿರೋಧಪಕ್ಷಗಳು ಆರೋಪಿಸಿದ್ದವು.

ಅಕ್ಟೋಬರ್ ಹದಿನಾರರಂದು ಗುಜರಾತ್ ಗೆ ಭೇಟಿ ನೀಡಿದ್ದ ಮೋದಿ, ಇದೇ ತಿಂಗಳ 22ರಂದು ಮತ್ತೊಮ್ಮೆ ಭೇಟಿ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+