Budget 2024: ಬಜೆಟ್‌ನ ಕ್ಷಣ-ಕ್ಷಣದ ಮಾಹಿತಿ, ವಿವರ ಡೈಲಿಹಂಟ್‌ನಲ್ಲಿ ಲಭ್ಯ

ಕೇಂದ್ರ ಬಜೆಟ್ 2024-25 ಅನ್ನು ಜುಲೈ 23ರ ಮಂಗಳವಾರ ಮಂಡನೆ ಮಾಡಲಾಗುತ್ತದೆ. 2024ರ ಲೋಕಸಭೆ ಚುನಾವಣೆ ಮುಗಿದು, ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಂಡನೆಯಾಗುತ್ತಿರುವ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ.

ಲೋಕಸಭೆ ಬಜೆಟ್ ಅಧಿವೇಶನ ಜುಲೈ 22ರ ಸೋಮವಾರ ಆರಂಭವಾಗಲಿದೆ. ಜುಲೈ 23ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ.

For The Latest In Depth And Fastest Updates Of Union Budget 2024-25 Tune Into Dailyhunt

ಬಜೆಟ್ ಅಂದರೆ ಅದು ಕೇವಲ ಅಂಕಿ ಸಂಖ್ಯೆಗಳ ಲೆಕ್ಕವಲ್ಲ. ಅದರಲ್ಲಿ ಅದಾಯ ಮತ್ತು ಖರ್ಚು ಮಾತ್ರ ಅಡಗಿಲ್ಲ. ವಿವಿಧ ವಸ್ತುಗಳ ದರ ಏರಿಕೆ, ಇಳಿಕೆ. ಸರ್ಕಾರದ ಹೊಸ ಯೋಜನೆಗಳು. ಮುಂದಿನ ಒಂದು ವರ್ಷಕ್ಕೆ ಸರ್ಕಾರದ ಅನುದಾನ ಹಂಚಿಕೆ ಸೇರಿ ವಿವಿಧ ವಿಚಾರಗಳು ಅಡಗಿವೆ.

2024ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರ ಪಡೆದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಯಾವ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ? ಎಂಬುದು ಬಜೆಟ್‌ನಲ್ಲಿ ತಿಳಿಯಲಿದೆ. ಬಡ, ಮಧ್ಯಮ ವರ್ಗಕ್ಕೆ ಅಪಾರ ಕೊಡುಗೆಯೋ?, ಶ್ರೀಮಂತರಿಗೆ ಸರ್ಕಾರ ಸಿಹಿಸುದ್ದಿ ನೀಡಲಿದೆಯೋ? ಎಂಬುದು ಬಜೆಟ್ ಭಾಷಣದಲ್ಲಿ ತಿಳಿಯಲಿದೆ.

ಸಾಮಾನ್ಯ ಮತ್ತು ರೈಲ್ವೆ ಬಜೆಟ್ ಒಟ್ಟಾಗಿ ಮಂಡಿಸುವ ಕಾರಣ ದೇಶದ ಅತಿ ದೊಡ್ಡ ಸಂಪರ್ಕ ಜಾಲದಲ್ಲಿ ಯಾವ-ಯಾವ ಬದಲಾವಣೆಯಾಗಲಿದೆ? ಎಂದು ಕಾದು ನೋಡಬೇಕು. ಟಿಕೆಟ್ ದರ ಏರಿಕೆ-ಇಳಿಕೆ, ಹೊಸ ರೈಲುಗಳ ಘೋಷಣೆ, ಪ್ರಯಾಣಿಕರ ಸುರಕ್ಷತೆಗೆ ನೀಡುವ ಒತ್ತು ಮುಂತಾದ ಮಾಹಿತಿಗಳು ಬಜೆಟ್‌ನಲ್ಲಿ ಇರಲಿವೆ.

ತೆರಿಗೆ ಏರಿಕೆ-ಇಳಿಕೆ, ಜಿಎಸ್‌ಟಿ ಸಂಗ್ರಹ, ಆದಾಯ ತೆರಿಗೆ ಪಾವತಿ ಮಾಡುವವರಿಗೆ ಸಿಹಿಸುದ್ದಿ ರಸ್ತೆ, ರೈಲು, ಆರೋಗ್ಯ, ಕೈಗಾರಿಕೆ, ಮೂಲ ಸೌಕರ್ಯ ಹೀಗೆ ವಿವಿಧ ವಲಯಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಏನು? ಎಂಬುದು ಬಜೆಟ್‌ನಲ್ಲಿ ಘೋಷಣೆಯಾಗಲಿದೆ.

ಉದ್ಯೋಗ ಸೃಷ್ಟಿ, ಕೃಷಿ ವಯಲದ ಸುಧಾರಣೆ, ಮಹಿಳೆಯರಿಗೆ, ಯುವಕರಿಗೆ ಆದ್ಯತೆ, ಉದ್ಯೋಗ ಸೃಷ್ಟಿ ಮುಂತಾದ ವಲಯಕ್ಕೆ ಕೇಂದ್ರ ಸರ್ಕಾರ ಯಾವ ಘೋಷಣೆ ಮಾಡಲಿದೆ ಎಂದು ಬಜೆಟ್‌ನಲ್ಲಿ ಉಲ್ಲೇಖ ಮಾಡಲಾಗುತ್ತದೆ, ಅನುದಾನ ಹಂಚಿಕೆ ಮಾಡಲಾಗುತ್ತದೆ.

ಬಜೆಟ್‌ ಕೇವಲ ಅಂಕಿ ಅಂಶಗಳಿಂದ ಕೂಡಿಲ್ಲ. ಅದರಲ್ಲಿ ವಿವರವಾದ ಆರ್ಥಿಕ ಅಂಶಗಳು ಇರುತ್ತವೆ. ಡೈಲಿಹಂಟ್‌ನಲ್ಲಿ ಬಜೆಟ್ 2024-25ನೇ ವಿವರಗಳು ಲಭ್ಯವಾಗಲಿವೆ. ಕೇವಲ ಅಂಕಿಗಳು ಮಾತ್ರವಲ್ಲ ತಜ್ಞರ ವಿಶ್ಲೇಷಣೆಗಳು, ಬಜೆಟ್‌ನ ಆಳವಾದ ವಿವರಗಳು ಸುಲಭವಾಗಿ ಜನರಿಗೆ ಲಭ್ಯವಾಗಲಿವೆ.

ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುವ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ನ ವಿವರಗಳಿಗಾಗಿ ಡೈಲಿಹಂಟ್ ವೀಕ್ಷಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+