Vande Bharat Express: ತೆರೆ ಮೇಲೆ ಬರಲಿದೆ ವಂದೇ ಭಾರತ್, ರೈಲಿನಲ್ಲಿ ಚಿತ್ರೀಕರಣಕ್ಕೆ ಒಪ್ಪಿಗೆ

ಮುಂಬೈ, ಜನವರಿ 09: ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು. ಐಷಾರಾಮಿ ವ್ಯವಸ್ಥೆಗಳನ್ನು ಹೊಂದಿರುವ ರೈಲು ದೇಶದ ವಿವಿಧ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತದೆ. ಹೊಸ ಹೊಸ ಮಾರ್ಗದಲ್ಲಿ ಈ ಮಾದರಿ ರೈಲು ಸೇವೆಯನ್ನು ಆರಂಭಿಸಬೇಕು ಎಂದು ಬೇಡಿಕೆಯೂ ಇದೆ. ಇಂತಹ ಸಮಯದಲ್ಲಿಯೇ ವಂದೇ ಭಾರತ್ ರೈಲು ತೆರೆಯ ಮೇಲೆ ಬರಲಿದೆ.

ಹೌದು, ಪಶ್ಚಿಮ ರೈಲ್ವೆ ಚಿತ್ರೀಕರಣಕ್ಕೆ ವಂದೇ ಭಾರತ್ ರೈಲು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದೆ. ಇದೇ ಮೊದಲ ಬಾರಿಗೆ ಸಿನಿಮಾ ಶೂಟಿಂಗ್‌ಗೆ ವಂದೇ ಭಾರತ್ ರೈಲನ್ನು ಉಪಯೋಗಿಸಲಾಗುತ್ತಿದೆ.

For First Time Vande Bharat Express Train Used For Film Shooting

ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು ಬಳಕೆ ಮಾಡಿಕೊಂಡು ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಖ್ಯಾತ ಸಿನಿಮಾ ನಿರ್ಮಾಪಕ, ನಿರ್ದೇಶಕ ಶೂಜಿತ್ ಸಿರ್ಕಾರ್ ವಂದೇ ಭಾರತ್ ರೈಲಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ ಮೊದಲ ನಿರ್ದೇಶಕ ಎಂಬ ಖ್ಯಾತಿಯನ್ನು ಪಡೆದಿದ್ದಾರೆ.

ಪ್ರಮುಖವಾದ ರೈಲು ನಿಲ್ದಾಣ: ಮುಂಬೈ ಸೆಂಟ್ರಲ್ ಪಶ್ಚಿಮ ರೈಲ್ವೆ ವಲಯದಲ್ಲಿ ಬರುವ ಪ್ರಮುಖ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣದ ಪ್ಲಾಟ್‌ ಫಾರಂ ನಂಬರ್ 5ರಲ್ಲಿ ವಂದೇ ಭಾರತ್ ರೈಲುಗಳನ್ನು ಬಳಕೆ ಮಾಡಿಕೊಂಡು ಚಿತ್ರೀಕರಣ ನಡೆಸಲಾಗಿದೆ.

ಮುಂಬೈ-ಅಹಮದಾಬಾದ್ ನಡುವೆ ಎರಡು ವಂದೇ ಭಾರತ್ ರೈಲುಗಳು ಸಂಚಾರವನ್ನು ನಡೆಸುತ್ತದೆ. ಬುಧವಾರ ಚಿತ್ರೀಕರಣಕ್ಕಾಗಿಯೇ ಒಂದು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಲ್ದಾಣದಲ್ಲಿಯೇ ರೈಲನ್ನು ನಿಲ್ಲಿಸಿ ಅದರಲ್ಲಿ ಚಿತ್ರೀಕರಣ ಮಾಡಲಾಗಿದೆ. ರೈಲ್ವೆ ಇಲಾಖೆಯ ಮಾರ್ಗಸೂಚಿಗಳ ಅನ್ವಯ ಸಂಚಾರವನ್ನು ನಡೆಸದ, ನಿಲ್ದಾಣದಲ್ಲಿ ನಿಲ್ಲಿಸಲಾದ ರೈಲುಗಳನ್ನು ಚಿತ್ರೀಕರಣಕ್ಕೆ ಬಳಕೆ ಮಾಡಲಾಗುತ್ತದೆ. ವಂದೇ ಭಾರತ್ ರೈಲನ್ನು ಈ ಮಾದರಿಯಲ್ಲಿಯೇ ಸಿನಿಮಾ ಶೂಟಿಂಗ್‌ಗೆ ನೀಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಂಬೈ-ಅಹಮದಾಬಾದ್ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸಿದರೆ 20 ಲಕ್ಷ ರೂ. ಆದಾಯ ಬರುತ್ತದೆ ಎಂದು ಅಂಕಿ-ಅಂಶಗಳು ಹೇಳಿವೆ. ಆದರೆ ಒಂದು ದಿನ ರೈಲು ನಿಲ್ಲಿಸಿ ಸಿನಿಮಾ ಶೂಟಿಂಗ್ ಮಾಡಿದ್ದಕ್ಕೆ 23 ಲಕ್ಷ ರೂ. ಆದಾಯ ಪಶ್ಚಿಮ ರೈಲ್ವೆಗೆ ಬಂದಿದೆ.

ರೈಲು ನಿಲ್ದಾಣ, ಕೋಚ್‌, ರೈಲ್ವೆ ಆಸ್ತಿಗಳನ್ನು ಸಿನಿಮಾ ಶೂಟಿಂಗ್‌ಗೆ ನೀಡಲು ತನ್ನದೇ ಆದ ಮಾರ್ಗಸೂಚಿ ಇದೆ. ಈ ಹಿಂದೆಯೂ ಚಿತ್ರೀಕರಣಕ್ಕೆ ನೀಡಲಾಗಿದೆ. ಆದರೆ ದೇಶದಲ್ಲಿ ಇದೇ ಮೊದಲ ಬಾರಿಗೆ ವಂದೇ ಭಾರತ್ ರೈಲನ್ನು ಚಿತ್ರೀಕರಣಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ರೈಲ್ವೆ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡಲು ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವವನ್ನು ಒದಗಿಸಲು ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಐಷಾರಾಮಿ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದೆ.

'ಕವಚ್' ತಂತ್ರಜ್ಞಾನವನ್ನು ಹೊಂದಿರುವ ಈ ಮಾದರಿ ರೈಲುಗಳು ಗಂಟೆಗೆ 160 ಕಿ. ಮೀ. ವೇಗದಲ್ಲಿ ಸಾಗುವಂತೆ ಬೋಗಿಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ರೈಲುಗಳು ಬೋರ್ಡ್ ಗೇಜ್ (ಬಿಜಿ) ವಿದ್ಯುತ್ ನೆಟ್‌ವರ್ಕ್ ಹೊಂದಿರುವ ನಗರಗಳನ್ನು ಸಂಪರ್ಕಿಸುತ್ತದೆ. ಈ ರೈಲು ಭಾರತದ ಮೊದಲ ಸ್ವದೇಶಿ ವಿನ್ಯಾಸದ ಸೆಮಿ ಹೈ ಸ್ಪೀಡ್ ರೈಲುಗಳಾಗಿವೆ. ಪ್ರಯಾಣಿಕರಿಗೆ ಆಧುನಿಕ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಈ ರೈಲು ಒದಗಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+