ಗಿಲಾನಿ 150 ಕೋಟಿ ರೂ. ಆಸ್ತಿ ಒಡೆಯ?

ನವದೆಹಲಿ, ಆ.4 : ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ 150 ಕೋಟಿ ರೂ. ಮೊತ್ತದ ಆಸ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ತನಿಖಾ ದಳ ಗಿಲಾನಿ ಆಸ್ತಿ ವಿವರಗಳನ್ನು ಸಂಗ್ರಹಣೆ ಮಾಡುತ್ತಿದೆ.

ಗಿಲಾನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ದೆಹಲಿಯಲ್ಲಿಯೂ ಫ್ಲಾಟ್ ಗಳನ್ನು ಹೊಂದಿರುವುದು ಬೆಳಕಿಗೆ ಬಂದಿದ್ದು, ಆಸ್ತಿಗಳ ಪರಿಶೀಲನೆಗೆ ಎನ್ಐಎ ಮುಂದಾಗಿದೆ. ಹುರಿಯತ್ ಉಗ್ರ ಸಂಘಟನೆಗೆ ಹಣ ನೀಡಿರುವ ಆರೋಪ ಗಿಲಾನಿ ಮೇಲಿದ್ದು, ಎನ್‌ಐಎ ಈ ಪ್ರಕರಣದ ತನಿಖೆ ನಡೆಸುತ್ತಿದೆ.

Flats in Delhi, land in Kashmir, this is separatist Geelani's Rs 150 crore empire

ಮಕ್ಕಳ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರುವ ಬಗ್ಗೆ ಅನುಮಾನವಿದ್ದು, ಗಿಲಾನಿ ಪುತ್ರರಾದ ನಾಸೀಮ್, ನಯೀಮ್, ಪುತ್ರಿಯರಾದ ಅನಿಷಾ, ಫಾರ್ ಹಾತ್ ಸೇರಿ ಆರು ಜನರ ಮೇಲೆ ಎನ್ಐಎ ಅಧಿಕಾರಿಗಳು ಕಣ್ಣೀಟ್ಟಿದ್ದಾರೆ.

ಸುಮಾರು ಮೂವತ್ತು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಗಿಲಾನಿ ಬಾರಾಮುಲ್ಲಾದಲ್ಲಿ ಹೊಂದಿದ್ದಾರೆ. 2006ರಲ್ಲಿ 70 ಲಕ್ಷ ರೂ. ಮೌಲ್ಯದ ಮನೆಯನ್ನು ಶ್ರೀನಗರದಲ್ಲಿ ಗಿಲಾನೊ ಪುತ್ರ ನಾಸೀಮ್ ಕೊಂಡುಕೊಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಸೀಮ್ ಮತ್ತು ನಮೀಮ್ ಗೆ ವಿಚಾರಣೆ ಹಾಜರಾಗುವಂತೆ ಎನ್‌ಐಎ ಸಮನ್ಸ್ ಜಾರಿ ಮಾಡಿದೆ. ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ನಾಸೀಮ್ ಹೇಳಿದ್ದರು. ಆದ್ದರಿಂದ, ಮತ್ತೊಂದು ಸಮನ್ಸ್ ಜಾರಿ ಮಾಡಲಾಗಿದೆ.

ಎನ್ಐಎ ಸಮನ್ಸ್ ಗೆ ಉತ್ತರ ನೀಡಿರುವ ನಾಸೀಮ್ ನೋಟಿಸ್ ಬರುವಾಗ ನನ್ನ ಖಾತೆಯಲ್ಲಿ ಕೇವಲ ಐನೂರು ರೂ. ಇತ್ತು. 23 ಲಕ್ಷ ಲೋನ್ ಅನ್ನು ನಾನು ಹೊಂದಿದ್ದೇನೆ ಎಂದು ಹೇಳಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+