Exit Polls 2026: ಇಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೋತ್ತರ ಫಲಿತಾಂಶ ಪ್ರಕಟವಾಯಿತು

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಮತಗಟ್ಟೆ ಸಮೀಕ್ಷೆಯ (Exit Poll 2026) ವಿವರ ಇಂದು (ಏ.29) ಪ್ರಕಟವಾಯಿತು. ಇಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದಲ್ಲಿ ಮತದಾನ ಮುಗಿದ ನಂತರ ಸಂಜೆ 6:30ರ ಹೊತ್ತಿಗೆ ಮತಗಟ್ಟೆ ಸಮೀಕ್ಷೆ ವಿವರಗಳು ಪ್ರಕಟವಾದವು.

ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಎಲ್ಲ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ಜರುಗಿತು. ಪಶ್ಚಿಮ ಬಂಗಾಳದಲ್ಲಿ, ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಏಪ್ರಿಲ್ 23 ರಂದು 152 ಸ್ಥಾನಗಳಿಗೆ ಮೊದಲ ಹಂತ ನಡೆದಿದ್ದು, ಏಪ್ರಿಲ್ 29 ರಂದು 142 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಪೂರ್ಣಗೊಂಡಿತು.

Five State Exit Poll

ವಿವಿಧ ಮಾಧ್ಯಮ ಹಾಗೂ ಸ್ವತಂತ್ರ ಸಂಸ್ಥೆಗಳು ಮತದಾನದ ಬಳಿಕ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ ಬಿಡುಗಡೆ ಆಯಿತು. ಏಪ್ರಿಲ್ 29 ರಂದು ಸಂಜೆ 6:30ರ ಮೊದಲು ಯಾವುದೇ ಚುನಾವಣೋತ್ತರ (ನಿರ್ಗಮನ) ಸಮೀಕ್ಷೆಯ ಮಾಹಿತಿ ಪ್ರಕಟಿಸದಂತೆ ಭಾರತ ಚುನಾವಣಾ ಆಯೋಗ ನಿರ್ಬಂಧ ಹೇರಿತ್ತು. ಆ ಸಮಯದ ಬಳಿಕ ಬಂದ ಚುನಾವಣೊತ್ತ ಫಲಿತಾಂಶದಲ್ಲಿ ಪಂಚ ರಾಜ್ಯಗಳಲ್ಲಿ ಬಿಜೆಪಿ ಪರ ಒಲವಿರುವುದು ಗೊತ್ತಾಗಿದೆ. ಕಾಂಗ್ರೆಸ್ ಸೇರಿ ಇನ್ನಿತರ ಪಕ್ಷಗಳು ನಂತರದ ಸ್ಥಾನದಲ್ಲಿವೆ. ಇದು ನೂರರಷ್ಟು ನಿಖರ ಫಲಿತಾಂಶವಲ್ಲ. ಚುನಾವಣೆ ಆಯೋಗ ನೀಡುವುದು ಅಂತಿಮ ಫಲಿತಾಂಶವಾಗಿದೆ.

ವಿವಿಧ ಸಮೀಕ್ಷಾ ಸಂಸ್ಥೆಗಳು, ಸುದ್ದಿ ಸಂಸ್ಥೆ, ಏಜೆನ್ಸಿಗಳು ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆ ನೀಡಿವೆ.ರಾಜಕೀಯ, ಕ್ರೀಡೆ, ವೈರಲ್ ವಿಡಿಯೋ ಇನ್ನಿತರ ಎಲ್ಲ ಸುದ್ದಿಗಳಿಗೆ 'ಒನ್ ಇಂಡಿಯಾ ಕನ್ನಡ' ವೆಬ್‌ಸೈಟ್‌ ವೀಕ್ಷಿಸಿ.

Apr 29, 2026, 8:55 pm IST

ತಮಿಳುನಾಡು ಎಕ್ಸಿಟ್ ಪೋಲ್ ಸರಾಸರಿ: ಸ್ಟಾರ್‌ ನಟ ವಿಜಯ್‌ಗೆ ಖುಲಾಯಿಸಿದ ಅದೃಷ್ಟ

ತಮಿಳುನಾಡು ಎಕ್ಸಿಟ್ ಪೋಲ್ ಸರಾಸರಿ: ಸ್ಟಾರ್‌ ನಟ ವಿಜಯ್‌ಗೆ ಖುಲಾಯಿಸಿದ ಅದೃಷ್ಟ
ತಮಿಳುನಾಡು ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಸಮಗ್ರ ವಿವರದ ಸರಾಸರಿ ಲೆಕ್ಕ ಮಾಡಿದರೆ ಡಿಎಂಕೆ ಅಧಿಕಾರಕ್ಕೆ ಬರುವುದು ನಿಚ್ಚಳ. ಎಡಿಎಂಕೆ ವಿರೋಧ ಪಕ್ಷದ ಸ್ಥಾನದಲ್ಲಿದ್ದರೂ ಡಿಎಂಕೆ ಗಳಿಸಬಹುದಾದ ಸ್ಥಾನಗಳಿಗೆ ಹೋಲಿಸಿದರೆ ಅರ್ಧದಷ್ಟು ಸ್ಥಾನಗಳಲ್ಲಿಯೂ ಗೆಲುವು ಸಾಧಿಸಲಾರದು ಎಂದೇ ಹಲವು ಸಂಸ್ಥೆಗಳು ಭವಿಷ್ಯ ನುಡಿದಿವೆ. ಮೊದಲ ಚುನಾವಣೆಯಲ್ಲಿಯೇ ಭರ್ಜರಿಯಾಗಿ ಖಾತೆ ತೆರೆಯಲಿರುವ ಸ್ಟಾರ್ ನಟ ವಿಜಯ್ ಜೋಸೆಫ್ ಅವರ ಟಿವಿಕೆ ಎರಡಂಕಿ ದಾಟಲಿದೆ ಎಂದು ಬಹುತೇಕ ಎಲ್ಲ ಮಾಧ್ಯಮ ಸಂಸ್ಥೆಗಳು ಮುನ್ನೋಟ ನೀಡಿವೆ.
Apr 29, 2026, 8:55 pm IST

ಅಸ್ಸಾಂ ಎಕ್ಸಿಟ್ ಪೋಲ್ ಸರಾಸರಿ: ಮತ್ತೊಮ್ಮೆ ಹಿಮಂತ ಬಿಸ್ವಾಗೆ ಮತದಾರರ ಆಶೀರ್ವಾದ

ಅಸ್ಸಾಂ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಸಮಗ್ರ ವಿವರದ ಸರಾಸರಿ ಲೆಕ್ಕ ಮಾಡಿದರೆ ಬಿಜೆಪಿ ನೇತೃತ್ವದ ಎನ್‌ಡಿಎ ನಿಚ್ಚಳ ಬಹುಮತ ಗಳಿಸಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ. ಕಾಂಗ್ರೆಸ್‌ ನೇತೃತ್ವದ ಎಎಸ್‌ಎಂ ಕಳಪೆ ಸಾಧನೆ ಮಾಡಲಿದ್ದು ಎರಡನೇ ಸ್ಥಾನಕ್ಕೆ ಕುಸಿಯಬಹುದು ಎಂದೇ ಮುನ್ನೋಟಗಳು ಹೇಳುತ್ತಿವೆ. ಪಕ್ಷೇತರರು ಎರಡಂಕಿ ಪಡೆಯಬಹುದು ಎಂದು 'ಚಾಣಕ್ಯ ಸ್ಟ್ರಾಟಜೀಸ್' ಹೇಳಿದೆ. ಆದರೆ ಈ ಮುನ್ನೋಟವನ್ನು ಇತರ ಸಂಸ್ಥೆಗಳು ಪುಷ್ಟೀಕರಿಸಿಲ್ಲ.
Apr 29, 2026, 8:54 pm IST

ತಮಿಳುನಾಡು ಎಕ್ಸಿಟ್ ಪೋಲ್ ಸರಾಸರಿ: ಸ್ಟಾರ್‌ ನಟ ವಿಜಯ್‌ಗೆ ಖುಲಾಯಿದ ಅದೃಷ್ಟ

ತಮಿಳುನಾಡು ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಸಮಗ್ರ ವಿವರದ ಸರಾಸರಿ ಲೆಕ್ಕ ಮಾಡಿದರೆ ಡಿಎಂಕೆ ಅಧಿಕಾರಕ್ಕೆ ಬರುವುದು ನಿಚ್ಚಳ. ಎಡಿಎಂಕೆ ವಿರೋಧ ಪಕ್ಷದ ಸ್ಥಾನದಲ್ಲಿದ್ದರೂ ಡಿಎಂಕೆ ಗಳಿಸಬಹುದಾದ ಸ್ಥಾನಗಳಿಗೆ ಹೋಲಿಸಿದರೆ ಅರ್ಧದಷ್ಟು ಸ್ಥಾನಗಳಲ್ಲಿಯೂ ಗೆಲುವು ಸಾಧಿಸಲಾರದು ಎಂದೇ ಹಲವು ಸಂಸ್ಥೆಗಳು ಭವಿಷ್ಯ ನುಡಿದಿವೆ. ಮೊದಲ ಚುನಾವಣೆಯಲ್ಲಿಯೇ ಭರ್ಜರಿಯಾಗಿ ಖಾತೆ ತೆರೆಯಲಿರುವ ಸ್ಟಾರ್ ನಟ ವಿಜಯ್ ಜೋಸೆಫ್ ಅವರ ಟಿವಿಕೆ ಎರಡಂಕಿ ದಾಟಲಿದೆ ಎಂದು ಬಹುತೇಕ ಎಲ್ಲ ಮಾಧ್ಯಮ ಸಂಸ್ಥೆಗಳು ಮುನ್ನೋಟ ನೀಡಿವೆ.
Apr 29, 2026, 8:34 pm IST

ಪುದುಚೇರಿಯಲ್ಲಿ ಟಿವಿಕೆಗೆ ಎಷ್ಟು ಸ್ಥಾನ

ಪುದುಚೇರಿಯಲ್ಲಿ ನಟ ವಿಜಯ್ ಥಳಪತಿ ಅವರ ಟಿವಿಕೆ ಪಕ್ಷ 2 ರಿಂದ 4 ಸ್ಥಾನ ಗಳಿಸಬಹುದು. ಈ ಮೂಲಕ ನಟ ವಿಜಯ್ ಅವರು ತಮ್ಮ ಖಾತೆ ತೆರೆಯಲಿದ್ದಾರೆ ಎಂದು 'ಪೋಲ್ ಆಫ್ ಪೋಲ್ಸ್' ಸೇರಿ ಕೆಲವು ಸಂಸ್ಥೆಗಳ ಮತಗಟ್ಟೆ ಫಲಿತಾಂಶಗಳು ತಿಳಿಸಿವೆ.
Apr 29, 2026, 8:33 pm IST

ಎನ್‌ಡಿಗೆ 19-25 ಸೀಟು

'ಪ್ರಜಾ ಪೋಲ್' ಪುದುಚೇರಿ ಮತಗಟ್ಟೆ ಸಮೀಕ್ಷೆ ಪ್ರಕಾರ, ಎನ್‌ಡಿಗೆ 19-25 ಸೀಟುಗಳಲ್ಲಿ ಅಧಿಕಾರ ಹಿಡಿದು ಸ್ವತಂತ್ರವಾಗಿ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಏರಲಿದೆ. ಕಾಂಗ್ರೆಸ್‌ಗೆ ಕೇವಲ 6-8 ಸೀಟು ಸಿಗಬಹುದು ಎಂದು ತಿಳಿಸಿದೆ.
Apr 29, 2026, 7:36 pm IST

ಕೇರಳದಲ್ಲಿ ಯುಡಿಎಫ್ ಮುನ್ನಡೆ ಎಂದ ಆಕ್ಸಿಸ್ ಮೈ ಇಂಡಿಯಾ

ಕೇರಳದಲ್ಲಿ ಯುಡಿಎಫ್ ಮುನ್ನಡೆ ಎಂದ ಆಕ್ಸಿಸ್ ಮೈ ಇಂಡಿಯಾ
ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮೈತ್ರಿಕೂಟವೇ ಮುನ್ನಡೆ ಸಾಧಿಸಲಿದೆ ಎಂದು 'ಆಕ್ಸಿಸ್ ಮೈ ಇಂಡಿಯಾ' ಸಂಸ್ಥೆಯ ಮತಗಟ್ಟೆ ಸಮೀಕ್ಷೆಯು ಮುನ್ನೋಟ ನೀಡಿದೆ. ಸಿಪಿಎಂ ನೇತೃತ್ವದ ಎಲ್‌ಡಿಎಫ್ ಪ್ರಮುಖ ವಿರೋಧ ಪಕ್ಷವಾಗಲಿದೆ. ಬಿಜೆಪಿಗೆ ಮೂರು ಸ್ಥಾನ ಸಿಕ್ಕರೆ ಹೆಚ್ಚು ಎಂದು ಆಕ್ಸಿಸ್ ಮೈ ಇಂಡಿಯಾ ಹೇಳಿದೆ.
Apr 29, 2026, 7:23 pm IST

ಮತಗಟ್ಟೆ ಸಮೀಕ್ಷೆ ವಿವರ ನಾಳೆಗೆ ಎಂದು ಟುಡೇಸ್ ಚಾಣಕ್ಯ

ಭಾರತದ ಪ್ರಮುಖ ಚುನಾವಣಾ ಸಮೀಕ್ಷಾ ಸಂಸ್ಥೆ 'ಟುಡೇಸ್ ಚಾಣಕ್ಯ' ಇಂದು (ಏ 29) ಮತಗಟ್ಟೆ ಸಮೀಕ್ಷೆ ವಿವರ ಬಿಡುಗಡೆ ಮಾಡಿಲ್ಲ. ನಾಳೆ 5:30 ಕ್ಕೆ ಅಸ್ಸಾಂ, 5:45 ಕ್ಕೆ ಕೇರಳಂ, 6 ಕ್ಕೆ ತಮಿಳುನಾಡು, 6:30 ಕ್ಕೆ ಪಶ್ಚಿಮ ಬಂಗಾಳದ ಮತಗಟ್ಟೆ ಸಮೀಕ್ಷೆ ವಿವರ ಪ್ರಕಟಿಸಲಾಗುವುದು ಎಂದು ಸಂಸ್ಥೆ ಟ್ವೀಟ್ ಮಾಡಿದೆ.
Apr 29, 2026, 7:22 pm IST

ಅಸ್ಸಾಂ: ಬಿಜೆಪಿಗೆ ನಿಚ್ಚಳ ಬಹುಮತ, ಕಾಂಗ್ರೆಸ್‌ ಕುಸಿತ -ಪೀಪಲ್ಸ್‌ ಪಲ್ಸ್‌

ಅಸ್ಸಾಂ: ಬಿಜೆಪಿಗೆ ನಿಚ್ಚಳ ಬಹುಮತ, ಕಾಂಗ್ರೆಸ್‌ ಕುಸಿತ -ಪೀಪಲ್ಸ್‌ ಪಲ್ಸ್‌
ಅಸ್ಸಾಂನಲ್ಲಿ ಈ ಬಾರಿಯೂ ಹಿಮಂತ ಬಿಸ್ವಾ ಸ್ಥಾನ ಗಟ್ಟಿಯಾಗಿಯೇ ಉಳಿಯಲಿದೆ ಎಂದು ಪೀಪಲ್ಸ್‌ ಪಲ್ಸ್‌ ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿದಿದೆ. ನಂತರ ಸ್ಥಾನಕ್ಕೆ ಬರುವ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರಲಿದೆ. ಅಸ್ಸಾಂನಲ್ಲಿ ಪಕ್ಷೇತರರದು ಶೂನ್ಯ ಸಂಪಾದನೆ ಎಂದು ಪೀಪಲ್ಸ್ ಪಲ್ಸ್‌ ಮುನ್ನೋಟ ನೀಡಿದೆ.
Apr 29, 2026, 7:16 pm IST

ವಿಜಯ್ ಮ್ಯಾಜಿಕ್ ವರ್ಕ್ ಆಯ್ತಾ?

ವಿಜಯ್ ಮ್ಯಾಜಿಕ್ ವರ್ಕ್ ಆಯ್ತಾ?
ತಮಿಳುನಾಡು ಚುನಾವಣೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾದ ಟಿವಿಕೆ - ಕಿಂಗ್ ಅಲ್ಲದಿದ್ದರೂ ಕಿಂಗ್ ಮೇಕರ್ ಪಕ್ಕಾ! ವಿಜಯ್ ಅವರ ಅಪಾರ ಅಭಿಮಾನಿ ಬಳಗ ಮತ್ತು ಯುವ ಮತದಾರರು ಈ ಬಾರಿ ದೊಡ್ಡ ಮಟ್ಟದಲ್ಲಿ ಟಿವಿಕೆ (TVK) ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
Apr 29, 2026, 7:09 pm IST

ಪುದುಚೇರಿ: ಬಿಜೆಪಿಗೆ ಅಧಿಕಾರ, 2ನೇ ಸ್ಥಾನಕ್ಕೆ ಕಾಂಗ್ರೆಸ್ -ಪೀಪಲ್ಸ್ ಪಲ್ಸ್

ಪುದುಚೇರಿ: ಬಿಜೆಪಿಗೆ ಅಧಿಕಾರ, 2ನೇ ಸ್ಥಾನಕ್ಕೆ ಕಾಂಗ್ರೆಸ್ -ಪೀಪಲ್ಸ್ ಪಲ್ಸ್
ಅಧಿಕಾರ ಹಿಡಿಯಲು 16 ಸ್ಥಾನ ಬೇಕಾದ ಪುದುಚೇರಿ ವಿಧಾನಸಭೆಯಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಳ ಬಹುಮತ ಗಳಿಸಬಹುದು ಎಂದು ಪೀಪಲ್ಸ್ ಪಲ್ಸ್ ಸಮೀಕ್ಷೆ ಮುನ್ನೋಟ ನೀಡಿದೆ. ಇಲ್ಲಿ ಕಾಂಗ್ರೆಸ್‌ ಪ್ರಬಲ ಪ್ರತಿಪಕ್ಷವಾಗಬಹುದು, ಪಕ್ಷೇತರರೂ ಒಂದಿಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ಮುನ್ಸೂಚನೆ ಸಿಕ್ಕಿದೆ. ಕಾಂಗ್ರೆಸ್ ಸ್ಥಾನಗಳಿಗೆ ತುಸುವೇ ಸುಧಾರಿಸಿದರೂ ಪಕ್ಷೇತರರು ಕಿಂಗ್‌ಮೇಕರ್ ಆಗುವ ಸಾಧ್ಯತೆಯಿದೆ.
Apr 29, 2026, 7:00 pm IST

ತಮಿಳುನಾಡಿನಲ್ಲಿ ಟಿವಿಕೆಗೆ ನೆಲೆ, ಸ್ಟಾಲಿನ್‌ಗೆ ಅಧಿಕಾರ: ಪೀಪಲ್ಸ್ ಪಲ್ಸ್ ಸಮೀಕ್ಷೆ

ತಮಿಳುನಾಡಿನಲ್ಲಿ ಟಿವಿಕೆಗೆ ನೆಲೆ, ಸ್ಟಾಲಿನ್‌ಗೆ ಅಧಿಕಾರ: ಪೀಪಲ್ಸ್ ಪಲ್ಸ್ ಸಮೀಕ್ಷೆ
ದ್ರಾವಿಡ ಅಸ್ಮಿತೆಯನ್ನು ಮುಂದಿಟ್ಟು ಹೋರಾಡುವ ತಮಿಳುನಾಡು ರಾಜಕಾರಣದಲ್ಲಿ ಸ್ಟಾರ್ ನಟ ವಿಜಯ್‌ ಎಂಟ್ರಿ ಸಂಚಲನ ಮೂಡಿಸಿತ್ತು. ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಮೊದಲ ಪ್ರಯತ್ನದಲ್ಲಿಯೇ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿದೆ ಎಂದು ಪೀಪಲ್ಸ್‌ ಪಲ್ಸ್‌ ಮತಗಟ್ಟೆ ಸಮೀಕ್ಷೆ ಹೇಳಿದೆ. ಆದರೆ ಅಧಿಕಾರ ಮಾತ್ರ ಡಿಎಂಕೆ ಪಾಲಿಗೆ ಒಲಿಯಲಿದೆ. ಉಳಿದಂತೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಎಡಿಎಂಕೆ 2ನೇ ಸ್ಥಾನಕ್ಕೆ ಇಳಿಯಲಿದ್ದು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಎಡಿಎಂಕೆ ಮತ್ತು ಟಿವಿಕೆ ಮೈತ್ರಿ ಸಾಧ್ಯವಾದರೆ ತಮಿಳುನಾಡು ರಾಜಕಾರಣ ಮತ್ತಷ್ಟು ರಂಗೇರಬಹುದು. ಅಂತಿಮ ಫಲಿತಾಂಶಕ್ಕಾಗಿ ಮೇ 4 ವರೆಗೂ ಕಾಯಬೇಕಿದೆ.
Apr 29, 2026, 6:54 pm IST

ಎಕ್ಸಿಸ್ ಮೈ ಇಂಡಿಯಾ ( Axis My India) ನೀಡಿದ ಅಸ್ಸಾಂ ಚುನಾವಣೆ ಮತಗಟ್ಟೆ ಫಲಿತಾಂಶದಲ್ಲಿ ಬಿಜೆಪಿ, ಕಾಂಗ್ರೆಸ್ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗುವುದಿಲ್ಲ ಎಂದಿದೆ. 126 ಕ್ಷೇತ್ರಗಳಲ್ಲಿ ಗೆಲ್ಲಲು 64 ಸೀಟು ಬೇಕು. ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 47 ಸೀಟು, ಕಾಂಗ್ರೆಸ್‌ 39 ಸ್ಥಾನಗಳಲ್ಲಿ ಗೆಲ್ಲಲಿದೆ, ಇತರ ಪಕ್ಷಗಳು 14 ಕ್ಷೇತ್ರಗಳಲ್ಲಿ ಬೀಗಲಿವೆ ಎಂದು ತಿಳಿಸಿದೆ.
Apr 29, 2026, 6:52 pm IST

ಪಶ್ಚಿಮ ಬಂಗಾಳದಲ್ಲಿ ಮತ್ತೆ ಟಿಎಂಸಿ ಹವಾ: ಪೀಪಲ್ಸ್‌ ಪಲ್ಸ್ ಸಮೀಕ್ಷೆ

ಪಶ್ಚಿಮ ಬಂಗಾಳದಲ್ಲಿ ಮತ್ತೆ ಟಿಎಂಸಿ ಹವಾ: ಪೀಪಲ್ಸ್‌ ಪಲ್ಸ್ ಸಮೀಕ್ಷೆ
ಕೇಂದ್ರದ ಎದುರು ರಾಜ್ಯ ಸರ್ಕಾರ ಎನ್ನುವಂತೆ ಬಿಂಬಿತವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಈ ಬಾರಿಯೂ ತೃಣಮೂಲ ಕಾಂಗ್ರೆಸ್‌ ಮುನ್ನಡೆ ದಾಖಲಿಸಲಿದೆ ಎಂದು ಪೀಪಲ್ಸ್‌ ಪಲ್ಸ್ ಮತಗಟ್ಟೆ ಸಮೀಕ್ಷೆ ಹೇಳಿದೆ. ಬಿಜೆಪಿ ನಂತರದ ಸ್ಥಾನಕ್ಕೆ ಬರಬಹುದು. ಕಾಂಗ್ರೆಸ್‌ ಕನಿಷ್ಠ ಮಟ್ಟಕ್ಕೆ ಕುಸಿಯಬಹುದು. ದಶಕಗಳ ಕಾಲ ರಾಜ್ಯ ಆಳಿದ್ದ ಎಡಪಕ್ಷಗಳು 1 ಸ್ಥಾನ ಗಳಿಸಿದರೆ ಹೆಚ್ಚು ಎಂದು ಸಮೀಕ್ಷೆ ವಿವರಿಸಿದೆ. ಸಮೀಕ್ಷೆಯ ಪೂರ್ಣ ಮಾಹಿತಿ ಇಲ್ಲಿದೆ.
Apr 29, 2026, 6:47 pm IST

ಕೇರಳದಲ್ಲಿ ಕಾಂಗ್ರೆಸ್ ಮುನ್ನಡೆ ಎಂದ ಪೀಪಲ್ಸ್‌ ಪಲ್ಸ್

ಕೇರಳದಲ್ಲಿ ಕಾಂಗ್ರೆಸ್ ಮುನ್ನಡೆ ಎಂದ ಪೀಪಲ್ಸ್‌ ಪಲ್ಸ್
ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂದು 'ಪೀಪಲ್ಸ್‌ ಪಲ್ಸ್'ಯ ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿದೆ. ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಎರಡನೇ ಸ್ಥಾನ ಮತ್ತು ಬಿಜೆಪಿ ಮೂರನೇ ಸ್ಥಾನಕ್ಕೆ ಬರಬಹುದು ಎಂದು ಪೀಪಲ್ಸ್‌ ಪಲ್ಸ್ ಹೇಳಿದೆ.
Apr 29, 2026, 6:24 pm IST

ಕಳೆದ ಬಾರಿ ಇದೇ ಐದು ರಾಜ್ಯಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮತಗಟ್ಟೆ ಸಮೀಕ್ಷೆಗೂ ಅಂತಿಮ ಚುನಾವಣಾ ಫಲಿತಾಂಶಕ್ಕೂ ಸಂಪೂರ್ಣ ಭಿನ್ನವಾಗಿತ್ತು. ಟಿಎಂಸಿ ನಿರೀಕ್ಷೆಗಿಂತಲೂ 61 ಸೀಟು ಅಧಿಕ (ಒಟ್ಟು216) ಸೀಟು, ಎನ್‌ಡಿಎ ಕೇವಲ 77 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
Apr 29, 2026, 5:56 pm IST

ಪಶ್ಚಿಮ ಬಂಗಾಳದಲ್ಲಿ ಸಂಜೆ 5 ರ ಹೊತ್ತಿಗೆ ಶೇ 90 ರಷ್ಟು ಮತದಾನ

ಪಶ್ಚಿಮ ಬಂಗಾಳದಲ್ಲಿ ಇಂದು ನಡೆದ 2ನೇ ಹಂತದ ಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ 90 ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಕೊಲ್ಕತ್ತಾದ ವಿವಿಧೆಡೆ ಮತಗಟ್ಟೆಗಳಿಗೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ ಅವರನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು. ಒಟ್ಟಾರೆ ಪಶ್ಚಿಮ ಬಂಗಾಳದ ಫಲಿತಾಂಶ ಇಡೀ ದೇಶದ ಕುತೂಹಲ ಕೆರಳಿಸಿದೆ.
Apr 29, 2026, 5:04 pm IST

2026ರ ಪಂಚರಾಜ್ಯ (ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ) ವಿಧಾನಸಭಾ ಚುನಾವಣೆಯ ಫಲಿತಾಂಶವು 2026 ಮೇ 4 ರಂದು ಬಿಡುಗಡೆ ಆಗಲಿದೆ.
Apr 29, 2026, 5:04 pm IST

ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಸಹ ಬಿಡುಗಡೆ ಆಗುವ ನಿರೀಕ್ಷೆ ಇದೆ.
Apr 29, 2026, 5:03 pm IST

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ ಇಂದು ಮಂಗಳವಾರಕ್ಕೆ ಪೂರ್ಣಗೊಳ್ಳಲಿದೆ. ನಂತರ ಎಕ್ಸಿಟ್ ಪೋಲ್ ಪಲಿತಾಂಶ ಬಿಡುಗಡೆ ಅಗಲಿದೆ. ಫಲಿತಾಂಶಕ್ಕಾಗಿ ಆಯಾ ರಾಜ್ಯಗಳ ಜನರು ಕಾಯುತ್ತಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+