Vande Bharat Express: ಐದು ಹೊಸ ಸೆಮಿ ಸ್ಪೀಡ್ ರೈಲುಗಳಿಗೆ ಜೂನ್ ಅಂತ್ಯಕ್ಕೆ ಚಾಲನೆ

ಬೆಂಗಳೂರು, ಮೇ 11: ಭಾರತೀಯ ರೈಲ್ವೆ ಸಚಿವಾಲಯವು ಮುಂದಿನ ಜೂನ್ ಅಂತ್ಯದ ವೇಳೆಗೆ ಕನಿಷ್ಠ ಐದು ಜೋಡಿ ಸೆಮಿ-ಹೈ ಸ್ಪೀಡ್ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು ರೈಲುಗಳ ಸಂಚಾರಕ್ಕೆ ಹಸಿರುವ ನಿಶಾನೆ ತೋರಿಸಲು ಸಜ್ಜಾಗಿದೆ.

ಈ ರೈಲುಗಳು ಪುರಿ ಮತ್ತು ಹೌರಾ ನಡುವೆ ಆರಂಭವಾಗಲಿವೆ.

ವಂದೇ ಭಾರತ್ ರೈಲ್‌ಗಳ ಪೂರೈಕೆಯನ್ನು ವ್ಯವಸ್ಥಿತಗೊಳಿಸಿರುವ ಕೇಂದ್ರ ರೈಲ್ವೆಇಯು ಒಂದು ತಿಂಗಳಲ್ಲಿ ಸರಣಿ ರೂಪದಲ್ಲಿ ಈ ಸೆಮಿ ಸ್ಪೀಡ್ ರೈಲುಗಳಿಗೆ ಚಾಲನೆ ನೀಡಲಿದೆ ಎಂದು ನ್ಯೂಸ್ ಏಟಿನ್ ವರದಿ ಮಾಡಿದೆ. ಈ ವಂದೇ ಭಾರತ್ ರೈಲುಗಳು ಸಾಕಷ್ಟು ಮಾರ್ಗದಲ್ಲಿ ಅಗತ್ಯವಿದೆ ಎಂಬುದನ್ನು ಸರ್ಕಾರ ಮನಗಂಡಿದೆ. ಆದರೆ ಆಯ್ದ ಮಾರ್ಗಗಳಲ್ಲಿ ಈ ರೈಲು ಕಾರ್ಯಸಾಧ್ಯವೇ ಎಂಬುದನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದೆ.

Five New Vande Bharat Express Semi Speed Rail Will Start From Next June, Odisha Will Get First Train

ಜೂನ್ ತಿಂಗಳ ಅಂತ್ಯದಲ್ಲಿ ಈ ಐದು ರೈಲುಗಳ ಪೈಕಿ ಪುರಿ- ಹೌರಾ ಮಾರ್ಗದ ಹೊರತಾಗಿ ಬೇರೆ ಮಾರ್ಗಗಳು ಯಾವವು, ಎಲ್ಲೆಲ್ಲಿ ರೈಲುಗಳು ಸಂಚರಿಸಲಿವೆ ಎಂಬ ಬಗ್ಗೆ ಮಾಹಿತಿ ಅಧಿಕೃತವಾಗಿ ತಿಳಿಯಬೇಕಿದೆ. ಮೂಲಗಳ ಪ್ರಕಾರ, ಪುರಿ-ಹೌರಾ ವಂದೇ ಭಾರತ್ ನಂತರ, ಜಲ್ಪೈಗುರಿ-ಗುವಾಹಟಿ ಮಾರ್ಗ, ಪಾಟ್ನಾ ಮತ್ತು ರಾಂಚಿ ನಡುವೆ ಎರಡು ರೈಲುಗಳ ಸೇವೆ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಗುವಾಹಟಿ ವ್ಯಾಪ್ತಿಯಲ್ಲಿ ಆರಂಭವಾಗುವ ಈ ವಂದೇ ಭಾರತ್ ಎಕ್ಸಪ್ರೆಸ್ ರೈಲು ಈಶಾನ್ಯ ಭಾಗದಲ್ಲಿ (ಅಸ್ಸಾಂ) ಆರಂಭವಾಗು ಮೊದಲ ರೈಲು ಎನ್ನಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೌರಾ ಮತ್ತು ನ್ಯೂ ಜಲ್ಪೈಗುರಿ ಮಧ್ಯೆ ವಂದೇ ಭಾರತ್ ಎಕ್ಸಪ್ರೆಸ್ ರೈಲನ್ನು ಆರಂಭಿಸಲಾಗಿದೆ.

ಒಡಿಶಾಗೆ ಮೊದಲ ವಂದೇ ಭಾರತ್

ಕಳೆದ ತಿಂಗಳು ಏಪ್ರಿಲ್‌ನಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕೇರಳ ರಾಜ್ಯದಲ್ಲಿ ಹೊಸದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭದ ಬಳಿಕ ಇದೇ ಮೊದಲ ಬಾರಿ ಓಡಿಶಾ ರಾಜ್ಯದಲ್ಲಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ರೈಲು ಮೇ 15 ರಂದು ಪುರಿಯಲ್ಲಿ ಉದ್ಘಾಟನೆಗೊಂಡ ಅಲ್ಲಿ ಸಂಚಾರ ನಡೆಸಲಿದೆ. ಇದು ಪಶ್ಚಿಮ ಬಂಗಾಳದ ಹೌರಾ ಮತ್ತು ಒಡಿಶಾದ ಪುರಿ ನಡುವೆ ಚಲಿಸಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Five New Vande Bharat Express Semi Speed Rail Will Start From Next June, Odisha Will Get First Train

ಯೋಜನೆಯ ಉದ್ದೇಶದಂತೆ ಏಪ್ರಿಲ್ ತಿಂಗಳಿನಲ್ಲಿ ವಂದೇ ಭಾರತ್ ರೈಲುಗಳ ಪ್ರಯೋಗಿಕ ಪರೀಕ್ಷೆ ಕಾರ್ಯ ನಡೆಸಲಾಗಿದ್ದು, ಯಶಸ್ವಿಯಾಗಿದೆ. ಇನ್ನೂ ಅಧಿಕೃತವಾಗಿ ಆರಂಭಿಸುವುದು ಬಾಕಿ ಇದೆ. ಆದಷ್ಟು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿಯವರು ಈ ಸೆಮೆ ರೈಲುಗಳಿಗೆ ಚಾಲನೆ ನೀಡಲಿದ್ದರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+