ಇದೇನಿದು ಕೊಹ್ಲಿ, ಸೈನಾ, ಹೃತಿಕ್ ಗೆ ರಾಜ್ಯವರ್ಧನ್ ಚಾಲೆಂಜ್?

ಬೆಂಗಳೂರು, ಮೇ 23: ಫಿಟ್ನೆಸ್... ಫಿಟ್ನೆಸ್... ಫಿಟ್ನೆಸ್... ಅಷ್ಟಕ್ಕೂ ನೀವೆಷ್ಟು ಫಿಟ್? ಹಾಗೊಂದು ಚಾಲೆಂಜ್ ಹಾಕಿದ್ದಾರೆ ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್. ಓಲಿಂಪಿಕ್ಸ್ ಪದಕ ವಿಜೇತ ಶೂಟರ್ ಸಹ ಆಗಿರುವ ರಾಥೋಡ್, ಟ್ವಿಟ್ಟರ್ ನಲ್ಲಿ FitnessChallenge ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಹಲವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ.

ದಣಿವಿಲ್ಲದೆ, ದಿನವಿಡಿ ದುಡಿಯುವ ಪ್ರಧಾನಿ ನರೇಂದ್ರ ಮೋದಿಯವರೇ ನನಗೆ ಈ ಕೆಲಸಕ್ಕೆ ಸ್ಫೂರ್ತಿ ಎಂದು ಅವರು ಹೇಳಿದ್ದಾರೆ.

ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಹ್ಯಾಶ್ ಟ್ಯಾಗ್ ಜೊತೆಗೆ ಅವರು ಚಾಲೆಂಜ್ ಮಾಡಿದ್ದು, ಬಾಲಿವುಡ್ ನಟ ಹೃತಿಕ್ ರೋಷನ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗೆ.

ಫಿಟ್ನೆಸ್ ಕುರಿತು ಜನರಲ್ಲಿ ಸಾಕಷ್ಟು ಕಾಳಜಿ ಮೂಡುತ್ತಿರುವ ಈ ಹೊತ್ತಲ್ಲಿ ಇಂಥದೊಂದು ಚಾಲೆಂಜ್ ಸ್ವಾಗತಾರ್ಹವೇ. ಯಾರು ಬೇಕಾದರೂ ತಮ್ಮ ಸ್ನೇಹಿತರಿಗೆ ಫಿಟ್ನೆಸ್ ಚಾಲೆಂಜ್ ಮಾಡಬಹುದು. ಈ ಚಾಲೆಂಜ್ ಅನ್ನು ಅಕ್ಸೆಪ್ಟ್ ಮಾಡಿರುವ ಕೆಲವರ ವಿಡಿಯೋ ಇಲ್ಲಿದೆ.

ರಾಜ್ಯವರ್ಧನ್ ಚಾಲೆಂಜ್

ನೀವು ನಿಮ್ಮ ಫಿಟ್ನೆಸ್ ಹೇಗೆ ಕಾಯ್ದುಕೊಳ್ಳುತ್ತೀರಿ ಎಂಬ ಕುರಿತ ಫೋಟೋ ಅಥವಾ ವಿಡಿಯೋವನ್ನು ಪೋಸ್ಟ್ ಮಾಡಿ, ಮತ್ತು ನಿಮ್ಮ ಮತ್ತಷ್ಟು ಸ್ನೇಹಿತರಿಗೆ ಫಿಟ್ನೆಸ್ ಚಾಲೆಂಜ್ ಮಾಡಿ. ನಾನು ಹೃತಿಕ್ ರೋಷನ್, ವಿರಾಟ್ ಕೋಹ್ಲಿ ಮತ್ತು ಸೈನಾ ನೆಹ್ವಾಲ್ ಅವರಿಗೆ ಫಿಟ್ನೆಸ್ ಚಾಲೆಂಜ್ ಮಾಡುತ್ತೇನೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ರಾಜ್ಯವರ್ಧನ್ ಸಿಂಗ್ ರಾಥೋಡ್.

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

ನನಗೆ ಚಾಲೆಂಜ್ ಮಾಡಿದ್ದಕ್ಕೆ ಬಹಳ ಧನ್ಯವಾದಗಳು ಸರ್ ಎಂದು ತಾನು ಫಿಟ್ನೆಸ್ ಹೇಗೆ ಕಾಯ್ದುಕೊಳ್ಳುತ್ತೇನೆ ಎಂಬ ವಿಡಿಯೋ ಪೋಸ್ಟ್ ಮಾಡಿದ್ದಾರೆ ಸೈನಾ ನೆಹ್ವಾಲ್.

ಮೇರಿ ಕೋಮ್ ಫಿಟ್ನೆಸ್ ರಹಸ್ಯ

ನಾನು ಎಷ್ಟು ಫಿಟ್ ಆಗಿರುತ್ತೇನೋ ಅಷ್ಟು ಶಕ್ತಿ ನನ್ನಲ್ಲಿರುತ್ತದೆ ಎಂದಿದ್ದಾರೆ ಬಾಕ್ಸರ್ ಮೇರಿ ಕೋಮ್.

ಹೃತಿಕ್ ರೋಷನ್ ಸೈಕಲ್ ಸವಾರಿ

ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಈ ಚಾಲೆಂಜ್ ನನಗೆ ಸಂತಸ ನೀಡಿದೆ. ನಾನು ಪ್ರತಿದಿನ ನನ್ನ ಆಫೀಸಿಗೆ ಸೈಕಲ್ ನಿಂದ ಹೋಗುತ್ತೇನೆ. ನನಗೆ ಕಾರಿನಲ್ಲಿ ಕುಳಿತು ಹೋಗುವುದು ಬೇಸರ. ವಾಕ್ ಮಾಡೋದು, ಸೈಕಲ್ ತುಳಿಯುವುದು, ಜಾಗ್ ಮಾಡುವುದು ಇವೆಲ್ಲ ಈ ಭೂಮಿಯ ಸೌದರ್ಯವನ್ನು ಅರಿಯಲು ಸಹಾಯವಾಗುತ್ತದೆ, ಭಾರತವನ್ನು ಅರಿಯುವುದಕ್ಕೂ ಇದು ಸಾಧ್ಯ.

ಪುಟ್ಟ ಕಂದನ ಫಿಟ್ನೆಸ್ ಸಾಹಸ!

ಪುಟ್ಟ ಮಗುವೊಬ್ಬ ಫಿಟ್ನೆಸ್ ಮಂತ್ರ ಪಠಿಸುತ್ತಿರುವ ವಿಡಿಯೋವೊಂದನ್ನು ಪ್ರಮಿಳಾ ದೀಕ್ಷಿತ್ ಎಂಬುವವರು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+