Get Updates
Get notified of breaking news, exclusive insights, and must-see stories!

8th Pay Commission: 3.25 ಫಿಟ್‌ಮೆಂಟ್‌ಗೆ ನೌಕರರ ಪಟ್ಟು: ಕನಿಷ್ಠ ವೇತನ 58,500 ರೂ.ಗೆ ಏರಿಕೆ ಸಾಧ್ಯತೆ

ನವದೆಹಲಿ: 8ನೇ ವೇತನ ಆಯೋಗಕ್ಕೆ (8th Pay Commission) ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆಗಳ ಹೆಚ್ಚಳದ ಅಂಶಗಳು ಸೇರಿ ಕೆಲವು ಬೇಡಿಕೆಗಳ ಶಿಫಾರಸಿಗೆ ಜ್ಞಾಪಕ ಪತ್ರ ಸಿದ್ಧಪಡಿಸಲಾಗುತ್ತಿದೆ. ದೇಹಲಿಯಲ್ಲಿ ರಾಷ್ಟ್ರೀಯ ಜಂಟಿ ಸಲಹಾ ಯಂತ್ರ ಮಂಡಳಿ (ಎನ್‌ಸಿ ಜೆಸಿಎಂ)ಯಡಿ ಪ್ರತಿನಿಧಿಗಳ ತಂಡವು ಸಭೆ ಆರಂಭಿಸಿದೆ. ಅನೇಕ ವಿಚಾರಗಳು ಚರ್ಚೆ ಆಗಿದ್ದು, ಇನ್ನೊಂದು ವಾರ ನೌಕರರ ಪ್ರತಿನಿಧಿಗಳು, ಸಂಘಟನೆಗಳ ಮುಖಂಡರಿಗೆ ನಗರದಲ್ಲಿರುವಂತೆ ಸೂಚಿಸಲಾಗಿದೆ. 8ನೇ ವೇತನ ಆಯೋಗದಡಿ ವೇತನ ಪರಿಷ್ಕರಣೆಗೆ ಫಿಟ್‌ಮೆಂಟ್ ಅಂಶ ಚರ್ಚೆಗಳು, ನೌಕರರ ಬೇಡಿಕೆಗಳ ಮಾಹಿತಿ ಇಲ್ಲಿದೆ.

ಜೆಸಿಎಂ (ಸಿಬ್ಬಂದಿ ತಂಡ) ನೇತೃತ್ವದಲ್ಲಿ ಫೆಬ್ರವರಿ 25ರಂದು ಸಭೆ ಆರಂಭವಾಗಿದೆ. ಕೇಂದ್ರ ಸರ್ಕಾರಿ ನೌಕರರ ಮೇಲೆ ಪರಿಣಾಮ ಬೀರುವ ಪ್ರತಿ ವಿಷಯಗಳ ವಿವರವಾದ ಚರ್ಚೆಗಳು ಮತ್ತು ಪ್ರಸ್ತಾವನೆಗಳು ಸಭೆಯಲ್ಲಿ ಅಂತಿಮಗೊಳ್ಳಲಿವೆ. ಮುಖ್ಯವಾಗಿ ಜಾರಿ ಆಗಲಿರುವ 08 ವೇತನ ಆಯೋಗದಡಿ ಸಂಬಳ ಪರಿಷ್ಕರಣೆಗೆ ಫಿಟ್‌ಮೆಂಟ್ ಅಂಶ ಮುಖ್ಯಾಗಿರುತ್ತದೆ.

Fitment 3 25 Consider for Salary Hike of Govt Employees Under 8th Pay Commission Discussed at meeting

ಫಿಟ್‌ಮೆಂಟ್ ಎಂದರೆ ಅಸ್ತಿತ್ವದಲ್ಲಿರುವ ನೌಕರರ ಮೂಲ ವೇತನ ಮತ್ತು ಪಿಂಚಣಿಗೆ ಅನ್ವಯಿಸುವ ಅಂಶವಾಗಿದೆ. ಅದರ ಸಂಖ್ಯೆಯಲ್ಲಿನ ಸಣ್ಣ ಬದಲಾವಣೆ ಆದರೂ ಸಹಿ ನೌಕರರ ಸಂಬಳ, ಪಿಂಚಣಿ, ತುಟ್ಟಿ ಭತ್ಯೆ ಮತ್ತು ಭವಿಷ್ಯದ ಏರಿಕೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಉದಾಹರಣೆ ಸಮೇತ ನೊಡುವುದಾದರೆ, ನೌಕರನ ಕನಿಷ್ಠ ಮೂಲ ವೇತನ 18,000 ರೂಪಾಯಿ ಇದ್ದಲ್ಲಿ, ಆಗ ಫಿಟ್‌ಮೆಂಟ್ ಅಂಶವನ್ನು ಸರ್ಕಾರ 2.0 ಪರಿಗಣಿಸಿದರೆ ಮೂಲ ವೇತನ 36,000 ಕ್ಕೆ ಏರಿಕೆ ಆಗುತ್ತದೆ. ಒಂದು ವೇಳೆ ಫಿಟ್‌ಮೆಂಟ್ ಅನ್ನು 3.0 ನಷ್ಟು ಪರಿಗಣಿಸಿದರೆ ವೇತನ 54,000 ಗೆ ಹೆಚ್ಚಾಗುತ್ತದೆ. ಈ ಬಾರಿ 3.0ರ ಬದಲಾಗಿ 3.25 ರ ಅಂಶದ ಕುರಿತು ಸಭೆಯಲ್ಲಿ ಚರ್ಚಿಸಿದ್ದಾರೆ. ಸರ್ಕಾರ 3.25 ಫಿಟ್‌ಮೆಂಟ್ ಅಂಶಕ್ಕೆ ಒಪ್ಪಿದರೆ ನೌಕರರ ಮೂಲ ವೇತನ ಸುಮಾರು ₹58,500 ಏರಿಕೆ (18,000 × 3.25) ಆಗುವ ಸಾಧ್ಯತೆ ಇದೆ.

ಈ ಹಿಂದೆ ಇದ್ದ 7ನೇ ವೇತನ ಆಯೋಗದಡಿ 2.57ರ ಫಿಟ್‌ಮೆಂಟ್ ಅಂಶ ಪರಿಗಣಿಸಿದ್ದರಿಂದ ನೌಕರರ ಕನಿಷ್ಠ ವೇತನವು ₹7,000 ದಿಂದ ₹18,000 ಕ್ಕೆ ಹೆಚ್ಚಾಗಿತ್ತು. ಇದೆಲ್ಲ ಗಮನಿಸಿದರೆ ಫಿಟ್‌ಮೆಂಟ್ ನಲ್ಲಿನ ಸಣ್ಣ ಏರಿಕೆಯು ಲಕ್ಷಾಂತರ ನೌಕರರಿಗೆ ಎಷ್ಟು ಮುಖ್ಯವಾಗುತ್ತದೆ ಎಂದು ತಿಳಿಯುತ್ತದೆ.

ತಜ್ಞರು ಮತ್ತು ವರದಿಗಳು ಹೇಳುವುದೇನು?

ಕೆಲ ತಿಂಗಳುಗಳಲ್ಲಿ ಸಂಭಾವ್ಯ ಫಿಟ್‌ಮೆಂಟ್ ಅಂಶದಲ್ಲಿ ಬದಲಾವಣೆ ಆಗಿದೆ. ಕೋಟಕ್ ಸಾಂಸ್ಥಿಕ ಇಕ್ವಿಟೀಸ್ ಆ ಅಂಶವನ್ನು ಸುಮಾರು 1.8 ಎಂದು ಅಂದಾಜಿಸಿದೆ. ಆಂಬಿಟ್ ಕ್ಯಾಪಿಟಲ್ 30-34ರಷ್ಟು ವೇತನ ಹೆಚ್ಚಳ ನಿರೀಕ್ಷೆ ಇದೆ. ಈ ಏರಿಕೆಯು 1.8 ಮತ್ತು 2.46 ರ ನಡುವಿನ ಫಿಟ್‌ಮೆಂಟ್ ಅಂಶ ಪರಿಗಣಿಸಿದ್ದರ ಸೂಚನೆಯಾಗಿದೆ.

ಮಾಜಿ ಹಣಕಾಸು ಕಾರ್ಯದರ್ಶಿ ಎಸ್.ಸಿ. ಗಾರ್ಗ್ 1.92 ರಿಂದ 2.08 ರ ಹೆಚ್ಚು ವಾಸ್ತವಿಕ ಶ್ರೇಣಿಯನ್ನು ಸೂಚಿಸಿದ್ದಾರೆ, ಅತಿ ಹೆಚ್ಚಿನ ಮುನ್ಸೂಚನೆಗಳು ಸರ್ಕಾರದ ಹಣಕಾಸಿನ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಸಭೆಯ ಸದಸ್ಯರನ್ನು ಎಚ್ಚರಿಸಿದ್ದಾರೆ. ಇದರ ನಡುವೆ ನೌಕರರು ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚ ಉಲ್ಲೇಖಿಸಿ 7ನೇ ವೇತನ ಆಯೋಗ 2.57ರ ವಿರುದ್ಧ ನಿರೀಕ್ಷೆ ಹೊಂದಿದ್ದಾರೆ. ಅಂದರೆ ಈ ಬಾರಿ 3.25 ಅಂಶ ಪರಿಗಣಿಸಬೇಕೆಂದು ಆಯೋಗಕ್ಕೆ ಸಲ್ಲಿಸುವ ವರದಿಯಲ್ಲಿ ಉಲ್ಲೇಖಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ.

3.25 ರವರೆಗೆ ಫಿಟ್‌ಮೆಂಟ್ ಅಂಶ ಪ್ರಸ್ತಾಪ, ಆಗ್ರಹ

ರಾಷ್ಟ್ರೀಯ ಅಂಚೆ ಸಂಸ್ಥೆಗಳ ಒಕ್ಕೂಟ (FNPO) NC JCM (ಸ್ಟಾಫ್ ಸೈಡ್) ಸದಸ್ಯರು 3.0 ರಿಂದ 3.25 ರವರೆಗಿನ ಫಿಟ್‌ಮೆಂಟ್ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಇದರ ಚರ್ಚೆಗಳು ತೀವ್ರಗೊಂಡಿವೆ. ಈ ಹಿಂದಿನ ವೇತನ ಆಯೋಗದಡಿ ವೇತನ ಹೆಚ್ಚಳ ವೇಳೆ ಈ ಅಂಶವನ್ನು ಸಮರ್ಥವಾಗಿ ತರ್ಕಬದ್ಧಗೊಳಿಸಿಲ್ಲ. ಹೀಗಾಗಿಯೇ ಕೆಲ ಶ್ರೇಣಿಗಳಲ್ಲಿ ಅನಿಶ್ಚಿತತೆ ಉಂಟಾಯಿತು ಎಂಬುದನ್ನು ಚರ್ಚಿಸಲಾಯಿತು. ಹೀಗಾಗಿ ಈ ಬಾರಿಯ ಪಿಟ್‌ಮೆಂಟ್ ಅಂಶ, ವಾರ್ಷಿಕ 5ರಷ್ಟು ಏರಿಕೆ, ಭತ್ಯೆ ಹೆಚ್ಚಳ, ವೇತನ ಮ್ಯಾಟ್ರಿಕ್ಸ್ ಬದಲಾವಣೆಗಳಿಗೆ ಆಗ್ರಹಿಸಲಾಗುತ್ತಿದೆ.

FNPO ಪ್ರಧಾನ ಕಾರ್ಯದರ್ಶಿ ಶಿವಾಜಿ ವಾಸಿರೆಡ್ಡಿ ಅವರು 8 ನೇ ವೇತನ ಆಯೋಗದ ಅಧ್ಯಕ್ಷರಿಗೆ ಸಲ್ಲಿಸುವ ಮೊದಲು - ಫಿಟ್‌ಮೆಂಟ್ ಅಂಶ, ಕನಿಷ್ಠ ವೇತನ ಮತ್ತು ಭತ್ಯೆಗಳು ಸೇರಿದಂತೆ - ಏಕೀಕೃತ ಶಿಫಾರಸುಗಳನ್ನು ಕರಡು ಸಮಿತಿಯೊಂದಿಗೆ ಚರ್ಚಿಸುವ ನಿರೀಕ್ಷೆಯಿದೆ ಎಂದು ಸೂಚಿಸಿದ್ದಾರೆ. ನೌಕರರ ಸಂಘಟನೆಗಳು 3.0 ಅಂಶ ಪರಿಗಣಿಸಲು ಒತ್ತಾಯಿಸಿವೆ. ಆದರೆ ವಿಶ್ಲೇಷಕರು 2.0 ರಿಂದ 2.5 ರ ನಡುವೆ ಅಂತಿಮ ಶಿಫಾರಸು ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದೆಲ್ಲದರ ಬಗ್ಗೆ ಸಭೆಯ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ.

ವರದಿ ಸಿದ್ಧಪಡಿಸಿ ಆಯೋಗಕ್ಕೆ ಸಲ್ಲಿಕೆ

ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಪ್ರತಿನಿಧಿಸುವ ಉನ್ನತ ಸಂಸ್ಥೆಯಾದ ಜಂಟಿ ಸಲಹಾ ಯಂತ್ರ ಮಂಡಳಿಯ (ಎನ್‌ಸಿ ಜೆಸಿಎಂ) ರಾಷ್ಟ್ರೀಯ ಮಂಡಳಿ (ಸಿಬ್ಬಂದಿ ತಂಡ)ಯು ವೇತನ, ಭತ್ಯೆಗಳು, ಸೇವಾ ಪರಿಸ್ಥಿತಿಗಳು ಮತ್ತು ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ನೌಕರರ ಸಂಘಗಳು ಮತ್ತು ಒಕ್ಕೂಟಗಳು ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸುವ ಅಧಿಕೃತ ವೇದಿಕೆಯಾಗಿದೆ. ಅದರಡಿ ಚರ್ಚಿಸಿ ಸಚಿವಾಲಯಗಳು ಮತ್ತು ಇಲಾಖೆಗಳ ನೌಕರರು ಒಮ್ಮತದಿಂದ ಹಲವರು ಬೇಡಿಕೆಗಳಿರುವ ಸಮಗ್ರ ಜ್ಞಾಪಕ ಪತ್ರ ರಚಿಸಲಿದ್ದಾರೆ. ಅದನ್ನು ಎಂಟನೇ ವೇತನ ಆಯೋಗಕ್ಕೆ ಸಲ್ಲಿಸಿ, ಅದರಲ್ಲಿನ ಅಂಶಗಳ ಜಾರಿಗೆ ಶಿಫಾರಸು ಮಾಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+