ಕಡಲ ತೀರ ಕಾರ್ಯಾಚರಣೆ ವಿಮಾನ P8I ಲೋಕಾರ್ಪಣೆ

ಆರ್ಕೊಣಂ, ನವೆಂಬರ್, 13 : ಭಾರತೀಯ ನೌಕಾಪಡೆಯ ಹೆಚ್ಚು ಶಕ್ತಿಯುತವಾದ P8I ಎಂಬ ಸಾಗರ ಗಸ್ತು ವಿಮಾನ ಶುಕ್ರವಾರ ತಮಿಳುನಾಡಿನ ಅರ್ನಾಕೊಣಂನಲ್ಲಿ ರಾಷ್ಟ್ರಕ್ಕೆ ಲೋಕಾರ್ಪಣೆಗೊಂಡಿದ್ದು, ಇದು P-8A ಗಿಂತ ಭಿನ್ನವಾಗಿ ಕಾರ್ಯನಿರ್ವಹಿಸಲಿದೆ.

P8I ಎಂಬ ಸಾಗರ ಗಸ್ತು ವಿಮಾನಕ್ಕೆ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಭಾರತೀಯ ನೌಕಾಪಡೆಯ ಚೀಫ್ ಅಡ್ಮಿರಲ್ ಆರ್ ಕೆ ಧಾವನ್ ಹಾಗೂ ಹಲವಾರು ನೌಕಾಪಡೆ ಕಾರ್ಯನಿರ್ವಾಹಕರ ನೇತೃತ್ವದಲ್ಲಿ ಹಾರಾಟಕ್ಕೆ ಚಾಲನೆ ದೊರೆಯಿತು.[ಒಂದೇ ವಿಮಾನದಲ್ಲಿ ಹಾರಿರಿ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ]

First P8I Squadron dedicated to the nation at Aarkonam

ಭಾರತೀಯ ನೌಕಾಪಡೆಯು ಮೊದಲ ಅಂತರಾಷ್ಟ್ರೀಯ ವಿಮಾನ ಗ್ರಾಹಕರಾಗುವ ಉದ್ದೇಶದಿಂದ 2009ರಲ್ಲಿ 2 ಬಿಲಿಯನ್ ಮೊತ್ತದ 8 ವಿಮಾನಗಳ ಒಪ್ಪಂದ ಮಾಡಿಕೊಂಡಿತ್ತು. ಕಳೆದ ತಿಂಗಳು ಹಾರ್ಪೂನ್ ಬ್ಲಾಕ್ 2 ಎಂಬ ಕ್ಷಿಪಣಿ ತನ್ನೆಲ್ಲಾ ಪರೀಕ್ಷೆಗಳನ್ನು ಪೂರೈಸಿತ್ತು.

P8I ಎಂಬ ಸಾಗರ ಗಸ್ತು ವಿಮಾನವನ್ನು ವಿಶಾಲ ಪ್ರದೇಶ ಹಾಗೂ ಕಡಲ ತೀರದ ಕಾರ್ಯಾಚರಣೆಗಳಿಗೆ ಆಂಟಿ ಸರ್ಫೇಸ್ ವಾಋ್ ಫೇರ್ ಗೆ ಬಳಸಿಕೊಳ್ಳಲಾಗುವುದು. ಜಲಾಂತರ್ಗಾಮಿ ಯುದ್ದಗಳಲ್ಲಿ ಇದು ಪ್ರಮುಖ ಪಾತ್ರವಹಿಸಲಿದೆ. ಈಸ್ಟರ್ನ್ ನ್ಯಾವೆ ಕಮಾಂಡ್ ಐಎನ್ ಎಸ್ ರಾಜಾಲೀ ಇದರ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+