ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗ್ಪುರದ ತರಬೇತಿ ಕೇಂದ್ರಕ್ಕೆ ದಾಖಲಾದ ಮೊದಲ ಬ್ಯಾಚ್‌ನ ಅಗ್ನೀವೀರರು

|
Google Oneindia Kannada News

ನಾಗ್ಪುರ , ಜ. 02: ಬ್ರಿಗೇಡ್ ಆಫ್ ದಿ ಗಾರ್ಡ್ಸ್‌ನ ಮೊದಲ ಅಗ್ನಿವೀರ್ ಬ್ಯಾಚ್‌ನ ಸದಸ್ಯರು ತರಬೇತಿಗಾಗಿ ನಾಗ್ಪುರದ ಕ್ಯಾಂಪ್ಟಿಯ ಗಾರ್ಡ್ಸ್ ರೆಜಿಮೆಂಟಲ್ ಸೆಂಟರ್‌ನಲ್ಲಿ ದಾಖಲಾಗಿದ್ದಾರೆ.

ತರಬೇತಿಗಾಗಿ ದಿ ಗಾರ್ಡ್ಸ್ ರೆಜಿಮೆಂಟಲ್ ಸೆಂಟರ್‌ಗೆ ದಾಖಲಾಗಿರುವ ಈ ಅಗ್ನಿವೀರರು ವಿವಿಧ ನೇಮಕಾತಿ ಕಚೇರಿಗಳಿಂದ ಡಿಸೆಂಬರ್ 25 ರಿಂದ ಡಿಸೆಂಬರ್ 31ರ ನಡುವೆ ಇಲ್ಲಿಗೆ ಬಂದಿದ್ದಾರೆ. ಒಟ್ಟು 112 ಅಗ್ನಿವೀರರು ಆರು ತಿಂಗಳುಗಳ ಕಾಲ ಈ ಕೇಂದ್ರದಲ್ಲಿ ತರಬೇತಿ ಪಡೆಯಲಿದ್ದಾರೆ.

ತರಬೇತಿಗಾಗಿ ಭಾರತೀಯ ಸೇನೆಗೆ ಸೇರಿದ ಜಮ್ಮು ಮತ್ತು ಕಾಶ್ಮೀರದ ಮೊದಲ ಬ್ಯಾಚ್‌ನ ಅಗ್ನಿವೀರರುತರಬೇತಿಗಾಗಿ ಭಾರತೀಯ ಸೇನೆಗೆ ಸೇರಿದ ಜಮ್ಮು ಮತ್ತು ಕಾಶ್ಮೀರದ ಮೊದಲ ಬ್ಯಾಚ್‌ನ ಅಗ್ನಿವೀರರು

ಕ್ಯಾಂಪ್ಟಿಯ ಗಾರ್ಡ್ಸ್ ರೆಜಿಮೆಂಟಲ್ ಸೆಂಟರ್‌ನಲ್ಲಿ ಆರು ತಿಂಗಳ ಅವಧಿಯ ತರಬೇತಿ ಸೋಮವಾರ (ಜನವರಿ 2) ಆರಂಭವಾಗಿದೆ. ತರಬೇತಿ ಪೂರ್ಣಗೊಂಡ ನಂತರ, ಭಾರತೀಯ ಸೇನೆಯಲ್ಲಿ ಹೆಚ್ಚಿನ ವಿಶೇಷ ತರಬೇತಿಗಾಗಿ ಅಗ್ನಿವೀರರನ್ನು ಅವರ ಘಟಕಗಳಿಗೆ ವಾಪಸ್ ಕಳುಹಿಸಲಾಗುತ್ತದೆ.

First batch of Agniveers reported at Guards Regimental Center, Kamptee

ಅಗ್ನಿಪಥ್ ಯೋಜನೆಯ ಹೊಸ ನೇಮಕಾತಿಯಾಗಿ ಕ್ಯಾಂಪ್ಟಿಯ ಗಾರ್ಡ್ಸ್ ರೆಜಿಮೆಂಟಲ್ ಸೆಂಟರ್‌ನಲ್ಲಿ ತರಬೇತಿ ಪಡೆಯುವ ಮೊದಲ ಅಗ್ನಿವೀರರ ಬ್ಯಾಚ್ ಇದಾಗಿದೆ.

ಕಳೆದ ವಾರ ಜಮ್ಮು ಮತ್ತು ಕಾಶ್ಮೀರದಿಂದ ಆಯ್ಕೆಯಾದ ಮೊದಲ ಬ್ಯಾಚ್ 'ಅಗ್ನಿವೀರರು' ತರಬೇತಿಗಾಗಿ ಭಾರತೀಯ ಸೇನೆಗೆ ಸೇರಿದ್ದರು. ದೈಹಿಕ ಪರೀಕ್ಷೆಗಳು, ವೈದ್ಯಕೀಯ ಪರೀಕ್ಷೆಗಳು, ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಸೇರಿದಂತೆ ಕಠಿಣ ಪರೀಕ್ಷೆಗಳ ನಂತರ ಸರಿಸುಮಾರು 200 ಅಭ್ಯರ್ಥಿಗಳನ್ನು ಅಗ್ನಿಪಥ್ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ.

ಆಯ್ಕೆಯಾದವರನ್ನು ಡಿಸೆಂಬರ್ 24, 2022 ರಂದು ಭಾರತೀಯ ಸೇನೆಯ ವಿವಿಧ ರೆಜಿಮೆಂಟ್‌ಗಳ ಸುಮಾರು 30 ತರಬೇತಿ ಕೇಂದ್ರಗಳಿಗೆ ಶ್ರೀನಗರದ ಸೇನಾ ನೇಮಕಾತಿ ಕಚೇರಿಯಿಂದ ಕಳುಹಿಸಲಾಗಿತ್ತು. ಈ ಜಮ್ಮು ಮತ್ತು ಕಾಶ್ಮೀರದಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಜನವರಿ 1 ರಿಂದ ತರಬೇತಿ ಜಾರಿಯಾಗಿದೆ.

First batch of Agniveers reported at Guards Regimental Center, Kamptee

ಕಳೆದ ಜೂನ್ 14 ರಂದು ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ಯೋಜನೆಯಡಿ ವಾರ್ಷಿಕವಾಗಿ ಸುಮಾರು 45,000 ರಿಂದ 50,000 ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಸೈನಿಕರಿಗೆ ನಾಲ್ಕು ವರ್ಷಗಳ ಅವಧಿಗೆ ತರಬೇತಿ ನೀಡಲಾಗುವುದು, ನಂತರ ಅವರಲ್ಲಿ ಕೇವಲ 25 ಪ್ರತಿಶತದಷ್ಟು ಸೈನಿಕರನ್ನು ಮಾತ್ರ ಕಾಯಂ ಸೇವೆಗೆ ನಿಯೋಜಿಸಲಾಗುವುದು. ಉಳಿದವರಿಗೆ ಪಿಂಚಣಿ ನೀಡಿ ಕಳುಹಿಸಲಾಗುತ್ತದೆ. ಈ ಯೋಜನೆಗೆ ಸಾಕಷ್ಟು ವಿರೋಧ ಉಂಟಾಗಿದ್ದು, ದೇಶಾದ್ಯಂತ ಪ್ರತಿಭಟನೆ ನಡೆದಿತ್ತು.

English summary
First batch of Agniveers reported at Guards Regimental Center, Kamptee for training. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X