ದೀಪಾವಳಿಗೆ ಇರುವ ಪಟಾಕಿ ದಾಸ್ತಾನು ಬಳಕೆ; ದೆಹಲಿ, ಎನ್ ಸಿಆರ್ ಗೆ ನಿರ್ಬಂಧ

ನವದೆಹಲಿ, ಅಕ್ಟೋಬರ್ 31: ದೆಹಲಿ ಹಾಗೂ ಸುತ್ತಮುತ್ತಲ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸದ್ಯಕ್ಕೆ ಇರುವ ಪಟಾಕಿ ದಾಸ್ತಾನನ್ನೇ ಈ ಬಾರಿ ದೀಪಾವಳಿಗೆ ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ದೆಹಲಿ ಹಾಗೂ ಸುತ್ತಲ ಪ್ರದೇಶಗಳಲ್ಲಿ 'ಹಸಿರು ಪಟಾಕಿಗಳನ್ನು' ಮಾತ್ರ ಸಿಡಿಸಬೇಕು. ಆ ಮೂಲಕ ಮಾಲಿನ್ಯವನ್ನು ನಿಯಂತ್ರಿಸಬೇಕು ಎಂದು ಸೂಚಿಸಲಾಗಿದೆ.

ಪುದುಚೆರಿ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಎರಡು ಗಂಟೆ ಪಟಾಕಿ ಸಿಡಿಸಲು, ಅದೂ ಬೆಳಗ್ಗೆ 4ರಿಂದ 5 ಹಾಗೂ ರಾತ್ರಿ 9ರಿಂದ 10 ಗಂಟೆಗೆ ಅನುಮತಿ ನೀಡಿದೆ. ಕಳೆದ ವಾರ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮಾರ್ಪಾಟು ಮಾಡಿದೆ. ರಾತ್ರಿ 8ರಿಂದ 10 ಗಂಟೆ ಮಧ್ಯೆ ಮಾತ್ರ ಪಟಾಕಿ ಸಿಡಿಸಬೇಕು ಹಾಗೂ 'ಸುರಕ್ಷಿತ ಹಾಗೂ ಹಸಿರು' ಪಟಾಕಿಗಳನ್ನೇ ಬಳಸಬೇಕು ಎಂದು ಆದೇಶ ನೀಡಿತ್ತು.

ಇ ಕಾಮರ್ಸ್ ಮೂಲಕ ಪಟಾಕಿ ಮಾರಾಟ ಮಾಡುವುದನ್ನು ದೇಶದಾದ್ಯಂತ ನಿಷೇಧ ಮಾಡಲಾಗಿದೆ. ದೀಪಾವಳಿಯಂದು ಈಗಾಗಲೇ ರಾತ್ರಿ 8ರಿಂದ 10 ಗಂಟೆ ಮಧ್ಯೆ ಪಟಾಕಿ ಸಿಡಿಸಲು ಅನುಮತಿ ನೀಡಿದ ಜತೆಗೆ ಧಾರ್ಮಿಕ ನಂಬಿಕೆ ಪ್ರಕಾರ ಬೆಳಗ್ಗೆ ಹೊತ್ತು ಕೂಡ ಪಟಾಕಿ ಸಿಡಿಸಲು ಅನುಮತಿ ನೀಡಬೇಕು ಎಂದು ತಮಿಳುನಾಡು ಸರಕಾರ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಿತ್ತು.

Firecrackers other than green crackers will not be sold in Delhi-NCR

ಬೆಳಗ್ಗೆ 4.30ರಿಂದ 6.30ರ ಮಧ್ಯೆ ಪಟಾಕಿ ಸಿಡಿಸಲು ಅನುಮತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಕೇಳಿಕೊಳ್ಳಲಾಗಿತ್ತು. ನವೆಂಬರ್ 6ನೇ ತಾರೀಕು ತಮಿಳುನಾಡಿನಲ್ಲಿ ನರಕ ಚತುರ್ದಶಿ ಆಚರಿಸಲಾಗುತ್ತದೆ.

ಆಯಾ ರಾಜ್ಯಗಳಲ್ಲಿ ಹಬ್ಬದ ವಿಚಾರವಾಗಿ ಬೇರೆಯದೇ ನಂಬಿಕೆಗಳು ಇರುತ್ತದೆ. ದೀಪಾವಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ಬಂಧದಿಂದ ಜನರ ಧಾರ್ಮಿಕ ಹಕ್ಕನ್ನು ನಿರಾಕರಿಸಿದಂತಾಗುತ್ತದೆ. ಇದರಿಂದ ರಾಜ್ಯದ ಜನರಿಗೆ ಬೇಸರ ಉಂಟಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಈ ಬಾರಿ ದೀಪಾವಳಿಗೆ 'ಹಸಿರು ಪಟಾಕಿ' ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಬೇಕಾದಂಥ ವ್ಯವಸ್ಥೆ ಸದ್ಯಕ್ಕೆ ಇಲ್ಲ ಎಂದು ಪಟಾಕಿ ತಯಾರಕರು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದ್ದರು. ಆನಂತರ, ದೆಹಲಿ ಹಾಗೂ ಎನ್ ಸಿಆರ್ ಹೊರತುಪಡಿಸಿ ದೇಶದ ಉಳಿದ ಕಡೆಗಳಲ್ಲಿ ಈಗಿರುವ ಪಟಾಕಿ ದಾಸ್ತಾನು ಬಳಸಬಹುದು ಎಂದು ಆದೇಶ ನೀಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+