ಲೈಂಗಿಕ ಕಿರುಕುಳ: ಸಚಿವರ ರಾಜೀನಾಮೆ, ಬಂಧನ ಸಾಧ್ಯತೆ

FIR against Kashmir minister Shabir Ahmad Khan for alleged sexual assault on doctor
ನವದೆಹಲಿ, ಫೆ. 7- ಮಹಿಳಾ ವೈದ್ಯರೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಜಮ್ಮು ಕಾಶ್ಮೀರ ಸಚಿವ ಶಬ್ಬೀರ್ ಅಹಮದ್ ಖಾನ್ ಗೆ ತಕ್ಷಣ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಆದೇಶಿಸಿದೆ.

ರಜಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕ ಶಬ್ಬೀರ್ ಅಹಮದ್ ಖಾನ್ ಆರೋಗ್ಯ ಸಚಿವನಾಗಿದ್ದು, ಆರೋಪದ ವಿಚಾರಣೆ ಪೂರ್ಣಗೊಂಡು ಇತ್ಯರ್ಥವಾಗುವವರೆಗೆ ಮಂತ್ರಿ ಸ್ಥಾನ ತ್ಯಜಿಸುವಂತೆ ಕಾಂಗ್ರೆಸ್ ಹೈಕಮಾಂಡ್ ತಿಳಿಸಿದೆ.

ಪ್ರಕರಣದ ಸಂಬಂಧ ಪೊಲೀಸರು ಈಗಾಗಲೇ ಸಚಿವರಿಗೆ ನೋಟೀಸ್ ನೀಡಿದ್ದು, ಯಾವುದೇ ಕ್ಷಣ ಸಚಿವ ಶಬ್ಬೀರ್‌ ಬಂಧನವಾಗುವ ಸಾಧ್ಯತೆಯಿದೆ.

ಬೆಳಗಿನ ಸುದ್ದಿ: ದಿಲ್ಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಮುಖಂಡನೊಬ್ಬ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಫೆ. 8ರವರೆಗೂ ನ್ಯಾಯಾಂಗ ಬಂಧನಕ್ಕೀಡಾಗಿರುವ ಹೊತ್ತಿನಲ್ಲೇ ದೆಹಲಿ ಮೇಲಿನ ಜಮ್ಮು ಕಾಶ್ಮೀರದ ಸಚಿವರೊಬ್ಬರ ಮೇಲೆ ಲೈಂಗಿಕ ಕಿರುಕುಳ ಆಪಾದನೆ ಮೇಲೆ FIR ದಾಖಲಾಗಿದೆ.

ಮಹಿಳಾ ವೈದ್ಯರೊಬ್ಬರು ನೀಡಿದ ದೂರಿನನ್ವಯ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಸ್ಥಳೀಯ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿತ್ತು.

ಸಹಾಯಕ ಆರೋಗ್ಯ ಸಚಿವ ಶಬ್ಬೀರ್ ಅಹಮದ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 354 ಮತ್ತು 509 ಅಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಜಮ್ಮುವಿನ ಪ್ರಧಾನ ನ್ಯಾಯಾಧೀಶರು ಸ್ಥಳೀಯ ಪೊಲೀಸರಿಗೆ ಸೂಚಿಸಿದ್ದರು.

ಜಮ್ಮು ಕಾಶ್ಮೀರದ ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಚಿವರಾಗಿದ್ದಾರೆ. ಜಮ್ಮುವಿನ ಶಹೀದ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಚಿವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಬಾಧಿತ ವೈದ್ಯೆ ಒಂದು ವಾರದಿಂದ ಪ್ರಯತ್ನಿಸಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಿರಲಿಲ್ಲ. ಕೊನೆಗೆ ಕೋರ್ಟಿಗೆ ಮೊರೆ ಹೋದ ಮಹಿಳೆ ಸಚಿವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ.

ಸೆಕ್ಷನ್ 509 ಅನುಸಾರ 'ಮಹಿಳೆಯ ಗೌರವಕ್ಕೆ ಚ್ಯುತಿ ತರುವಂತಹ ಯಾವುದೇ ಪದ, ಸಂಜ್ಞೆ ಅಥವಾ ಕೃತ್ಯ ನಡೆಸಿದರೆ ಅಂತಹವರ ವಿರುದ್ಧ Indian Penal Code (IPC) ಅನುಸಾರ ಪ್ರಕರಣ ದಾಖಲಿಸಿಕೊಳ್ಳಬಹುದು. ಆರೋಪ ಸಾಬೀತಾದಲ್ಲಿ ಒಂದು ವರ್ಷದವರೆಗೂ ಜೈಲುಶಿಕ್ಷೆ ವಿಧಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+