ಆನ್‌ಲೈನ್‌ನಲ್ಲಿ ಅಬಾರ್ಷನ್ ಔಷಧ ಸೇಲ್: ಅಮೆಜಾನ್ ವಿರುದ್ಧ ಎಫ್‌ಐಆರ್ ದಾಖಲು

ಮುಂಬೈ, ಮೇ 2: ಅರ್ಹ ವೈದ್ಯರ ಶಿಫಾರಸು ಪತ್ರ ಇಲ್ಲದೇ ಆನ್‌ಲೈನ್‌ನಲ್ಲಿ ಆಬಾರ್ಷನ್ ಕಿಟ್ ಮಾರಾಟ ಮಾಡಿದ ಅಮೆಜಾನ್ ವಿರುದ್ಧ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಎಫ್‌ಐಆರ್ ದಾಖಲಿಸಿದೆ. ಗರ್ಭಪಾತಕ್ಕೆ ಸಾಮಾನ್ಯವಾಗಿ ಬಳಸಲಾಗುವ ಎಂಟಿಪಿ ಕಿಟ್ ಅನ್ನು ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಲಾಗುತ್ತಿರುವುದು ಕಂಡುಬಂದಿತ್ತು. ಅಮೆಜಾನ್‌ನಲ್ಲಿ ಸ್ವತಃ ಎಂಟಿಪಿ ಕಿಟ್ (Mifepristone and Misoprostol Kit) ಆರ್ಡರ್ ಮಾಡಿ ತರಿಸಿಕೊಂಡು ಖಾತ್ರಿಯಾದ ಬಳಿಕ ಎಫ್‌ಐಆರ್ ಹಾಕಲಾಗಿದೆ.

ಎ-ಕೇರ್ (A-Kare) ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಅಮೇಜಾನ್‌ನಲ್ಲಿ ಅಬಾರ್ಷನ್ ಕಿಟ್ ಮಾರಲಾಗುತ್ತಿತ್ತು. ಇದನ್ನು ಖರೀದಿಸುವಾಗ ಪ್ರಿಸ್‌ಕ್ರಿಪ್ಷನ್ ಕೇಳಲೇ ಇಲ್ಲ. ಅದಿಲ್ಲದೆ ಕಿಟ್ ಅನ್ನು ಡೆಲಿವರಿ ಮಾಡಲಾಯಿತು.

ಆದರೆ, ಈ ಕಿಟ್‌ನ ಪಾರ್ಸಲ್ ತಂದ ಕೊರಿಯರ್‌ನಲ್ಲಿ ಸೇಲ್ ಬಿಲ್ ಅನ್ನು ಒಳಗೊಂಡಿರಲಿಲ್ಲ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಪ್ರಾಧಿಕಾರವು ಇನ್ನಷ್ಟು ವಿಚಾರಣೆ ನಡೆಸಿದಾಗ ಈ ಔಷಧವನ್ನು ಒಡಿಶಾದಿಂದ ಸಪ್ಲೈ ಮಾಡಿರುವುದು ತಿಳಿದುಬಂದಿದೆ. ಆದರೆ, ಇನ್ನೂ ಅಚ್ಚರಿ ಎಂದರೆ ಮಾರಾಟಗಾರ ಒಡಿಶಾದವರಾಗಿದ್ದಾರೆ. ಅವರ ಹೆಸರನ್ನ ಬಳಸಿ ಬೇರೊಬ್ಬ ವ್ಯಕ್ತಿಯು ಅಮೇಜಾನ್‌ನಲ್ಲಿ ಸೆಲ್ಲರ್ ಆಗಿ ನೊಂದಣಿ ಮಾಡಿದ್ದಾರೆ.

FIR against Amazon for selling Abortion Kit without prescription

ಅಬಾರ್ಷನ್ ಕಿಟ್ ಮಾರುವಂತಿಲ್ಲವಾ?
ಗರ್ಭಪಾತಕ್ಕೆ ಬಳಸುವ ಎಂಟಿಪಿ ಕಿಟ್ ಅನ್ನು 1940ರ ಡ್ರಗ್ಸ್ ಕಾಯ್ದೆ ಅಡಿ ಸ್ಕೆಡ್ಯೂಲ್ ಎಚ್ ಔಷಧ ವರ್ಗೀಕರಣಕ್ಕೆ ಸೇರಿಸಲಾಗಿದೆ. ಅರ್ಹ ವೈದ್ಯರ ಪ್ರಿಸ್‌ಕ್ರಿಪ್ಷನ್ ಇದ್ದರೆ ಮಾತ್ರ ಇದರ ಮಾರಾಟ ಮಾಡಬೇಕೆಂದು ನಿಯಮ ಇದೆ. ಈ ಔಷಧವನ್ನು ಆಸ್ಪತ್ರೆಯಲ್ಲಿ ತಜ್ಞರ ಮೂಲಕ ಬಳಸಬೇಕೆಂದು 2002ರ ಗರ್ಭಪಾತ ಕಾನೂನು ಹೇಳುತ್ತದೆ.

ಆದರೂ ಆನ್‌ಲೈನ್‌ನಲ್ಲಿ ಇಂಥ ಹಲವು ಔಷಧಗಳನ್ನು ವೈದ್ಯರ ಪ್ರಿಸ್‌ಕ್ರಿಪ್ಷನ್ ಇಲ್ಲದೇ ಮಾರಾಟ ಮಾಡಲಾಗುತ್ತಿದೆ ಎಂದು ಹಲವರು ಆರೋಪಿಸುತ್ತಾರೆ. ಇದೀಗ ಅಮೆಜಾನ್ ಮೇಲೆ ಹಾಕಲಾಗಿರುವ ಎಫ್‌ಐಆರ್‌ನಿಂದಾಗಿ ಇಂಥ ಅಕ್ರಮ ಮಾರಾಟಗಳಿಗೆ ಮುಂದೆ ಕಡಿವಾಣ ಬೀಳಬಹುದು ಎಂದು ನಿರೀಕ್ಷಿಸಬಹುದು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+