FEMA case: ವಾಷಿಂಗ್ ಮೆಷಿನ್‌ನಲ್ಲಿ ಕೋಟ್ಯಾಂತರ ಹಣ- ಇಡಿ ವಶ!

ದೆಹಲಿ ಮಾರ್ಚ್ 26: ಫೆಮಾ ಪ್ರಕರಣದಡಿ ಇಡಿ ನಡೆಸಿದ ಶೋಧನೆ ವೇಳೆ ವಾಷಿಂಗ್ ಮೆಷಿನ್‌ನಲ್ಲಿ ಕೋಟ್ಯಾಂತರ ರೂಪಾಯಿ ಹಣ ಬಚ್ಚಿಟ್ಟಿರುವುದು ಕಂಡು ಬಂದಿದೆ.

ವಿದೇಶಿ ವಿನಿಯಮ ನಿಯಮ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ವಿವಿಧ ನಗರಗಳಲ್ಲಿ ನಡೆಸಿದ ಶೋಧದ ವೇಳೆ ವಾಷಿಂಗ್ ಮೆಷಿನ್‌ನಲ್ಲಿ ಬಚ್ಚಿಟ್ಟಿದ್ದ 2.54 ಕೋಟಿ ರೂಪಾಯಿ ದಾಖಲೆಗಳಿಲ್ಲದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಂಗಳವಾರ ಎಕ್ಸ್ ಮೂಲಕ ತಿಳಿಸಿದೆ.

FEMA case 2 54 Crores in washing machine- ED seizes

ದೊಡ್ಡ ಪ್ರಮಾಣದಲ್ಲಿ ಭಾರತದ ಹೊರಗೆ ವಿದೇಶಿ ವಿನಿಮಯವನ್ನು ಕಳುಹಿಸುವಲ್ಲಿ ಕೆಲ ಸಂಸ್ಥೆಗಳು ತೊಡಗಿಸಿಕೊಂಡಿವೆ. ಈ ಪೈಕಿ ಗ್ಯಾಲಕ್ಸಿ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ಗೆ 1,800 ಕೋಟಿ ರೂ.ಗಳ ಮೊತ್ತದ ಸಂಶಯಾಸ್ಪದ ಬಾಹ್ಯ ಹಣ ರವಾನೆಯನ್ನು ಮಾಡಿದ ವಿಶ್ವಾಸಾರ್ಹ ಮಾಹಿತಿ ಆಧಾರದ ಮೇಲೆ ಈ ದಾಳಿ ಮಾಡಲಾಗಿದೆ. ಇದರೊಂದಿಗೆ ಹಾರಿಜಾನ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲೂ ಪರಿಶೀಲನೆ ಮಾಡಲಾಗಿದೆ.

ಅಲ್ಲದೆ ಕಾರ್ಪೋರೇಷನ್ ಶಿಪ್ಪಿಂಗ್ ಮತ್ತು ಲೊಜಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ (Capricornian Shipping and Logistics Pvt Ltd) ಮತ್ತು ಅದರ ನಿರ್ದೇಶಕರಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಸಂಜಯ್ ಗೋಸ್ವಾಮಿ ಅವರ ಕಂಪನಿಗಳು ಮತ್ತು ಅದಕ್ಕೆ ಸಂಬಂಧಿಸಿದ ಘಟಕಗಳು ಅಂದರೆ ಲಕ್ಷ್ಮಿಟನ್ ಮ್ಯಾರಿಟೈಮ್, ಹಿಂದೂಸ್ತಾನ್ ಇಂಟರ್‌ನ್ಯಾಶನಲ್, ರಾಜನಂದಿನಿ ಮೆಟಲ್ಸ್ ಲಿಮಿಟೆಡ್, ಸ್ಟಾವರ್ಟ್ ಅಲಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಭಾಗ್ಯನಗರ ಲಿಮಿಟೆಡ್, ವಿನಾಯಕ್ ಕಂನ್ಟ್ರಕ್ಷನ್ ಲಿಮಿಡೆಟ್ (Vinayak Construction Limiteds Limited)ನ ನಿರ್ದೇಶಕರು/ಪಾಲುದಾರರಾದ ಸಂದೀಪ್ ಗಾರ್ಗ್, ವಿನೋದ್ ಕೇಡಿಯಾ ಅವರ ಇತರ ಕಂಪನಿಗಳಲ್ಲೂ ಪರಿಶೀಲನೆ ಮಾಡಲಾಗಿದೆ.

ದೆಹಲಿ, ಹೈದರಾಬಾದ್, ಮುಂಬೈ, ಕೋಲ್ಕತ್ತಾ ಮತ್ತು ಹರಿಯಾಣದ ವಿವಿಧ ಸ್ಥಳಗಳಲ್ಲಿ ಈ ಪರಿಶೀಲನೆಯನ್ನು ಮಾಡಲಾಗಿದೆ. ಆದರೆ ಇದು ಯಾವಾಗ ಶುರುಮಾಡಲಾಗಿದೆ ಎಂದು ಕೇಂದ್ರ ಸಂಸ್ಥೆ ಹೇಳಿಕೊಂಡಿಲ್ಲ. ವಾಷಿಂಗ್ ಮೆಷಿನ್‌ನಲ್ಲಿ ಇರಿಸಲಾಗಿದ್ದ ಹಣವನ್ನು ಎಲ್ಲಿಂದ ಬಂದೆ ಎಂಬುದನ್ನೂ ಇಡಿ ಹೇಳಿಕೊಂಡಿಲ್ಲ.

ಈ ದೊಡ್ಡ ಸಂಸ್ಥೆಗಳನ್ನು ಆಂಥೋನಿ ಡಿ ಸಿಲ್ವಾ ಎಂಬ ವ್ಯಕ್ತಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. Capricornian Shipping and Logistics Pvt Ltd, Laxmiton Maritime ಮತ್ತು ಅದರ ಸಹವರ್ತಿಗಳೊಂದಿಗೆ ಸಿಂಗಾಪುರ ಮೂಲದ ಘಟಕಗಳಿಗೆ 1,800 ಕೋಟಿ ರೂ.ಗಳ ಬಾಹ್ಯ ಹಣ ರವಾನೆಯನ್ನು ನಕಲಿ ಸರಕು ಸೇವೆಗಳು, ಆಮದುಗಳು ಮತ್ತು ಸಂಕೀರ್ಣ ವಹಿವಾಟಿನ ವೆಬ್‌ನ ಮೂಲಕ ಲೇಯರ್‌ಗಳ ಸಹಾಯದಿಂದ ಮಾಡಲಾಗಿದೆ.

ಹುಡುಕಾಟದ ಸಂದರ್ಭದಲ್ಲಿ, ವಾಷಿಂಗ್ ಮೆಷಿನ್‌ನಲ್ಲಿ ಬಚ್ಚಿಟ್ಟಿದ್ದ 2.54 ಕೋಟಿ ರೂಪಾಯಿಯ ದಾಖಲೆ ಇಲ್ಲದ ನಗದು ಪತ್ತೆಯಾಗಿದೆ. ಇದರಿಂದಾಗಿ ಒಟ್ಟು 47 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಡಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+