ದೇಶದ ಬೆಸ್ಟ್ ಕಂಪೆನಿ ಪಟ್ಟಿ: ಫೆಡೆಕ್ಸ್ ಎಕ್ಸ್‌ಪ್ರೆಸ್‌ಗೆ ಸ್ಥಾನ
ಮುಂಬೈ, ಜು.25: ಫೆಡೆಕ್ಸ್ ಕಾರ್ಪ್ ಅಂಗಸಂಸ್ಥೆಯಾಗಿರುವ ಫೆಡೆಕ್ಸ್ ಎಕ್ಸ್‌ಪ್ರೆಸ್ "ಗ್ರೇಟ್ ಪ್ಲೇಸ್ ಟು ವರ್ಕ್" ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಉದ್ಯೋಗ ನಿರ್ವಹಣೆಗೆ ಸೂಕ್ತವಾದ ಮೊದಲ 20 ಕಂಪೆನಿಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 500ಕ್ಕೂ ಹೆಚ್ಚು ಕಂಪೆನಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಫೆಡೆಕ್ಸ್ ಎಕ್ಸ್‍ಪ್ರೆಸ್ 19ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಉತ್ತಮ ಕಚೇರಿ ವಾತಾವರಣ, ನೌಕರರಿಂದ ರಹಸ್ಯವಾಗಿ ಅಭಿಪ್ರಾಯ ಸಂಗ್ರಹ ಹಾಗೂ ಆಡಳಿತ ನಿರ್ವಹಣೆ ಪರಿಶೀಲನೆಯನ್ನು ಆಧರಿಸಿ "ಗ್ರೇಟ್ ಪ್ಲೇಸ್ ಟು ವರ್ಕ್" ಸಂಸ್ಥೆ ಈ ಸಮೀಕ್ಷೆ ನಡೆಸಿತ್ತು.

ಇದಲ್ಲದೆ, ದೇಶದಲ್ಲಿನ ಮುಂಚೂಣಿಯಲ್ಲಿರುವ ಕಂಪೆನಿಗಳ ಪೈಕಿ ಫೆಡೆಕ್ಸ್ ಎಕ್ಸ್‍ಪ್ರೆಸ್ ಸಾಗಾಣಿಕಾ ವಲಯದಲ್ಲೂ ತನ್ನ ಉತ್ತಮ ಸೇವೆಗಾಗಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ತನ್ನ ನೌಕರರಿಗೆ ಸೂಕ್ತ ಪ್ರತಿಫಲ ಹಾಗೂ ಮನ್ನಣೆ ನೀಡುವ ಕಂಪನಿಗಳಲ್ಲಿ ಉತ್ತಮ ಗ್ರಾಹಕ ಸೇವಾ ವಿಭಾಗದ ಕ್ರಿಯಾಶೀಲತೆ ವಿಭಾಗದಲ್ಲಿ ಉತ್ತಮ ಕಂಪೆನಿ ಸತತವಾಗಿ ಫೆಡೆಕ್ಸ್ ಎಕ್ಸ್‌ಪ್ರೆಸ್ ಕಂಪೆನಿ ಗ್ರೇಟ್ ಪ್ಲೇಸ್ ಟು ವರ್ಕ್ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಗ್ರೇಟ್ ಪ್ಲೇಸ್ ಟು ವರ್ಕ್‍ನ "ಹಾಲ್ ಆಫ್ ಫೇಮ್" ಪ್ರಶಸ್ತಿಗೂ ಭಾಜನವಾಗಿದೆ.
"ಭಾರತದಲ್ಲಿ ಉತ್ತಮ ಕಚೇರಿ ವಾತಾವರಣ ಹೊಂದಿರುವ ಕಂಪೆನಿ ಎಂದು ಗುರುತಿಸಲ್ಪಟ್ಟಿರುವುದು ಹೆಮ್ಮೆಯ ವಿಚಾರವಾಗಿದೆ. ಉತ್ತಮ ಗ್ರಾಹಕ ಸೇವೆಯೇ ನಮ್ಮ ಧ್ಯೇಯವಾಕ್ಯ. ನಮ್ಮ ನೌಕರರೇ ಸಂಸ್ಥೆಯ ನಿಜವಾದ ಆಸ್ತಿ ಎಂಬುದು ನಮ್ಮ ವಿಶ್ವಾಸ. ಹಾಗೂ ಅವರ ಖಾಸಗಿ ಮತ್ತು ಔದ್ಯೋಗಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣ ಒದಗಿಸಲಾಗುತ್ತದೆ" ಎಂದು ಫೆಡೆಕ್ಸ್ ಎಕ್ಸ್‌ಪ್ರೆಸ್ ಇಂಡಿಯಾದ ಕಾರ್ಯನಿರ್ವಹಣಾ ವಿಭಾಗದ ಉಪಾಧ್ಯಕ್ಷ ಡೇವಿಡ್ ಕನಾವನ್ ಭರವಸೆ ನೀಡಿದ್ದಾರೆ.
ಫೆಡೆಕ್ಸ್ ಎಕ್ಸ್‌ಪ್ರೆಸ್ : ಜಗತ್ತಿನ ಅತಿ ದೊಡ್ಡ ಎಕ್ಸ್‌ಪ್ರೆಸ್ ಸಾಗಾಟ ಕಂಪೆನಿ ಫೆಡೆಕ್ಸ್ ಎಕ್ಸ್‌ಪ್ರೆಸ್. 220ಕ್ಕೂ ಹೆಚ್ಚು ರಾಷ್ಟ್ರಗಳಿಗೆ ತ್ವರಿತ ಹಾಗೂ ವಿಶ್ವಾಸಾರ್ಹ ಸೇವೆಯನ್ನು ಕಲ್ಪಿಸುತ್ತಿದೆ. ಕಾಲಮಿತಿಯಲ್ಲಿ ಆಂದರೆ ಒಂದರಡು ದಿನಗಳಲ್ಲಿ ಸೇವೆ ನೀಡಲು ಫೆಡೆಕ್ಸ್ ಎಕ್ಸ್‌ಪ್ರೆಸ್ ವಾಯು ಹಾಗೂ ನೆಲ ಮಾರ್ಗದ ಸೇವೆಯನ್ನು ನೀಡುತ್ತದೆ. ಅಲ್ಲದೇ ಖಚಿತ ಸಮಯಕ್ಕೆ ಸರಕು ಮುಟ್ಟಿಸುವ ಗ್ಯಾರಂಟಿಯನ್ನು ನೀಡುತ್ತದೆ.
ಫೆಡೆಕ್ಸ್ ಕಾರ್ಪ್ : ವಿಶಾಲ ತಳಹದಿಯ ಸಾಗಾಟ, ಇ ಕಾಮರ್ಸ್ ಹಾಗೂ ಬಿಸಿನೆಸ್ ಸೇವೆಗಳಲ್ಲಿ ಫೆಡೆಕ್ಸ್ ಕಾಪ್ಸ್ ಮುಂಚೂಣಿಯಲ್ಲಿದ್ದು, 46 ಶತಕೋಟಿ ಡಾಲರ್ ವಾರ್ಷಿಕ ಆದಾಯ ಹೊಂದಿದೆ. ಫೆಡೆಕ್ಸ್ ಕಾರ್ಪ್ ತನ್ನ ವಿವಿಧ ಕಾರ್ಯಾಚರಣಾ ಕಂಪೆನಿಗಳ ಮೂಲಕ ಸಾಮೂಹಿಕವಾಗಿ ವಿಶ್ವಾಸಾರ್ಹ ಹಾಗೂ ಸಮಗ್ರ ಸೇವೆ ನೀಡುತ್ತಿದ್ದು, ಜಗತ್ತಿನ ನಂಬಿಗಸ್ಥ ಉದ್ಯೋಗದಾತರು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಮೂರು ಲಕ್ಷಕ್ಕೂ ಹೆಚ್ಚಿರುವ ಸಿಬ್ಬಂದಿ ಗ್ರಾಹಕರು ಮತ್ತು ಸಮುದಾಯದ ಬೇಡಿಕೆಗೆ ತಕ್ಕಂತೆ ಸುರಕ್ಷೆ, ಅತ್ಯುನ್ನತ ನೈತಿಕತೆ ಹಾಗೂ ವೃತ್ತಿಪರ ಗುಣಮಟ್ಟವನ್ನು ಕಾಯ್ದುಕೊಂಡು ಬರುತ್ತಿದ್ದಾರೆ.
ಗ್ರೇಟ್ ಪ್ಲೇಸ್ ಟು ವರ್ಕ್ ಸಂಸ್ಥೆ : ಗ್ರೇಟ್ ಪ್ಲೇಸ್ ಟು ವರ್ಕ್ ಸಂಸ್ಥೆಯು ಒಂದು ಜಾಗತಿಕ ಮಟ್ಟದ ಸಂಶೋಧನೆ, ಸಲಹೆ ಮತ್ತು ತರಬೇತಿ ನೀಡುವ ಸಂಸ್ಥೆಯಾಗಿದ್ದು, ಇದು ಇತರ ಸಂಸ್ಥೆಗಳಲ್ಲಿ ಉತ್ತಮ ಕಚೇರಿ ವಾತಾವರಣವನ್ನು ನಿರ್ಮಿಸಲು ಮತ್ತು ಗುರುತಿಸಲು ಹಾಗೂ ಅದನ್ನು ಮುಂದುವರಿಸಲು ಸಹಕಾರ ನೀಡುತ್ತದೆ. ಗ್ರೇಟ್ ಪ್ಲೇಸ್ ಟು ವರ್ಕ್ ಸಂಸ್ಥೆಯು ವಿಶ್ವದ 45 ದೇಶಗಳಲ್ಲಿನ ಎನ್‍ಜಿಓ, ಬ್ಯುಸಿನೆಸ್ ಮತ್ತು ಸರಕಾರಿ ಸಂಸ್ಥೆಗಳಿಗೆ ಸೇವೆಯನ್ನು ಒದಗಿಸುತ್ತಿದೆ.












Click it and Unblock the Notifications