ಫಾವಿಪಿರಾವಿರ್‌ನಿಂದ ಕೊವಿಡ್ 19 ಶೇ.40ರಷ್ಟು ವೇಗವಾಗಿ ಗುಣ

ನವದೆಹಲಿ, ಜುಲೈ 23: ಫಾವಿಪಿರಾವಿರ್ ಔಷಧದಿಂದ ಕೊವಿಡ್ 19 ರೋಗ ಶೇ.40ರಷ್ಟು ವೇಗದಲ್ಲಿ ವಾಸಿಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Recommended Video

      Sonu Sood : ವಲಸೆ ಕಾರ್ಮಿಕರಿಗಾಗಿ ಹೊಸ ಯೋಜನೆ ರೂಪಿಸಿದ ಬಾಲಿವುಡ್ ಸ್ಟಾರ್ | Oneindia Kannada

      ಗುಣಮಟ್ಟದ ಆರೈಕೆಯ ಬೆಂಬಲದೊಂದಿಗೆ ಮೊದಲ ದಿನ 3600 ಎಂಜಿ, ಎರಡನೇ ಹಾಗೂ ನಂತರದ ದಿನಗಳಲ್ಲಿ 14ದಿನಗಳವರೆಗೂ 1600 ಎಂಜಿ ಫವಿಪಿರಾವೀರ್ ಮಾತ್ರೆಗಳನ್ನು ಪಡೆದ ರೋಗಿಗಳು ಸಮಾಧಾನ ವ್ಯಕ್ತಪಡಿಸಿದ್ದಾರೆ.

      ಸೋಂಕಿನ ತೀವ್ರತೆಯ ಆಧಾರದ ಮೇಲೆ ಅಲ್ಪ ಸೋಂಕಿತ 90 ರೋಗಿಗಳು, ಮಧ್ಯಮ ಸೋಂಕಿತ 60 ರೋಗಿಗಳಿಗೆ ಮಾತ್ರೆ ನೀಡಲಾಗಿದ್ದು, ಅವರೆಲ್ಲೂ ಸಮಾಧಾನ ವ್ಯಕ್ತಪಡಿಸಿದ್ದಾರೆ.

      ಮೂರನೇ ಹಂತದ ಪ್ರಯೋಗ

      ಮೂರನೇ ಹಂತದ ಪ್ರಯೋಗ

      ಕೊವಿಡ್ -19 ಔಷಧ ಫಾವಿಪಿರಾವೀರ್‌ನ ಮೂರನೇ ಹಂತದ ಪ್ರಯೋಗದಲ್ಲಿ 150 ರೋಗಿಗಳು ಉಪಯೋಗಿಸಿದ್ದು,ಶೇ, 40 ರಷ್ಟು ವೇಗದ ಗುಣವಾಗಿರುವುದು ಕಂಡುಬಂದಿದೆ ಎಂದು ಜಾಗತಿಕ ಔಷಧ ಸಂಶೋಧನಾ ಸಂಸ್ಥೆ ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ತಿಳಿಸಿದೆ.

      ಪ್ರಾಯೋಗಿಕ ಪರೀಕ್ಷೆ

      ಪ್ರಾಯೋಗಿಕ ಪರೀಕ್ಷೆ

      ಫಾವಿಪಿರಾವಿರ್ ಔಷಧ ಅಧ್ಯಯನದಿಂದ ಉತ್ತೇಜಿತರಾಗಿದ್ದು, ತುರ್ತು ಅಗತ್ಯದ ಹಿನ್ನೆಲೆಯಲ್ಲಿ ಪ್ರಯೋಗಿಕ ಪರೀಕ್ಷೆ ನಡೆಸಲಾಗಿದೆ.ಆದರೂ ವೈಜ್ಞಾನಿಕ ಸಿದ್ಧಾಂತಗಳನ್ನು ಬಿಟ್ಟುಕೊಡಲಾಗದು ಎಂದು ಪ್ರಧಾನ ಸಂಶೋಧಕ ಡಾ. ಜರೀರ್ ಉಡ್ವಾಡಿಯಾ ತಿಳಿಸಿದ್ದಾರೆ.

      ಬಹು ಕೇಂದ್ರಿತ ಕ್ಲಿನಿಕಲ್ ಪ್ರಯೋಗ

      ಬಹು ಕೇಂದ್ರಿತ ಕ್ಲಿನಿಕಲ್ ಪ್ರಯೋಗ

      ಬಹು ಕೇಂದ್ರಿತ ಕ್ಲಿನಿಕಲ್ ಪ್ರಯೋಗದಲ್ಲಿ ಫವಿಪಿರಾವೀರ್ ದಕ್ಷತೆ ಮತ್ತು ಸುರಕ್ಷತೆಯನ್ನು ಪರಿಶೀಲಿಸಲಾಗಿದ್ದು, ಅಲ್ಪ ಹಾಗೂ ಮಧ್ಯಮ ಕೊವಿಡ್-19 ರೋಗಿಗಳಿಗೆ ಮಾತ್ರೆಗಳನ್ನು ನೀಡಿ ಯಾದೃಚ್ಚಿಕ ರೀತಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಪ್ರಯೋಗ ಪರೀಕ್ಷೆಯಲ್ಲಿ ಶೇ. 40 ರಷ್ಟು ವೇಗದ ಗುಣವಾಗಿದ್ದು, ದೇಶದ ಉಷ್ಣಾಂಶ, ಆಮ್ಲಜನಕದ ಶುದ್ಧತ್ವ, ಉಸಿರಾಟದ ಪ್ರಮಾಣಮತ್ತು ಕೆಮ್ಮಿನ ಪ್ರಮಾಣ ಮೂರು ದಿನಗಳಲ್ಲಿ ಕಡಿಮೆಯಾಗಿದೆ.

      ನಾಲ್ಕು ದಿನಗಳೊಳಗೆ ರೋಗಿ ಗುಣ

      ನಾಲ್ಕು ದಿನಗಳೊಳಗೆ ರೋಗಿ ಗುಣ

      ಇದಲ್ಲದೇ ಶೇ. 69.8 ರಷ್ಟು ರೋಗಿಗಳು ನಾಲ್ಕು ದಿನಗಳೊಳಗೆ ಗುಣವಾಗಿದ್ದಾರೆ. ಫಾವಿಪಿರಾವೀರ್ ಔಷಧದಿಂದ ಶೇ.28.6 ರಷ್ಟು ವೇಗವಾಗಿ ಸೋಂಕಿನಿಂದ ಗುಣಮುಖರಾಗಿರುವುದಾಗಿ ಕಂಡುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+