‘ಕೃಷಿ ಮಾಡ್ತೀಯಾ?’ ಎಂದು ಹೀಯಾಳಿಸಿದವರು; ಬೆಂಗಳೂರಿನ ಉದ್ಯೋಗಕ್ಕೆ ಗುಡ್‌ಬೈ ಹೇಳಿದ ಪ್ರಿನ್ಸ್ ಶುಕ್ಲಾ, ಈಗ ₹2.5 ಕೋಟಿ ಆದಾಯ!

ಬಿಹಾರ: ನಾನು ಕೃಷಿ ಮಾಡುತ್ತೇನೆ ಎಂದಾಗ ಜನ ನನ್ನನ್ನು ಮೂರ್ಖ ಎಂದು ಕರೆಯುತ್ತಿದ್ದರು. ಬಹುತೇಕರು ಇಂತಹ ಮಾತುಗಳನ್ನು ಕೇಳಿ ಹಿಂದೆ ಸರಿಯಬಹುದು. ಆದರೆ ಬಿಹಾರದ ಪೂರ್ಣಿಯಾ ಜಿಲ್ಲೆಯ ಪ್ರಿನ್ಸ್ ಶುಕ್ಲಾ ಮಾತ್ರ ಆ ಮಾತುಗಳಿಗೆ ತಮ್ಮ ಸಾಧನೆಯ ಮೂಲಕ ಉತ್ತರ ನೀಡಲು ನಿರ್ಧರಿಸಿದರು.

ಕೇವಲ 24ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿದ್ದ ಸುರಕ್ಷಿತ ಉದ್ಯೋಗವನ್ನು ತೊರೆದು ತಮ್ಮ ತವರು ಊರಾದ ಪೂರ್ಣಿಯಾಗೆ ಮರಳಿದ ಪ್ರಿನ್ಸ್ , ಸಾಂಪ್ರದಾಯಿಕ ಉದ್ಯೋಗದ ಬದಲು ಕೃಷಿಯನ್ನೇ ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡರು. ಉತ್ತಮ ಸಂಬಳದ ಕೆಲಸ, ನಗರ ಜೀವನ ಹಾಗೂ ಭವಿಷ್ಯದ ಭದ್ರತೆಯನ್ನು ಬಿಟ್ಟು ಕೃಷಿಯತ್ತ ಹೆಜ್ಜೆ ಹಾಕಿದ ಅವರ ನಿರ್ಧಾರವನ್ನು ಸುತ್ತಮುತ್ತಲಿನವರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ.

farmer success story 24-Year-Old Quits Bengaluru Job Returns to Bihar and Builds 2 5 Crore Startup

ಹಲವರು ಅವರ ನಿರ್ಧಾರವನ್ನು ಪ್ರಶ್ನಿಸಿದರು. ಕೆಲವರು ವ್ಯಂಗ್ಯವಾಡಿದರು. ಇನ್ನೂ ಕೆಲವರು ನಿನ್ನ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದೀಯ ಎಂದು ಟೀಕಿಸಿದರು. ಆದರೆ ಪ್ರಿನ್ಸ್‌ಗೆ ಕೃಷಿಯಲ್ಲಿ ಬೇರೆಯದೇ ಅವಕಾಶ ಕಾಣಿಸುತ್ತಿತ್ತು.

BSc Agriculture ಓದಿದ್ದ ಯುವಕನ ವಿಭಿನ್ನ ಆಲೋಚನೆ

ಪ್ರಿನ್ಸ್‌ ಅವರು BSc Agriculture ಪದವಿ ಪಡೆದಿದ್ದರು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಕೃಷಿ ಇನ್‌ಪುಟ್‌ಗಳು ಹಾಗೂ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸುವ ಮೂಲಕ ರೈತರ ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸಬಹುದು ಎಂಬ ನಂಬಿಕೆ ಅವರಲ್ಲಿತ್ತು.

ಕುಟುಂಬದ ಸದಸ್ಯರಿಂದ ಸುಮಾರು ₹1 ಲಕ್ಷ ಸಾಲ ಪಡೆದು 'AGRATE' ಎಂಬ ಸ್ಟಾರ್ಟ್‌ಅಪ್‌ ಆರಂಭಿಸಿದರು. ಆರಂಭದಲ್ಲಿ ರೈತರಿಗೆ ಗುಣಮಟ್ಟದ ಬೀಜಗಳು, ಸಾವಯವ ಗೊಬ್ಬರ ಮತ್ತು ಪರಿಣಾಮಕಾರಿ ನೀರಾವರಿ ಪರಿಹಾರಗಳನ್ನು ಒದಗಿಸುವ ಮೂಲಕ ತಮ್ಮ ಉದ್ಯಮದ ಪಯಣ ಆರಂಭಿಸಿದರು. ಆದರೆ AGRATE ಕೇವಲ ಕೃಷಿ ಉತ್ಪನ್ನಗಳನ್ನು ಪೂರೈಸುವ ಸಂಸ್ಥೆಯಾಗಿ ಉಳಿಯಲಿಲ್ಲ. ಪ್ರಿನ್ಸ್‌ ರೈತರೊಂದಿಗೆ ನೇರವಾಗಿ ಕೆಲಸ ಮಾಡಲು ಮುಂದಾದರು.

ರೈತರಿಗೆ ಉತ್ಪನ್ನ ಮಾತ್ರವಲ್ಲ, ಜ್ಞಾನವೂ ನೀಡಿದರು

ಸಣ್ಣ ರೈತರಿಗೆ ಆಧುನಿಕ ಕೃಷಿ ಪದ್ಧತಿಗಳ ತರಬೇತಿ, ಉತ್ತಮ ತಂತ್ರಜ್ಞಾನದ ಬಳಕೆ, ಸೂಕ್ತ ಕೃಷಿ ವಿಧಾನಗಳು ಹಾಗೂ ಗುಣಮಟ್ಟದ ಇನ್‌ಪುಟ್‌ಗಳ ಮಹತ್ವದ ಕುರಿತು ಅರಿವು ಮೂಡಿಸಲು ಆರಂಭಿಸಿದರು.

ರೈತರಿಗೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಸಂಪನ್ಮೂಲಗಳನ್ನು ತಲುಪಿಸುವುದರ ಜೊತೆಗೆ, ಕೃಷಿಯಲ್ಲಿನ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಿದರು. ಹೀಗಾಗಿ ರೈತರೊಂದಿಗೆ ನೇರ ಸಂಪರ್ಕ ಹೊಂದಿ ಅವರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು AGRATEಯ ಪ್ರಮುಖ ಕಾರ್ಯಗಳಲ್ಲಿ ಒಂದಾಯಿತು.

ಸುಲಭವಾಗಿರಲಿಲ್ಲ ಈ ಯಶಸ್ಸಿನ ಹಾದಿ

ಪ್ರಿನ್ಸ್‌ ಅವರ ಪಯಣವೂ ಸವಾಲುಗಳಿಂದ ಕೂಡಿತ್ತು. ಆರ್ಥಿಕ ಸಂಕಷ್ಟ, ಹಿನ್ನಡೆ, ಅನುಮಾನಗಳು ಹಾಗೂ ಟೀಕೆಗಳು ಒಂದರ ಹಿಂದೆ ಒಂದರಂತೆ ಎದುರಾದವು. ಬೆಂಗಳೂರಿನ ಉದ್ಯೋಗವನ್ನು ಬಿಟ್ಟು ಕೃಷಿಗೆ ಮರಳಿದ ನಿರ್ಧಾರ ಸರಿಯೇ ಎಂಬ ಪ್ರಶ್ನೆಯೂ ಎದುರಾದ ಸಂದರ್ಭಗಳಿದ್ದವು.

ಆದರೆ ಕೃಷಿ ಕೇವಲ ಸಾಂಪ್ರದಾಯಿಕ ವೃತ್ತಿಯಲ್ಲ; ಅದರಲ್ಲಿ ಹೊಸತನ, ಗೌರವ ಮತ್ತು ಉದ್ಯಮಶೀಲತೆಗೆ ಅಪಾರ ಅವಕಾಶವಿದೆ ಎಂಬ ನಂಬಿಕೆಯಿಂದ ಅವರು ತಮ್ಮ ಪ್ರಯತ್ನವನ್ನು ಮುಂದುವರಿಸಿದರು.

₹1 ಲಕ್ಷದಿಂದ ಆರಂಭಿಸಿ ₹2.5 ಕೋಟಿ ಆದಾಯ!

ಆರಂಭದಲ್ಲಿ ಕೇವಲ ₹1 ಲಕ್ಷ ಸಾಲದೊಂದಿಗೆ ಶುರುವಾದ ಪ್ರಯತ್ನ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದೆ. AGRATE ವಾರ್ಷಿಕವಾಗಿ ಸುಮಾರು ₹2.5 ಕೋಟಿ ಆದಾಯ ಗಳಿಸುತ್ತಿದೆ ಎಂದು ವರದಿಯಾಗಿದೆ.

ಆದರೆ ಪ್ರಿನ್ಸ್‌ ಅವರ ಪ್ರಕಾರ, ಹಣಕಾಸಿನ ಬೆಳವಣಿಗೆಗಿಂತ ರೈತರಿಗೆ ಆಗುತ್ತಿರುವ ಬದಲಾವಣೆಯೇ ಹೆಚ್ಚು ಮಹತ್ವದ್ದು. ಅವರೊಂದಿಗೆ ಕೆಲಸ ಮಾಡುತ್ತಿರುವ ರೈತರು ಉತ್ತಮ ಬೆಳೆ, ಆರೋಗ್ಯಕರ ಉತ್ಪಾದನೆ ಮತ್ತು ತಮ್ಮ ಭವಿಷ್ಯದ ಬಗ್ಗೆ ಹೆಚ್ಚಿನ ಆತ್ಮವಿಶ್ವಾಸವನ್ನು ಕಾಣುತ್ತಿದ್ದಾರೆ ಎಂದು ವರದಿಯಾಗಿದೆ. ಒಮ್ಮೆ ಉತ್ತಮ ಉದ್ಯೋಗ ಬಿಟ್ಟು ಕೃಷಿಗೆ ಹೋಗುವುದೇಕೆ? ಎಂದು ಪ್ರಶ್ನಿಸಿದ್ದವರೇ ಇದೀಗ ಪ್ರಿನ್ಸ್‌ ಅವರ ಸಲಹೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಉದ್ಯೋಗವನ್ನು ತೊರೆದು ತವರು ನೆಲಕ್ಕೆ ಮರಳಿದ 24ರ ಯುವಕನ ನಿರ್ಧಾರ ಇಂದು ಕೇವಲ ಅವರ ಬದುಕನ್ನಷ್ಟೇ ಬದಲಿಸಿಲ್ಲ, ರೈತರಿಗೂ ಹೊಸ ಅವಕಾಶಗಳ ಬಾಗಿಲು ತೆರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+