Best CM List: ದೇಶದ ಟಾಪ್ 15 ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ; ಯೋಗಿ ಟಾಪ್-1, ಕರ್ನಾಟಕಕ್ಕಿಲ್ಲ ಸ್ಥಾನ!
ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದಂತೆ ಮಹತ್ವದ ವರದಿಯೊಂದು ಬಹಿರಂಗವಾಗಿದೆ. ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ, ಮುಖ್ಯಮಂತ್ರಿಗಳ ಆಡಳಿತ ದಕ್ಷತೆ, ಪಾರದರ್ಶಕತೆ, ನಾಯಕತ್ವ ಕೌಶಲ್ಯ ಹಾಗೂ ಜನಪ್ರಿಯತೆಯ ಆಧಾರದ ಮೇಲೆ ಅತ್ಯುತ್ತಮ ಮುಖ್ಯಮಂತ್ರಿಯ 15 ಜನ ಪಟ್ಟಿಯನ್ನು ನೀಡಲಾಗಿದ್ದು, ಅದರಲ್ಲಿ ಟಾಪ್ 1 ಸ್ಥಾನದಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರಿದ್ದಾರೆ.
'ಫೇಮ್ ಇಂಡಿಯಾ ಮ್ಯಾಗಜೀನ್ ಮತ್ತು ಏಷ್ಯಾ ಪೋಸ್ಟ್' ಜೊತೆಯಾಗಿ ದೇಶದಲ್ಲಿ ಅತ್ಯುತ್ತಮ ಮುಖ್ಯಮಂತ್ರಿ (Fame India-Asia Post Survey 2026) ಸಮೀಕ್ಷೆ ನಡೆಸಿತ್ತು. ಮುಖ್ಯಮಂತ್ರಿಗಳ ಕಾರ್ಯಕ್ಷಮತೆ ಆಧಾರದಲ್ಲಿ ಗರಿಷ್ಠ ಅಂಕಗಳನ್ನು ನೀಡಿ, ಶ್ರೇಯಾಂಕ ನಿಗದಿ ಮಾಡಲಾಗಿದೆ ಎಂದು ಸಂಸ್ಥೆಗಳು ತಿಳಿಸಿವೆ. ವಿಶೇಷವೆಂದರೆ ಇದರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಡಿಕೆ ಶಿವಕುಮಾರ್ ಅವರಾಗಲಿ ಇಲ್ಲ! ಕಾರಣವೇನಿರಬಹುದು..?.

ಯೋಗಿ ಆದಿತ್ಯನಾಥ್ ಟಾಪ್ ಸಿಎಂ
ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಕಟ್ಟಾ ಹಿಂದೂತ್ವವಾದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಥಮ ಸ್ಥಾನದಲ್ಲಿದ್ದಾರೆ. 'ಫೇಮ್ ಇಂಡಿಯಾ' ಪ್ರಕಾರ, ನಾಯಕತ್ವ, ಜನಪ್ರಿಯತೆ ಹಾಗೂ ಕಾರ್ಯಶೈಲಿ, ಆಡಳಿತ ವೈಖರಿ, ಸಾಮರ್ಥ್ಯಗಳ ಪರಿಶೀಲಿಸಿದ್ದು, ಅದರಲ್ಲಿ ಯೋಗಿ ಆದಿತ್ಯಾನಾಥ್ ಅವರು ಮುಂದಿದ್ದಾರೆ.
ಕರ್ನಾಟಕದ ಸಿಎಂ ಪಟ್ಟಿಯಲ್ಲಿಲ್ಲ!
ಹೌದು, 28 ರಾಜ್ಯಗಳ ಮುಖ್ಯಮಂತ್ರಿಗಳ ಪಟ್ಟಿ ತಯಾರಿಸುವಾಗ ನಿರ್ದಿಷ್ಟ ಅಂಶಗಳನ್ನು, ಬಹುಹಂತದ ಶೋಧನಾ ಪ್ರಕ್ರಿಯೆ ನಡೆಸಲಾಗಿದೆ. ಮೌಲ್ಯಮಾಪನ ಅಂಶಗಳಡಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾರದ್ದರಿಂದ ಕರ್ನಾಟಕದ ಸಿಎಂ ಬಿಟ್ಟು ಇತರ ಟಾಪ್ 15 ಮುಖ್ಯಮಂತ್ರಿಗಳನ್ನು ಅತ್ಯುತ್ತನ ಸಿಎಂ ಪಟ್ಟಿ ವ್ಯಾಪ್ತಿಗೆ ತರಲಾಗಿದೆ.
10 'ಅತ್ಯುತ್ತಮ ಮುಖ್ಯಮಂತ್ರಿ', 5 'ಸಿಎಂ ಪಂಚರತ್ನ'
ಸಮೀಕ್ಷೆ ಬಳಿಕ ಈ ಎರಡು ಸಂಸ್ಥೆಗಳು ಒಟ್ಟು 15 ಮುಖ್ಯಮಂತ್ರಿಗಳಲ್ಲಿ ಮೊದಲ 10 ಮಂದಿಯನ್ನು ಅತ್ಯುತ್ತಮ, ಉಳಿದ ಐವರನ್ನು (11-15ನೇ ಸ್ಥಾನ) 'ಮುಖ್ಯಮಂತ್ರಿ ಪಂಚರತ್ನ' ಎಂದು ಎರಡು ಗುಂಪಾಗಿ ಪ್ರತ್ಯೇಕಿಸಲಾಗಿದೆ.
1000 ಅಂಕಗಳ ಆಧಾರದಲ್ಲಿ ಸಮೀಕ್ಷೆ
ಒಟ್ಟು 1000 ಅಂಕಗಳ ಪರಿಗಣಿಸಿ ಸಮೀಕ್ಷೆ ನಡೆಸಲಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಕಾರ್ಯವೈಖರಿಯಿಂದ ಒಟ್ಟು 897 ಅಂಕ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ (881 ಅಂಕ) ಅವರಿದ್ದಾರೆ. ಮೂರನೇ ಸ್ಥಾನದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (874 ಅಂಕ) ಅವರಿದ್ದಾರೆ. ಮೊದಲ ಅಗ್ರ ಸ್ಥಾನಗಳು ಬಿಜೆಪಿ ಆಡಳಿತದ ರಾಜ್ಯಗಳ ಪಾಲಾಗಿವೆ.
ಮುಂದುವರಿದು, ಪಂಜಾಬ್ ಸಿಎಂ ಎಎಪಿಯ ಭಗವಂತ್ ಮಾನ್ (856) ನಾಲ್ಕನೇ ಸ್ಥಾನ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (844) ಐದನೇ ಸ್ಥಾನದಲ್ಲಿದ್ದಾರೆ. ಆರನೇ ಸ್ಥಾನದಲ್ಲಿ ಎಪಿ ಚಂದ್ರಬಾಬು ನಾಯ್ಡು (842), ಏಳನೇ ಸ್ಥಾನದಲ್ಲಿ ಸಿಕ್ಕಿಂ ಸಿಎಂ ಪ್ರೇಮ್ ಸಿಂಗ್ ತಮಾಂಗ್ (838) ಎಂಟನೇ ಸ್ಥಾನದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ (827) ಅವರಿದ್ದಾರೆ.
ಮಧ್ಯಪ್ರದೇಶ ಮೋಹನ್ ಯಾದವ್ (803) ಒಂಬತ್ತನೇ ಹಾಗೂ ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ (802) ಅವರು ಹತ್ತನೇ ಸ್ಥಾನದಲ್ಲಿದ್ದಾರೆ.
ಪಂಚರತ್ನಗಳೆಂದು ವಿಭಜಿಸಿದ (11-15ರವರೆಗಿನ ಸಿಎಂ) ಮುಖ್ಯಮಂತ್ರಿಗಳಲ್ಲಿ ನಂತರದ ಸ್ಥಾಣಗಳಲ್ಲಿ ಕ್ರಮವಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್( 788) ದೆಹಲಿ ಸಿಎಂ ರೇಖಾ ಗುಪ್ತಾ (768), ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (766), ಗುಜರಾತಿನ ಭೂಪೇಂದ್ರ ಪಟೇಲ್ (760), ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ (746) ಅವರಿದ್ದಾರೆ.
PHOTO | Uttar Pradesh Chief Minister Yogi Adityanath has been ranked first among chief ministers nationwide in the Fame India–Asia Post Survey 2026. The recognition is based on an assessment of his leadership, working style, popularity and administrative capabilities, according to the survey results released by Fame India magazine and Asia Post.(Image Source: Third Party)
— Press Trust of India (@PTI_News) November 1, 2026


Click it and Unblock the Notifications
