Sting Operation: ಸಿದ್ದರಾಮಯ್ಯ ಸ್ಟಿಂಗ್ ವಿಡಿಯೋ ಹರಡಿದ್ದೇ ಎಚ್‌ಡಿ ಕುಮಾರಸ್ವಾಮಿ? ಕಾನೂನು ಕ್ರಮಕ್ಕೆ ಯತೀಂದ್ರ ಒತ್ತಾಯ

ಬೆಂಗಳೂರು: ತಂದೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ಸ್ಟಿಂಗ್ ವಿಡಿಯೋವನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರೇ ಹರಡಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ತಂದೆಯವರ ತೇಜೋವಧೆ ಮಾಡಲು ಷಡ್ಯಂತ್ರ ರೂಪಿಸಿರುವ ಕುಮಾರಸ್ವಾಮಿಯವರ ಮೇಲೆ ಕಾನೂನಿನಂತೆ ಕ್ರಮವಾಗಲಿ ಎಂದು ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಶಾಸಕರು ಸಹ ಎಚ್‌ಡಿಕೆ ವಿರುದ್ಧ ಕಿಡಿ ಕಾರಿದ್ದು, 'ವಿಪಕ್ಷಗಳು 'ಸ್ಟಿಂಗ್ ಆಪರೇಷನ್'ಗಳ ಕೇಂದ್ರ ಕಚೇರಿಯಾಗಿವೆಯೇ?' ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಶ್ನಿಸಿದ್ದಾರೆ.

ಕ್ಯಾಬಿನೆಟ್ ಸದಸ್ಯರ ಮೇಲೆ ಸ್ಟಿಂಗ್ ಆಪರೇಷನ್ ಸಂಬಂಧಸಿದಂತೆ ಅನುಮಾನ ವ್ಯಕ್ತಪಡಿಸಿ ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರು ಎಚ್ಚರಿಸಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಅವರ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಜ್ವಾಲೆ ವ್ಯಾಪಿಸಿತ್ತು. ಅದರಲ್ಲೂ ಎಚ್‌.ಡಿ.ಕುಮಾರಸ್ವಾಮಿ ಅವರು ಬಹಿರಂಗ ಹೇಳಿಕೆ ನೀಡಿ, ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದರು. ಇದೀಗ ಸ್ಟಿಂಗ್ ವಿವಾದ ಸರಳು ಕುಮಾರಸ್ವಾಮಿ ಅವರಿಗೆ ಸುತ್ತಿಕೊಳ್ಳುವಂತೆ ಕಾಣಿಸುತ್ತಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತನಿಖೆ ಕುರಿತು ಹೇಳಿಕೆ ಬಳಿಕ ಕಾಂಗ್ರೆಸ್ ನಾಯಕರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.

Siddaramaiah Sting Video Row

ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಎಕ್ಸ್ ಪೋಸ್ಟ್ ಮಾಡಿದ್ದು, 'ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಿತೇಶ್ ಪಾಂಡೆ ಹೇಳಿಕೆ ಆಧರಿಸಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಮಹಜರ್ ನಡೆಸಿರುವುದಾಗಿ ತಿಳಿಸಿದ್ದಾರೆ' ಎಂದರು.

ಕುಮಾರಸ್ವಾಮಿಯವರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ

ಎಚ್‌ಡಿಕೆ ಅವರ ಸಾಮಾಜಿಕ ಜಾಲತಾಣ ನೋಡಿಕೊಳ್ಳುವ ರಿತೇಶ್ ಪಾಂಡೆ ದೆಹಲಿಯ ಎಚ್‌.ಡಿ. ಕುಮಾರಸ್ವಾಮಿ ನಿವಾಸದಿಂದಲೇ ಪ್ರಜ್ವಲ್ ಪ್ರಸಾದ್ ಹಾಗೂ ವಿನೋದ್ ಶರ್ಮ ಎಂಬುವರೊಂದಿಗೆ ಕೂಡಿ ಸ್ಟಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ ಎಂಬ ವಿಷಯವನ್ನು ತಿಳಿಸಿದ್ದಾರೆ. ಇದರಿಂದ ಸ್ಟಿಂಗ್ ವಿಡಿಯೋವನ್ನು ಕುಮಾರಸ್ವಾಮಿಯವರೇ ಹರಡಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ತಂದೆಯವರ ತೇಜೋವಧೆ ಮಾಡಲು ಷಡ್ಯಂತ್ರ ರೂಪಿಸಿರುವ ಕುಮಾರಸ್ವಾಮಿಯವರ ಮೇಲೆ ಕಾನೂನಿನಂತೆ ಕ್ರಮವಾಗಲಿ ಎಂದು ಅವರು ಆಗ್ರಹಿಸಿದ್ದಾರೆ.

ಅದೇ ರೀತಿ ಸ್ಟಿಂಗ್ ಆಪರೇಷನ್ ನಡೆಸಿರುವವರು ಯಾರು ಎನ್ನುವುದು ಕೂಡ ತನಿಖೆಯಿಂದ ಗೊತ್ತಾಗಲಿ ಮತ್ತು ಅವರ ಮೇಲೂ ಕ್ರಮವಾಗಲಿ. ಪ್ರಕರಣದ ಸತ್ಯ ಹೊರಬರಬೇಕು, ಸತ್ಯ ಗೆಲ್ಲಬೇಕು ಎನ್ನುವುದಷ್ಟೆ ನನ್ನ ಉದ್ದೇಶ' ಎಂದು ತಿಳಿಸಿದ್ದಾರೆ.

ವಿಪಕ್ಷಗಳು 'ಸ್ಟಿಂಗ್ ಆಪರೇಷನ್'ಗಳ ಕೇಂದ್ರ?

ಸ್ಟಿಂಗ್ ಆಪರೇಷನ್ ತನಿಖೆ ಸತ್ಯ ಬಯಲಾಗುತ್ತಿದ್ದಂತೆ, ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು, 'ದಶಕಗಳ ಕಾಲ ನಾಡಿನ ಸೇವೆ ಮಾಡಿರುವ ಸಿದ್ದರಾಮಯ್ಯ ಅವರಂತಹ ಅಪರೂಪದ ಮುತ್ಸದ್ದಿ ನಾಯಕರ ತೇಜೋವಧೆ ಮಾಡಲು ಹೊರಟಿರುವ ವಿಪಕ್ಷಗಳ ಈ ಹತಾಶ ಯತ್ನದಿಂದ ಯಾರಿಗೂ ಒಳಿತಾಗುವುದಿಲ್ಲ. ಸತ್ಯ ಯಾವತ್ತಿದ್ದರೂ ಗೆಲ್ಲುತ್ತದೆ'.

ರಾಜಕಾರಣವೆಂದರೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಜನಾದೇಶವನ್ನು ಗೌರವಿಸುವ ವೇದಿಕೆ ಆಗಬೇಕು. ಅದನ್ನು ಬಿಟ್ಟು ಕುತಂತ್ರ, ಷಡ್ಯಂತ್ರಗಳ ಮೊರೆ ಹೋಗುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತಹುದ್ದಲ್ಲ'. ಇಂತಹ ದ್ವೇಷದ ರಾಜಕಾರಣ ರಾಜ್ಯದಲ್ಲಿ ಕೊನೆಯಾಗಬೇಕು' ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ಸ್ಟಿಂಗ್ ನಂಟು ಅಂಟಿಕೊಂಡಿರುವ ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಗರ ಪೊಲೀಸರು ಹೇಳಿದ್ದೇನು?

ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದೆ ಎನ್ನಲಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣ ತನಿಖೆ ನಡೆದಿದ್ದು, ಮಹತ್ವದ ಪ್ರಗತಿ ಸಾಧಿಸಲಾಗಿದೆ. ಸ್ಟಿಂಗ್ ವಿಡಿಯೋವನ್ನು ಎಚ್‌ಡಿ ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣ ನೋಡಿಕೊಳ್ಳುವ ಸದಸ್ಯರು ಹರಡಿದ್ದಾರೆ. ಎಚ್‌ಡಿಕೆ ದೆಹಲಿ ನಿವಾಸದಲ್ಲಿ ವಿಡಿಯೋ ಹರಡಲು ತಂದಿದ್ದ ಮೊಬೈಲ್ ಹಸ್ತಾಂತರವಾಗಿದೆ. ಎಚ್‌ಡಿಕೆ ಸಾಮಾಜಿಕ ಜಾಲತಾಣ ಸದಸ್ಯರಾದ ಪ್ರಜ್ವಲ್ ಪ್ರಸಾದ್, ವಿನೋದ್ ಶರ್ಮಾ, ರೀತೇಶ್ ಪಾಂಡೆ ಅವರ ಹೆಸರು ಕೇಳಿ ಬಂದಿದ್ದು, ವಿಚಾಣೆ ನಡೆಯುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ತನಿಖೆ ಬೆಳವಣಿಗೆ ಕುರಿತು ತಿಳಿಸಿದ್ಧಾರೆ. ಇದರಿಂದಾಗಿ ಕಾಂಗ್ರೆಸ್ ನಾಯಕರ ಕಣ್ಣು ಎಚ್‌ಡಿಕೆ ಮೇಲೆ ನೆಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+