Fact Check: ಜರ್ಮನಿಯಲ್ಲಿ ಮೂರು ಕಣ್ಣಿನ ಮಗು ಜನನ!
ದೆಹಲಿ, ಜುಲೈ 20: ಮೂರು ಕಣ್ಣುಗಳುಳ್ಳ ಮಗುವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಗುವಿಗೆ ಎಲ್ಲ ಮನುಷ್ಯರಂತೆ ಎರಡು ಕಣ್ಣು ಹಾಗೂ ಹಣೆಯ ಮೇಲೆ ಮೂರನೇ ಕಣ್ಣಿದೆ.
ಇದನ್ನು ನೋಡಿದ ನೆಟ್ಟಿಗರು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ನಿಜಕ್ಕೂ ಮನುಷ್ಯನಿಗೆ ಮೂರು ಕಣ್ಣು ಇರಲು ಸಾಧ್ಯನಾ? ಅದ್ಭುತ ಎನ್ನುವಂತೆ ಆ ಮಗುವಿಗೆ ಮೂರು ಕಣ್ಣು ಇರಬಹುದಾ ಎಂಬ ಚರ್ಚೆಗಳು ಹುಟ್ಟಿಕೊಂಡಿದೆ.
ಜರ್ಮನಿಯಲ್ಲಿ ಈ ಮಗು ಹುಟ್ಟಿದ್ದು, ಈ ಮಗು ಮೂರನೇ ಕಣ್ಣು ಹೊಂದಿದೆ ಎಂದು ನಂಬಲಾಗಿದೆ. ಇದಕ್ಕೂ ಇದು ಆಧುನಿಕ ಕಾಲದ ಅಧ್ಬುತವೇ ಸರಿ ಎಂದು ಬಿಂಬಿಸಲಾಗಿದೆ. ಈ ವಿಡಿಯೋ ವಾಟ್ಸಾಪ್, ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ.

ಆದರೆ, ಈ ವಿಡಿಯೋ ಅಸಲಿನಾ ಅಥವಾ ನಕಲಿನಾ ಎಂದು ಸುದ್ದಿ ಸಂಸ್ಥೆಯೊಂದು ಪರಿಶೀಲಿಸಿದಾಗ ಇದು ನಕಲಿ ಎಂದು ತಿಳಿದಿದೆ. ಫೋಟೋಶಾಪ್ ಮೂಲಕ ಈ ವಿಡಿಯೋ ಎಡಿಟ್ ಮಾಡಲಾಗಿದೆ ಎಂಬ ವಿಚಾರ ಹೊರಬಿದ್ದಿದೆ. ಮಗುವಿನ ಎಡ ಭಾಗದ ಕಣ್ಣನ್ನು ಹಣೆಯ ಮೇಲೆ ಸೂಪರ್ ಇಂಫೋಸ್ ಮಾಡಿ ಎಡಿಟ್ ಮಾಡಲಾಗಿದೆ ಎಂದು ಹೇಳಿದೆ.
17ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಜ್ಯೋತಿಷಿಯೊಬ್ಬರು ಮೂರು ಕಣ್ಣುಗಳ ಮಗು ವಿದೇಶದಲ್ಲಿ ಜನಿಸುತ್ತದೆ ಎಂದು ಭವಿಷ್ಯ ಹೇಳಿದ್ದರಂತೆ. ಅದು ನಿಜವಾಗಿರಬಹುದು ಎಂದು ಅನೇಕರು ಚರ್ಚೆ ಮಾಡ್ತಿದ್ದಾರೆ. ಆದರೆ, ಇದು ನಕಲಿ ಎಂದು ಸಾಬೀತಾಗಿದೆ.












Click it and Unblock the Notifications