ಫೇಸ್ ಬುಕ್ ನಲ್ಲಿ ಹಾಕೋ ಕಾರು, ಪಿಕ್ನಿಕ್ ಫೋಟೋ ಮೇಲೂ IT ಕಣ್ಣು!

ತೆರಿಗೆದಾರರ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಡೆಯಲಿರುವ ಆದಾಯ ತೆರಿಗೆ ಇಲಾಖೆ. ಇದಕ್ಕಾಗಿ ಹೊಸ 10 ಬಿಲಿಯನ್ ರು. ವೆಚ್ಛದಲ್ಲಿ ಹೊಸ ಸಾಫ್ಟ್ ವೇರ್ ಸಿದ್ಧಪಡಿಸಿರುವ ಇಲಾಖೆ. ಮುಂದಿನ ತಿಂಗಳ ಮೊದಲ ದಿನದಿಂದಲೇ ಹೊಸ ರೀತಿಯ ಮಾಹಿತಿ ಸಂಗ್ರ

ನೀವು ಭರ್ಜರಿ ಕಾರೊಂದನ್ನು ತೆಗೆದುಕೊಂಡು ಅದರ ಫೋಟೋಗಳನ್ನು ನಿಮ್ಮ ಫೇಸ್ ಬುಕ್, ಟ್ವಿಟರ್, ಇನ್ ಸ್ಟಾ ಗ್ರಾಂ ಅಥವಾ ಇನ್ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೀರಾ? ದೂರದ ಊರಿಗೆ ಪಿಕ್ ನಿಕ್ ಗೆ ಅಂತ ಹೋಗಿ ಅಲ್ಲಿ ಯಾವುದಾದರೂ ದುಬಾರಿ ರೆಸಾರ್ಟ್ ಅಥವಾ ಹೋಟೆಲ್ ನಲ್ಲಿ ಉಳಿದುಕೊಂಡು ಅಲ್ಲಿನ ಪೋಟೋಗಳನ್ನು, ಸೆಲ್ಫಿಗಳನ್ನು ಇದೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೀರಾ? ನಿಮ್ಮ ಇಂಥ ಎಲ್ಲಾ ಚಟುವಟಿಕೆಗಳ ಮೇಲೆ ಇನ್ನು ಆದಾಯ ಇಲಾಖೆ ಕಣ್ಣಿರಿಸಲಿದೆ!

ಹೌದು. ವ್ಯಕ್ತಿಯೊಬ್ಬನ ಆದಾಯದ ಮೂಲಗಳನ್ನು ಪತ್ತೆ ಹಚ್ಚಲು ಇಷ್ಟು ವರ್ಷ ಆದಾಯ ತೆರಿಗೆ ಇಲಾಖೆಯು ಆತನು ನಿರಂತರವಾಗಿ ಉಪಯೋಗಿಸುತ್ತಿರುವ ಅಥವಾ ಗುಪ್ತವಾಗಿರುವ ಬ್ಯಾಂಕ್ ಅಕೌಂಟ್ ಗಳನ್ನು, ಆಸ್ತಿ ಪಾಸ್ತಿಗಳನ್ನು, ಬ್ಯಾಂಕ್ ಲಾಕರ್ ಗಳನ್ನು ಪತ್ತೆ ಹಚ್ಚುತ್ತಿತ್ತು. ಆದರೆ, ಇನ್ನು ಮುಂದೆ ಪ್ರತಿಯೊಬ್ಬ ಆದಾಯ ತೆರಿಗೆದಾರನ ಸೋಷಿಯಲ್ ಮೀಡಿಯಾ ಚಟುವಟಿಕೆಗಳ ಮೇಲೆ ಕಣ್ಣಿಡಲು ಇಲಾಖೆ ನಿರ್ಧರಿಸಿದೆ.

Facebook, Instagram Posts Will Soon Help Sniff Out Tax Evaders in India

ಮುಂದಿನ ತಿಂಗಳು, ಅಂದರೆ ಆಗಸ್ಟ್ 1ರಿಂದಲೇ ಈ ಹೊಸತೊಂದು ವ್ಯವಸ್ಥೆಯನ್ನು ಆದಾಯ ತೆರಿಗೆ ಇಲಾಖೆ ತನ್ನಲ್ಲಿ ಅಳವಡಿಸಿಕೊಳ್ಳುತ್ತಿದೆ. ಇದಕ್ಕಾಗಿ ಕಳೆದ ಏಳು ವರ್ಷಗಳಿಂದ ಸುಮಾರು 10 ಬಿಲಿಯನ್ ರು.ಗಳ ವೆಚ್ಛದಲ್ಲಿ 'ಪ್ರಾಜೆಕ್ಟ್ ಇನ್ ಸೈಟ್' ಎಂಬ ತಂತ್ರಾಂಶವನ್ನು ತಯಾರಿಸಲಾಗಿದ್ದು, ಇದರ ಸಹಾಯದಿಂದ ಕಡಿಮೆ ತೆರಿಗೆ ಕಟ್ಟಿ, ದುಬಾರಿ ಜೀವನ ನಡೆಸುತ್ತಿರುವ ಮೇಲೆ ಮೊದಲು ನಿಗಾ ಇಡಲಾಗುತ್ತದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+