ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮೋ ಆಪ್ ಸಂಬಂಧಿಸಿದ ಸಂಸ್ಥೆಯ 15 FBಪುಟಗಳು ಬಂದ್

|
Google Oneindia Kannada News

ನವದೆಹಲಿ, ಏಪ್ರಿಲ್ 02: ಸಾಮಾಜಿಕ ಜಾಲ ತಾಣ ದಿಗ್ಗಜ ಫೇಸ್ ಬುಕ್ ಆರಂಭಿಸಿರುವ ಸ್ವಚ್ಛತಾ ಅಭಿಯಾನಕ್ಕೆ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಗೆ ಸೇರಿದ ಅನೇಕ ಪುಟಗಳಷ್ಟೇ ಬಲಿಯಾಗಿಲ್ಲ, ಬಿಜೆಪಿ ಬೆಂಬಲಿತ ಪುಟಗಳು ಮಾಯವಾಗಿವೆ.

ಸುಳ್ಳು ಸುದ್ದಿ, ಐಡೆಂಡೆಟಿ ಇಲ್ಲದ ಖಾತೆಗಳ ಬಗ್ಗೆ ಫೇಸ್ ಬುಕ್ ಬಹಳ ಮುಂಚಿತವಾಗಿ ಅಭಿಯಾನ ನಡೆಸಿದೆ. ಚುನಾವಣೆ ಸಂದರ್ಭದಲ್ಲಿ ಇದು ಕೈಗೊಂಡ ಕ್ರಮ ಎನ್ನಲಾಗುವುದಿಲ್ಲ. ಈ ಹಿಂದೆ ಬಿಜೆಪಿ ಬೆಂಬಲಿತ ಫೇಸ್ ಬುಕ್ ಪುಟಗಳಿಗೂ ಚುರುಕು ಮುಟ್ಟಿಸಲಾಗಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಗ ಪ್ರಧಾನಿ ಮೋದಿ ಅವರ ನಮೋ ಮೊಬೈಲ್ ಅಪ್ಲಿಕೇಷನ್ ಜತೆ ಹೊಂದಾಣಿಕೆ ಹೊಂದಿರುವ ಸಿಲ್ವರ್ ಟಚ್ ಟೆಕ್ನಾಲಜೀಸ್ ಕಂಪನಿಗೆ ಸೇರಿದೆ ಎನ್ನಲಾದ 15 ಫೇಸ್ ಬುಕ್ ಗಳನ್ನು ತೆಗೆದು ಹಾಕಲಾಗಿದೆ ಎಂದು ಫೇಸ್ ಬುಕ್ ಕ್ರಿಪ್ಟೋಸೆಕ್ಯುರಿಟಿ ಪಾಲಿಸಿ ಮುಖ್ಯಸ್ಥರಾದ ನಾಥನಿಯಲ್ ಗ್ಲೆಶೆರ್ ಹೇಳಿದ್ದಾರೆ.

Facebook also pulls down 15 pages linked to IT firm behind NaMo app: Reports

ಇಂಡಿಯಾ ಐ ಹೆಸರಿನ ಫೇಸ್ ಬುಕ್ ಪುಟವು ಗುಜರಾತ್ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆ ಜತೆ ಕಾರ್ಯನಿರ್ವಹಿಸಿದ ಮಾಹಿತಿಯಿದೆ ಎಂದು ಫೇಸ್ ಬುಕ್ ಹೇಳಿದೆ.

ಕಾಂಗ್ರೆಸ್ ಫೇಸ್ ಬುಕ್ ಪುಟ ಬಂದ್ ಸುದ್ದಿಗೆ ಕಾಂಗ್ರೆಸ್ ಪ್ರತಿಕ್ರಿಯೆ ಏನು? ಕಾಂಗ್ರೆಸ್ ಫೇಸ್ ಬುಕ್ ಪುಟ ಬಂದ್ ಸುದ್ದಿಗೆ ಕಾಂಗ್ರೆಸ್ ಪ್ರತಿಕ್ರಿಯೆ ಏನು?

ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಸುಮಾರು 687 ಪುಟ ಹಾಗೂ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ಫೇಸ್ ಬುಕ್ ಹೇಳಿದೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಮನೀಶ್ ತಿವಾರಿ, ಈ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ನಿಖರ ಮಾಹಿತಿಯಿಲ್ಲ ಎಂದು ಕಾಂಗ್ರೆಸ್ ವಕ್ತಾರರಾದ ಮನೀಶ್ ತಿವಾರಿ ಹೇಳಿದ್ದಾರೆ.

ಆಗಸ್ಟ್ 2014ರಿಂದ ಮಾರ್ಚ್ 2019ರ ಅವಧಿಯಲ್ಲಿ ಸುಮಾರು 39000 ಡಾಲರ್ ಮೊತ್ತವನ್ನು ಜಾಹೀರಾತು ರೂಪದಲ್ಲಿ ಈ ಪುಟಗಳು ಖರ್ಚು ಮಾಡಿವೆ. ಈ ಪುಟಗಳು ಹಾಗೂ ಖಾತೆಗಳು ಫೇಕ್ ಸುದ್ದಿ ಹಬ್ಬಿಸುತ್ತಿವೆ ಎಂಬ ಕಾರಣಕ್ಕೆ ಮಾತ್ರ ಬಂದ್ ಮಾಡಿಲ್ಲ. ಬದಲಿಗೆ ದೃಢಪಡದ ಸುದ್ದಿಗಳನ್ನು ಸ್ಪಾಮ್ ಮಾದರಿ ಪ್ರಸಾರ ಮಾಡಿದ ಕಾರಣ ನೀಡಲಾಗಿದೆ.

English summary
Amid an uproar over the Facebook pulling down 687 pages and accounts linked to the Congress, what has now to fore is that 15 pages linked to an IT firm which is reportedly associated with Prime Minister Narendra Modi's NaMo app have also been removed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X