Mizoram Election 2023: ಮಿಜೋರಾಂ ವಿಧಾನಸಭೆ ಚುನಾವಣೆ ಸಮೀಕ್ಷೆ- ‘ಚಿತ್ರಾನ್ನ’ ಆಗೋದು ಗ್ಯಾರಂಟಿ?
ಈಶಾನ್ಯ ಭಾರತದ ರಾಜ್ಯ ಮಿಜೋರಾಂ ಹಲವು ದಶಕದಿಂದ ನಾನಾ ಸಮಸ್ಯೆ ಎದುರಿಸಿದೆ. ಈ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳಿಗೆ ಪ್ರಾಮುಖ್ಯತೆ ಸಿಗುತ್ತಿತ್ತು. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗುವ ಮಾಹಿತಿ ಸಿಕ್ಕಿದೆ. ನವೆಂಬರ್ 7 ರಂದು ಮತದಾನ ನಡೆದಿದ್ದ ಮಿಜೋರಾಂ ರಾಜ್ಯದಲ್ಲಿ ಮತದಾರರ ಒಲವು ಯಾರ ಪರ ಇದೆ ಗೊತ್ತಾ? ಚುನಾವಣೋತ್ತರ ಸಮೀಕ್ಷೆ ಹೇಳಿದ್ದು ಏನು?
ಮಿಜೋರಾಂ ವಿಧಾನಸಭೆ ತುಂಬಾ ಚಿಕ್ಕದು. ಇಲ್ಲಿ 40 ವಿಧಾನಸಭೆ ಸ್ಥಾನ ಇದ್ದು, ಹೀಗೆ 40 ಕ್ಷೇತ್ರದ ಪೈಕಿ ಎಲ್ಲಾ ಸ್ಥಾನಕ್ಕೂ ನವೆಂಬರ್ 7 ರಂದು ಎಲೆಕ್ಷನ್ ನಡೆದಿತ್ತು. ಈಗ ಮಿಜೋರಾಂ ವಿಧಾನಸಭೆ ಬಗ್ಗೆ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಹಾಗಾದರೆ, ಯಾವ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ? ಕಾಂಗ್ರೆಸ್ & ಬಿಜೆಪಿ ಮಧ್ಯೆ ಫೈಟ್ ಇದ್ಯಾ? ಇಲ್ಲಾ ಮಿಜೋರಾಂ ವಿಧಾನಸಭೆಯಲ್ಲಿ ಈ ಬಾರಿ ಕೂಡ ಸ್ಥಳೀಯ ಪಕ್ಷಗಳೇ ಅಧಿಕಾರಕ್ಕೆ ಬರಲಿವೆಯಾ? ಏನಾಗುತ್ತೆ ಮಿಜೋರಾಂ ರಾಜಕೀಯ ಸ್ಥಿತಿ? ಮುಂದೆ ಓದಿ.

ಪುಟಾಣಿ ರಾಜ್ಯದಲ್ಲಿ ದೊಡ್ಡ ಲೆಕ್ಕಾಚಾರ!
ಅಂದಹಾಗೆ ಪೂರ್ವ ಭಾರತದಲ್ಲಿ ಅದ್ರಲ್ಲೂ ಮ್ಯಾನ್ಮಾರ್ ಗಡಿಯಲ್ಲಿ ಹರಡಿರುವ, ಈಶಾನ್ಯ ಭಾರತದ ಪುಟಾಣಿ ರಾಜ್ಯ ಮಿಜೋರಾಂ ಅಧಿಕಾರ ರಾಷ್ಟ್ರೀಯ ಪಕ್ಷಗಳಿಗೆ ಪ್ರಮುಖ ಅಂತಾ ಏನಿಲ್ಲ. ಆದ್ರೆ ಇಲ್ಲಿ ಗೆದ್ದೇ ಗೆಲ್ಲಬೇಕು ಅಂತಾ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದರು. ಹೀಗಾಗಿಯೇ ಈ ಭಾಗದಲ್ಲಿ ಸಿಕ್ಕಾಪಟ್ಟೆ ಫೈಟ್ ಇತ್ತು. ನವೆಂಬರ್ 7 ರಂದು ಮತ ಹಾಕಿದ್ದ ಮತದಾರರು, ಯಾವ ಪಕ್ಷದ ಮೇಲೆ ಒಲವು ತೋರಿಸಿದ್ದಾರೆ ಗೊತ್ತಾ? ಈ ರಾಜ್ಯದಲ್ಲಿ ಅಧಿಕಾರ ರಚಿಸುವ ಪಕ್ಷ ಯಾವುದು? ಹಾಗಾದರೆ ಮಿಜೋರಾಂ ವಿಧಾನಸಭೆಯ ಅಧಿಕಾರ ತೆಕ್ಕೆಗೆ? ಬಿಜೆಪಿ & ಕಾಂಗ್ರೆಸ್ ಬಲ ಎಷ್ಟಿದೆ?
'ಚಿತ್ರಾನ್ನ' ಆಗುತ್ತಾ ವಿಧಾನಸಭೆ ರಿಸಲ್ಟ್?
ಮಿಜೋರಾಂನ ರಾಜಕಾರಣದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (MNF) & ಜೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ಸ್ಥಳೀಯ ಪ್ರಬಲ ಪಕ್ಷಗಳು. ಪ್ರತಿ ಬಾರಿ ಇಲ್ಲಿ ಎಲೆಕ್ಷನ್ ನಡೆದಾಗ ಈ 2 ಪಕ್ಷಗಳೇ ಶಕ್ತಿ ತೋರಿಸುತ್ತವೆ. ಈ ಬಾರಿ ಕೂಡ ಮಿಜೋರಾಂ ರಾಜಕಾರಣದಲ್ಲಿ ಸ್ಥಳೀಯ ಪಕ್ಷ ಆರ್ಭಟ ತೋರಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಆಗಿದ್ದು ಏನು ಗೊತ್ತಾ? ಚುನಾವಣೆ ಬಗ್ಗೆ ಸಮೀಕ್ಷೆಗಳು ಹೇಳಿದ್ದು ಏನು?

ಯಾರಿಗೂ ಸಿಗುವುದಿಲ್ಲ ಬಹುಮತ?
ಈಗ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಮಿಜೋರಾಂ ಚುನಾವಣೆಯಲ್ಲಿ ಜೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ. 'ಜನ್ ಕಿ ಬಾತ್' ಮತದಾನೋತ್ತರ ಸಮೀಕ್ಷೆ ಪ್ರಕಾರ, ಜೋರಾಂ ಪೀಪಲ್ಸ್ ಮೂವ್ಮೆಂಟ್ ಪಕ್ಷ 15 ರಿಂದ 25 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಮಿಜೋ ನ್ಯಾಷನಲ್ ಫ್ರಂಟ್ (MNF) 10ರಿಂದ 14 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮಿಜೋರಾಂ ಅಖಾಡದಲ್ಲಿ 05 ರಿಂದ 09 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಬಿಜೆಪಿ 00 ರಿಂದ 02 ಸ್ಥಾನ ಪಡೆಯಬಹುದು ಎನ್ನುತ್ತಿದೆ 'ಜನ್ ಕಿ ಬಾತ್' ಮತದಾನೋತ್ತರ ಸಮೀಕ್ಷೆಯ ವರದಿ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications