ಚೌ ಮೃತದೇಹದ ಹುಡುಕಾಟ ನಿಲ್ಲಿಸುವುದೇ ಒಳಿತು: ತಜ್ಞರ ಸಲಹೆ

ನವದೆಹಲಿ, ನವೆಂಬರ್ 27: ಸ್ಯಾಂಟಿನೆಲಿಸ್ ಬುಡಕಟ್ಟು ಸಮುದಾಯದವರು ನೆಲೆಸಿರುವ ದ್ವೀಪಕ್ಕೆ ಪ್ರವೇಶಿಸಿ ಬಲಿಯಾದ ಅಮೆರಿಕದ ಜಾನ್ ಅಲೆನ್ ಚೌ (27) ಅವರ ಮೃತದೇಹದ ಹುಡುಕಾಟಕ್ಕೆ ನಡೆಸುತ್ತಿರುವ ಪ್ರಯತ್ನಗಳನ್ನು ಸ್ಥಗಿತಗೊಳಿಸುವಂತೆ ಅರಣ್ಯ ಮತ್ತು ಬುಡಕಟ್ಟು ಸಂರಕ್ಷಕರು ಸಲಹೆ ನೀಡಿದ್ದಾರೆ.

ಬುಡಕಟ್ಟು ಜನರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಸರ್ವೈವಲ್ ಇಂಟರ್‌ನ್ಯಾಷನಲ್, ಚೌ ಅವರ ಮೃತದೇಹ ಹುಡುಕಾಟ ಕಾರ್ಯಾಚರಣೆಯು ಎರಡೂ ಕಡೆಗಳಿಗೆ ಭಾರಿ ಅಪಾಯಕಾರಿಯಾಗಿರುವುದರಿಂದ ಅದನ್ನು ನಿಲ್ಲಿಸುವುದು ಸೂಕ್ತ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ದ್ವೀಪಕ್ಕೆ ಭೇಟಿ ನೀಡುವುದು ಮತ್ತು ಮೃತದೇಹ ಪಡೆದುಕೊಳ್ಳುವ ಪ್ರಯತ್ನವು ಅಲ್ಲಿನ ಸಂಪರ್ಕದಿಂದ ಫ್ಲೂ, ದಡಾರ ಮತ್ತಿತರ ಕಾಯಿಲೆಗಳು ಹರಡಲು ಕಾರಣವಾಗಬಹುದು ಎಂದು ಸಂಘಟನೆಯ ನಿರ್ದೇಶಕ ಸ್ಟೀಫನ್ ಕೋರಿ ಹೇಳಿದ್ದಾರೆ.

experts advised to stop searching us man john allen chau body andaman sentinelese tribe

ಚೌ ಅವರ ಮೃತದೇಹವನ್ನು ಅಲ್ಲಿಯೇ ಬಿಟ್ಟುಬಿಡುವುದು ಒಳಿತು, ಹಾಗೆಯೇ ಸೆಂಟಿನೆಲಿಸ್‌ಗಳನ್ನು ಕೂಡ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರ ನಿರ್ಬಂಧಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಸೆಂಟಿನೆಲಿಸ್ ದ್ವೀಪಕ್ಕೆ ಪ್ರವೇಶಿಸಿದ್ದ ಚೌ, ಸ್ಥಳೀಯ ಬುಡಕಟ್ಟು ಜನರ ಬಾಣಕ್ಕೆ ಬಲಿಯಾಗಿದ್ದರು. ಆ ಜನರನ್ನು ಮತಾಂತರ ಮಾಡುವ ಉದ್ದೇಶದಿಂದ ಅವರು ಅಲ್ಲಿಗೆ ತೆರಳಿದ್ದರು ಎಂದು ಹೇಳಲಾಗಿದೆ.

ಸೆಂಟಿನೆಲಿಸ್‌ಗಳ ಕುರಿತು ಅಧ್ಯಯನ ನಡೆಸುತ್ತಿರುವ ಭಾರತದ ತಜ್ಞರ ಗುಂಪು ಕೂಡ, ಮೃತದೇಹ ಪತ್ತೆ ತಂಡವು ಅಲ್ಲಿಗೆ ತೆರಳುವುದು ಉದ್ವಿಗ್ನತೆ ಹೆಚ್ಚಿಸುವ ಅಪಾಯವಿರುವುದರಿಂದ ಅದರಿಂದ ಹಿಂದೆ ಸರಿಯುವುದು ಒಳ್ಳೆಯದು ಎಂದು ಸಲಹೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+