Exit Polls Result 2024: ನರೇಂದ್ರ ಮೋದಿ "ಇಮೇಜ್‌ ಡಲ್" ಆಗ್ತಿದೆ ಅಂತಿದೆ ಈ ಅಂಶಗಳು

ದೇಶದಲ್ಲಿ ಈಗ ಸಾಲು ಸಾಲು ರಾಜ್ಯಗಳ ವಿಧಾನಸಭೆ ಚುನಾವಣೆಯದ್ದೇ ಸದ್ದು. ಇದೀಗ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆಯ ಚುನಾವಣೆ ಮುಕ್ತಾಯವಾಗಿದ್ದು, ಅಕ್ಟೋಬರ್‌ 8 ರಂದು ಈ ಎರಡೂ ವಿಧಾನಸಭೆಯ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಈ ನಡುವೆ ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಪೂರ್ವ ಫಲಿತಾಂಶ (ಎಕ್ಸಿಟ್‌ ಪೋಲ್‌) ವರದಿ ಪ್ರಕಟವಾಗಿದ್ದು, ಬಿಜೆಪಿಗೆ ಶಾಕ್‌ ನೀಡಿದೆ. ಎಕ್ಸಿಟ್‌ ಪೋಲ್‌ ವರದಿ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಇಮೇಜ್‌ ಡಲ್‌ ಆಗುತ್ತಿದೆಯೇ ಎನ್ನುವ ಅನುಮಾನ ಪ್ರಾರಂಭವಾಗಿದೆ. ಅದಕ್ಕೆ ಕಾರಣವೂ ಇದೆ.

Exit Polls Result 2024 Prime Minister Narendra Modi s fame declines or not

2014 ಹಾಗೂ ಅದಕ್ಕೂ ಮುಂಚೆ ನರೇಂದ್ರ ಮೋದಿ ಎಂದರೆ ದೊಡ್ಡ ಇಮೇಜ್‌ ಇತ್ತು. ಈಗಲೂ ಇದೆ. ಆದರೆ, ಲೋಕಸಭೆಯಲ್ಲಿ ಎರಡನೇ ಅವಧಿಯ ನಂತರ ಅಂದರೆ ಹತ್ತು ವರ್ಷಗಳ ನಂತರ ಮೋದಿ ಇಮೇಜ್‌ ಡಲ್‌ ಆಗುತ್ತಿದೆಯೇ ಎನ್ನುವ ಅನುಮಾನ ಹೆಚ್ಚಾಗುತ್ತಿದೆ.

ಅದಕ್ಕೆ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದ ವಿಧಾನಸಭೆ ಚುನಾವಣಾ ಪೂರ್ವ ಫಲಿತಾಂಶವೂ ಕಾರಣ (ಎಕ್ಸಿಟ್‌ ಪೋಲ್‌)ವಾಗಿದೆ. 2014ರಲ್ಲಿ ಮೊದಲ ಬಾರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ನಡೆದಿತ್ತು.

Exit Polls Result 2024 Prime Minister Narendra Modi s fame declines or not

2019ರಲ್ಲಿ ಎರಡನೇ ಬಾರಿ ಹಾಗೂ 2024ನೇ ಸಾಲಿನಲ್ಲಿ ಮೂರನೇ ಬಾರಿಯೂ ಮೋದಿ ಅವರ ಹೆಸರು ಹೇಳಿಕೊಂಡೇ ಬಿಜೆಪಿ ಲೋಕ ಸಮರಕ್ಕೆ ಇಳಿದಿತ್ತು. ಆದರೆ, 2014 ಹಾಗೂ 2019ನೇ ಸಾಲಿನಲ್ಲಿ ಏಕಾಂಗಿಯಾಗಿ ಹಾಗೂ ಅತಿ ಹೆಚ್ಚು ಸಂಸದರು ಬಿಜೆಪಿಯಿಂದ ಆಯ್ಕೆಯಾಗಿ ಅಧಿಕಾರ ನಡೆಸಿದ್ದರು.

ಆದರೆ, 2024ನೇ ಸಾಲಿನಲ್ಲಿ ಬಿಜೆಪಿಯು ಮಿತ್ರ ಪಕ್ಷಗಳನ್ನು ಅವಲಂಬಿಸಬೇಕಾಯಿತು. 10 ವರ್ಷಗಳಲ್ಲಿ ಮೋದಿ ಇಮೇಜ್‌ ಇಷ್ಟೊಂದು ಕಡಿಮೆ ಆಗಿದೆಯೇ ಎನ್ನುವ ಪ್ರಶ್ನೆ ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಹೆಚ್ಚಾಗಿದೆ.

ಬಿಜೆಪಿ ತಂದ ಘೋಷಾವಾಕ್ಯಗಳಿವು: ಪ್ರತಿ ಬಾರಿ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಹೊಸ ಘೋಷಾವಾಕ್ಯಗಳನ್ನು ಪರಿಚಯಿಸಿದೆ. ಮೊದಲೆಲ್ಲ ಭಾರೀ ಸದ್ದು ಮಾಡುತ್ತಿದ್ದ ಘೋಷಾವಾಕ್ಯಗಳು ಇತ್ತೀಚಿನ ವರ್ಷಗಳಲ್ಲಿ ಜನರಿಗೆ ಅಷ್ಟೊಂದು ರುಚಿಸುತ್ತಿಲ್ಲ.

ಇದಕ್ಕೆ ಬಿಜೆಪಿ ಈ ಹಿಂದೆ ಘೋಷಿಸಿರುವ ಘೋಷಾವಾಕ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರದೆ ಇರುವುದು ಸಹ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅಬ್‌ ಕಿ ಬಾರ್‌ ಮೋದಿ ಸರ್ಕರ್‌, ಅಚ್ಛೆದಿನ್‌, ಚೌಕಿದಾರ್‌ ಹಾಗೂ ಈ ಬಾರಿ ಚಾರ್‌ಸೌ ಪಾರ್‌ ಎನ್ನುವುದು ಬಿಜೆಪಿಯ ಪ್ರಮುಖ ಘೋಷಾವಾಕ್ಯಗಳು.

2024ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಅಬ್‌ಕಿಬಾರ್‌ ಚಾರ್‌ಸೌಪಾರ್‌ ಎಂದಿತ್ತು. ಇದು ಚುನಾವಣಾ ರಾಜಕೀಯದಲ್ಲೇ ಬಹುದೊಡ್ಡ ಘೋಷಾವಾಕ್ಯ ಎಂದೇ ಹೇಳಲಾಗಿತ್ತು. ಚಾರ್‌ಸೌಪಾರ್‌ ಎಂದರೆ 400 ಗಡಿ ಎಂದು, ಈ ಬಾರಿಯ ಲೋಕಭೆ ಚುನಾವಣೆಯಲ್ಲಿ 400 ಸೀಟುಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳಿತ್ತು.

ಆದರೆ, 300 ಗಡಿ ತಲುಪಲು ಸಹ ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 240 ಸೀಟುಗಳನ್ನು ಗೆದ್ದಿದೆ. ಮಿತ್ರ ಪಕ್ಷಗಳು 53 ಸ್ಥಾನ ಸೇರಿ ಎನ್‌ಡಿಎ ಮೈತ್ರಿಕೂಟವು ಒಟ್ಟು 293 ಸ್ಥಾನಗಳನ್ನು ಗೆದ್ದಿತ್ತು. ಇದೀಗ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ.

ದೇಶದಲ್ಲಿ ಸಾಲು ಸಾಲು ಚುನಾವಣೆ: ದೇಶದಲ್ಲಿ ಈಗ ವಿಧಾನಸಭೆ ಚುನಾವಣೆಗಳ ಪರ್ವ ಇದೆ. ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ವಿಧಾನಸಭೆ ಚುನಾವಣೆ ಮುಗಿದಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ, ಜಾರ್ಖಂಡ್‌ ಹಾಗೂ ದೆಹಲಿ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಇದೀಗ ಪ್ರಕಟವಾಗಿರುವ ಎಕ್ಸಿಟ್‌ ಪೋಲ್‌ ನೋಡಿದರೆ ಎರಡೂ ವಿಧಾನಸಭಾ ಚುನಾವಣೆಯಲ್ಲಿ (ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ)ಬಿಜೆಪಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಹರಿಯಾಣದಲ್ಲಿ ಸಾಲು ಸಾಲು ರೋಡ್‌ ಶೋ ಹಾಗೂ ಚುನಾವಣಾ ಪ್ರಚಾರ ಸಭೆಗಳಲ್ಲಿ ಮೋದಿ ಭಾಗಿಯಾಗಿದ್ದರು. ಅಬ್ಬರದ ಭಾಷಣ ಮಾಡಿದ್ದರು. ಕಾಂಗ್ರೆಸ್‌ನ ವಿರುದ್ಧ ಹರಿಹಾಯ್ದಿದ್ದರು. ಆದರೆ, ಹರಿಯಾಣದ ಮತದಾರ ಬಿಜೆಪಿಯ ಕೈ ಹಿಡಿದಿಲ್ಲ. ಹರಿಯಾಣದಲ್ಲಿ ಬಿಜೆಪಿಯ ಹ್ಯಾಟ್ರಿಕ್‌ ಕನಸು ಭಗ್ನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+