5 ರಾಜ್ಯಗಳ Exit Poll ಸಮೀಕ್ಷೆ: ಕಾಂಗ್ರೆಸ್ ವೈಟ್ ವಾಶ್
ನವದೆಹಲಿ, ಡಿ 4: ಇಂದು ದೆಹಲಿ ವಿಧಾನಸಭೆಯ ಚುನಾವಣೆ ಶಾಂತಿಯುತವಾಗಿ ಮುಗಿಯುವ ಮೂಲಕ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ಮುಕ್ತಾಯಗೊಂಡಿದೆ.
ಮಿಜೋರಾಂ ಹೊರತು ಪಡಿಸಿ ಚುನಾವಾಣೆ ನಡೆದ ನಾಲ್ಕು ರಾಜ್ಯಗಳಾದ ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯದ ಮತಎಣಿಕೆ ಡಿಸೆಂಬರ್ ಎಂಟು ಭಾನುವಾರದಂದು ನಡೆಯಲಿದೆ. ಮಿಜೋರಾಂ ಮತಎಣಿಕೆ ಸೋಮವಾರದಂದು ನಡೆಯಲಿದೆ.
ಛತ್ತೀಸಗಢದ ನಕ್ಸಲ್ ಪೀಡಿತ ಪ್ರದೇಶದಲ್ಲೂ ಚುನಾವಣೆಗೆ ಮತದಾರರು ಹೆಚ್ಚಿನ ಒಲವು ತೋರಿದ್ದು ಈ ಬಾರಿಯ ಅಸೆಂಬ್ಲಿ ಚುನಾವಣೆಯ ವಿಶೇಷವಾಗಿತ್ತು. ಎಲ್ಲಾ ಐದು ರಾಜ್ಯಗಳಲ್ಲಿ ಮತದಾರ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದರು.
ಇಂಡಿಯಾ ಟುಡೇ, ಸಿವೋಟರ್ (ಜಂಟಿಯಾಗಿ), ಐಬಿಎನ್, ದಿ ವೀಕ್, ಸಿಎಸ್ಡಿಎಸ್ (ಜಂಟಿಯಾಗಿ), ಎನ್ ಡಿಟಿವಿ, ನೀಲ್ಸೇನ್, ಟುಡೇಸ್ ಚಾಣಕ್ಯ ನಡೆಸಿದ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಎಲ್ಲಾ ರಾಜ್ಯಗಳಲ್ಲಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಗಲಿದೆ.
ಭಾನುವಾರ (Dec 8) ನಾಲ್ಕು ರಾಜ್ಯಗಳ ಮತಎಣಿಕೆ ಬೆಳಗ್ಗೆ ಎಂಟು ಗಂಟೆಗೆ ಆರಂಭವಾಗಲಿದೆ. ಫಲಿತಾಂಶದ Live Update ಒನ್ ಇಂಡಿಯಾ ಕನ್ನಡದಲ್ಲಿ ಲಭ್ಯವಾಗಲಿದೆ.

ಮಿಜೋರಾಂ (ಒಟ್ಟು ಸ್ಥಾನಗಳು 40)
C-Voter
ಕಾಂಗ್ರೆಸ್ - 19
ಎಂಎನ್ ಎಫ್ & ಎಂಪಿಎಲ್ - 14
ZNP - 5
ಇತರರು - 2
(ಇತರರ ಸಮೀಕ್ಷೆ ವರದಿ ತಕ್ಷಣಕ್ಕೆ ಲಭ್ಯವಾಗಿಲ್ಲ)

ಛತ್ತೀಸಗಢ (ಒಟ್ಟು ಸ್ಥಾನಗಳು - 90)
C-Voter
ಕಾಂಗ್ರೆಸ್ - 32-42
ಬಿಜೆಪಿ - 45-55
ಇತರರು - 0-2
IBN
ಕಾಂಗ್ರೆಸ್ - 37
ಬಿಜೆಪಿ - 50
ಇತರರು - 3
NDTV
ಕಾಂಗ್ರೆಸ್ - 37
ಬಿಜೆಪಿ - 50
ಇತರರು - 3

ರಾಜಸ್ಥಾನ (ಒಟ್ಟು ಸ್ಥಾನಗಳು - 199)
C-Voter
ಕಾಂಗ್ರೆಸ್ - 61
ಬಿಜೆಪಿ - 110
ಇತರರು - 28
IBN
ಕಾಂಗ್ರೆಸ್ - 49-57
ಬಿಜೆಪಿ - 126-136
ಇತರರು - 12-20
NDTV
ಕಾಂಗ್ರೆಸ್ - 49
ಬಿಜೆಪಿ - 130
ಇತರರು - 20

ದೆಹಲಿ (ಒಟ್ಟು ಸ್ಥಾನಗಳು 70)
C-Voter
ಕಾಂಗ್ರೆಸ್ - 21
ಬಿಜೆಪಿ - 29
ಆಮ್ ಆದ್ಮಿ - 16
ಇತರರು - 4
IBN
ಕಾಂಗ್ರೆಸ್ - 20
ಬಿಜೆಪಿ - 34
ಆಮ್ ಆದ್ಮಿ - 13
ಇತರರು - 3
NDTV
ಕಾಂಗ್ರೆಸ್ - 17
ಬಿಜೆಪಿ - 34
ಆಮ್ ಆದ್ಮಿ - 17
ಇತರರು - 2

ಮಧ್ಯಪ್ರದೇಶ (ಒಟ್ಟು ಸ್ಥಾನಗಳು 230)
C-Voter
ಕಾಂಗ್ರೆಸ್ - 92
ಬಿಜೆಪಿ - 128
ಇತರರು - 10
IBN
ಕಾಂಗ್ರೆಸ್ - 67-77
ಬಿಜೆಪಿ - 136-146
ಇತರರು - 13-21
NDTV
ಕಾಂಗ್ರೆಸ್ - 77
ಬಿಜೆಪಿ - 141
ಇತರರು - 12












Click it and Unblock the Notifications