Exit Poll Result Live: ಜಮ್ಮು ಮತ್ತು ಕಾಶ್ಮೀರ, ಹರಿಯಾಣದಲ್ಲಿ ಬಿಜೆಪಿಗೆ ಆಘಾತ! ಎಕ್ಸಿಟ್ ಪೋಲ್ ಫಲಿತಾಂಶಗಳ ವಿವರ
10 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಮೂರು ಹಂತಗಳಲ್ಲಿ ಶಾಂತಿಯುವಾಗಿ ಚುನಾವಣೆ ನಡೆದಿದ್ದು, ಆರ್ಟಿಕಲ್ 370 ರದ್ದಾದ ಬಳಿಕ ನಡೆದ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಸೆಪ್ಟೆಂಬರ್ 18 ರಂದು 24 ಕ್ಷೇತ್ರಗಳಲ್ಲಿ, ಸೆಪ್ಟೆಂಬರ್ 25 ರಂದು 26 ಕ್ಷೇತ್ರಗಳಲ್ಲಿ ಹಾಗೂ ಅಕ್ಟೋಬರ್ 1ರಂದು 40 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ.
90 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟಾರೆಯಾಗಿ ಶೇ.63.88ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ. ಭಯೋತ್ಪಾದನೆ, ಆರ್ಟಿಕಲ್ 370 ರದ್ದತಿ, ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳು ಈ ಬಾರಿ ಚುನಾವಣಾ ವಿಚಾರಗಳಾಗಿದ್ದವು.

ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಮತ್ತು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಮೈತ್ರಿ ಸೂತ್ರದ ಜೊತೆ ಸ್ಪರ್ಧೆ ಮಾಡಿವೆ. ಬಿಜೆಪಿ ಮತ್ತು ಪಿಡಿಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದು, ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿವೆ.
ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಚುನಾವಣೋತ್ತರ ಫಲಿತಾಂಶಗಳು ಕಾಂಗ್ರೆಸ್ ಪಾಳಯದಲ್ಲಿ ಖುಷಿ ತಂದಿದ್ದರೆ, ಬಿಜೆಪಿ ಪಾಳಯದಲ್ಲಿ ಆತಂಕ ಹೆಚ್ಚಿಸಿದೆ. ಸದ್ಯ ಕಾಂಗ್ರೆಸ್ ಪರವಾಗಿ ಫಲಿತಾಂಶ ಬರುವ ಮುನ್ಸೂಚನೆ ಇದ್ದರೂ, ಅಕ್ಟೋಬರ್ 8ರಂದು ಫಲಿತಾಂಶ ಎಲ್ಲಾ ಕುತೂಹಲಗಳಿಗೆ ತೆರೆ ಎಳೆಯಲಿದೆ.
ರಿಪಬ್ಲಿಕ್ ಮಾರ್ಟಿಜ್ ಸಮೀಕ್ಷೆ
* ಕಾಂಗ್ರೆಸ್ 55-62
* ಬಿಜೆಪಿ 18-24
* ಜೆಜೆಪಿ+ 0-3
* ಐಎನ್ಎಲ್ಡಿ 3-6
* ಇತರೆ 2-5
ರಿಪಬ್ಲಿಕ್ ಟಿವಿ-ಪಿ-ಮಾರ್ಕ್ಯೂ ಸಮೀಕ್ಷೆ
* ಕಾಂಗ್ರೆಸ್ 51-61
* ಬಿಜೆಪಿ 27-35
* ಜೆಜೆಪಿ+ 0-1
* ಐಎನ್ಎಲ್ಡಿ+ 1-5
* ಇತರೆ 4-9
India Today C-Voter ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಹರಿಯಾಣದಲ್ಲಿ ಕಾಂಗ್ರೆಸ್ 50-58, ಬಿಜೆಪಿ 20-28, ಮತ್ತು ಇತರರು 10-16 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬಾರಿ ಅತಂತ್ರ ಫಲಿತಾಂಶ ಬರಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ಕಾಂಗ್ರೆಸ್-ಎನ್‌ಸಿ ಮೈತ್ರಿ ಕೂಟ ಹೆಚ್ಚಿನ ಸ್ಥಾನ ಗೆದ್ದರು, ಸರ್ಕಾರ ರಚನೆ ಮಾಡಲು ಬೇಕಾದ ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆ ಇದ್ದು, ಪಿಡಿಪಿ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ.
ಜಮ್ಮು ಮತ್ತು ಕಾಶ್ಮೀರದ 'ಪೀಪಲ್ ಪಲ್ಸ್' ಎಕ್ಸಿಟ್ ಪೋಲ್ ಬಿಡುಗಡೆ ಆಗಿದೆ. ಇಲ್ಲಿ ಕಾಂಗ್ರೆಸ್ 46 ರಿಂದ 50 ಸ್ಥಾನ, ಬಿಜೆಪಿ ಕೇವಲ 23 ರಿಂದ 27, ಪಿಡಿಪಿ 07 ರಿಂದ 11 ಸೀಟುಗಳು ಗೆದ್ದರೆ, ಇತರೆ ಪಾರ್ಟಿಗಳು 4ರಿಂದ 6 ಸೀಟು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ದಶಕದ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ಸೆಟೆದು ನಿಲ್ಲುವ ಭರವಸೆ ಸಿಕ್ಕಿದೆ.

ಪೀಪಲ್ ಪಲ್ಸ್' ಸಮೀಕ್ಷೆ ಪ್ರಕಾರ, ಹರಿಯಾಣದಲ್ಲಿ ಬಿಜೆಪಿ ನೆಲಕಚ್ಚುವ ಸಾಧ್ಯತೆ ಇದೆ. ಇಲ್ಲಿ ಕಾಂಗ್ರೆಸ್ 55 ರಿಂದ 62 ಸ್ಥಾನ, ಆಡಳಿತ ಪಕ್ಷ ಬಿಜೆಪಿ ಕೇವಲ 20 ರಿಂದ 32, ಜೆಜೆಪಿ 01 ಸ್ಥಾನಗ, ಐಎನ್‌ಎಲ್‌ಡಿ 2 ರಿಂದ 3 ಸೀಟು ಹಾಗೂ ಇತರರು 3 ರಿಂದ 5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರ ಚುನಾವಣೆ ಕುರಿತು India Today C-Voter ನಡೆಸಿದ ಚುನಾವಣೋತ್ತರ ಸಮೀಕ್ಷೆ ಅಂತಿಮ ಫಲಿತಾಂಶ ಪ್ರಕಟ. ಕಾಂಗ್ರೆಸ್+ಎನ್‌ಸಿ 40-48 ಸೀಟು, ಬಿಜೆಪಿ 27-32 ಸೀಟು, ಪಿಡಿಪಿ 6-12 ಸೀಟು ಮತ್ತು ಇತರರು 6-11 ಸೀಟುಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ.
Republic Matrize Exit poll: ರಿಪಬ್ಲಿಕ್ ಮ್ಯಾಟ್ರಿಜ್‌ನ ಎಕ್ಸಿಟ್ ಪೋಲ್ ಪ್ರಕಾರ ಜಮ್ಮು & ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂದು ತಿಳಿಸಿದೆ. ಬಿಜೆಪಿ 25-31
ಕಾಂಗ್ರೆಸ್ 12
ಎಐಪಿ 0-2
ಎನ್‌ಸಿ 11-15
ಪಿಡಿಪಿ - 28
ಇತರೆ ಪಕ್ಷಗಳು- 0-1
India Today C-Voter ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜಮ್ಮು ವಿಭಾಗದಲ್ಲಿ ಕಾಂಗ್ರೆಸ್ ಮೈತ್ರಿಕೂಟ 11-15, ಬಿಜೆಪಿ 27-31, ಪಿಡಿಪಿ 0-2, ಇತರರು 0-1 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.
Dhruv Research exit polls: ಧ್ರುವ್ ರಿಸರ್ಚ್ ಎಕ್ಸಿಟ್ ಪೋಲ್ ಪ್ರಕಾರ, ಹರಿಯಾಣದ 90 ಸ್ಥಾನಗಳ ಅಸೆಂಬ್ಲಿಯಲ್ಲಿ ಕಾಂಗ್ರೆಸ್ 50-64 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ, ಇದು ಬಹುಮತದ 46 ಅನ್ನು ಮೀರಿಸಬಹುದು. ಬಿಜೆಪಿ 22-32 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಆದರೆ ಎಎಪಿ, ಐಎನ್‌ಎಲ್‌ಡಿ ಮತ್ತು ಜೆಜೆಪಿ ಇತರ ಪಕ್ಷಗಳು 2-8 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯೊಂದಿಗೆ ಕಡಿಮೆ ಅಥವಾ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭವಿಷ್ಯ ನುಡಿದಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ; ದೈನಿಕ್ ಭಾಸ್ಕರ್ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ
ಬಿಜೆಪಿ: 20 - 25
ಕಾಂಗ್ರೆಸ್ - ಎನ್‌ಸಿ: 35-40
ಪಿಡಿಪಿ: 4-7
ಇತರೆ: 12-16
News18 exit poll: ನ್ಯೂಸ್ 18 ರ ಎಕ್ಸಿಟ್ ಪೋಲ್ ಪ್ರಕಾರ, ಹರಿಯಾಣದಲ್ಲಿ ಕಾಂಗ್ರೆಸ್ 59 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಬಿಜೆಪಿ 21 ಸ್ಥಾನಗಳಲ್ಲಿ ಹಿಂದುಳಿದಿದೆ ಎಂದು ತೋರಿಸುತ್ತದೆ.

Matrize exit poll: ಮ್ಯಾಟ್ರಿಜ್‌ನ ಎಕ್ಸಿಟ್ ಪೋಲ್ ಪ್ರಕಾರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುವುದು ಖಚಿತವಾಗಿದೆ.
ಬಿಜೆಪಿ: 18-24 ಸ್ಥಾನಗಳು
ಕಾಂಗ್ರೆಸ್: 55-62 ಸ್ಥಾನಗಳು
ಐಎನ್‌ಎಲ್‌ಡಿ: 3-6 ಸ್ಥಾನಗಳು
ಜೆಜೆಪಿ: 0-3 ಸ್ಥಾನಗಳು
ಇತರೆ: 2-5 ಸ್ಥಾನಗಳು
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಕುರಿತು India Today C-Voter ನಡೆಸಿದ ಸಮೀಕ್ಷೆಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಒಮರ್ ಅಬ್ದುಲ್ಲಾ ಉತ್ತಮ ಎಂದು ಶೇ 39ರಷ್ಟು ಜನರು, ರವೀಂದ್ರ ರೈನಾ ಉತ್ತಮ ಎಂದು ಶೇ 12ರಷ್ಟು ಜನರು, ಮೆಹಬೂಬಾ ಮುಫ್ತಿ ಉತ್ತಮ ಎಂದು ಶೇ 9ರಷ್ಟು ಜನರು ಮತ್ತು ವಿಕಾರ್ ರಸೂಲ್ ವಾನಿ ಪರವಾಗಿ ಶೇ 6ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

People's pulse exit poll: ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್ ಪ್ರಕಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಬಹುಮತ ಪಡೆಯುವುದು ಖಚಿತವಾಗಿದೆ.
ಬಿಜೆಪಿ : 23-27
ಕಾಂಗ್ರೆಸ್-ಎನ್‌ಸಿ: 46-50
ಪಿಡಿಪಿ: 7-11
ಇತರೆ: 4-6
India Today C-Voter ಚುನಾವಣೋತ್ತರ ಸಮೀಕ್ಷೆಯ 43 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗದೆ. ಕಾಂಗ್ರೆಸ್-ಎನ್‌ಸಿ 11-15, ಬಿಜೆಪಿ 27-31, ಪಿಡಿಪಿ 0-2 ಮತ್ತು ಇತರರು 0-1 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ. ರಾಜ್ಯದಲ್ಲಿ 90 ವಿಧಾನಸಭಾ ಕ್ಷೇತ್ರಗಳಿವೆ.

ಮ್ಯಾಟ್ರಿಜ್ ಬಿಡುಗಡೆ ಮಾಡಿರುವ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 25, ಕಾಂಗ್ರೆಸ್ 12, ಎನ್‌ಸಿ 15, ಪಿಡಿಪಿ 28 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇತರರು 7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಕುರಿತು India Today C-Voter ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಶೇ 36, ಬಿಜೆಪಿ ಶೇ 41, ಪಿಡಿಎಫ್ ಶೇ 5 ಮತ್ತು ಇತರರು ಶೇ 18ರಷ್ಟು ಮತಗಳನ್ನು ಪಡೆಯಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಜನಾದೇಶ ನೀಡಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬ ಮುಸ್ಲಿಂ ಕೂಡ ಇಲ್ಲ ಎಂದು ಎಂದ ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಾವು ಬಿಜೆಪಿ ಜೊತೆ ಕೈಜೋಡಿಸಲ್ಲ ಎಂದು ಅವರು ಹೇಳಿದ್ದು, ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಜಮ್ಮು ಮತ್ತು ಕಾಶ್ಮಿರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 8ರಂದು ಹೊರಬೀಳಲಿದ್ದು, ನಾಲ್ಕು ಪ್ರಮುಖ ಪಕ್ಷಗಳು ಅಲರ್ಟ್ ಆಗಿವೆ. ಬಿಜೆಪಿ, ಕಾಂಗ್ರೆಸ್, ಎನ್‌ಸಿ ಮತ್ತು ಪಿಡಿಪಿ ಚುನಾವಣೋತ್ತರ ಸಮೀಕ್ಷೆಗಳನ್ನು ಅಸಕ್ತಿಯಿಂದ ಗಮನಿಸುತ್ತಿದ್ದು, ಬಳಿಕ ಮೈತ್ರಿ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಜನಾಭಿಪ್ರಾಯ ಏನು ಎನ್ನುವುದು ಮತಯಂತ್ರಗಳಲ್ಲಿ ಭದ್ರವಾಗಿದೆ. ಅಕ್ಟೋಬರ್ 8ರಂದು ಮತಯಂತ್ರದಲ್ಲಿ ಏನಿದೆ ಎನ್ನುವುದು ನಮಗೆ ತಿಳಿಯಲಿದೆ. ಯಾರಿಗೆ ಬಹುಮತ ಬಂದಿದೆ, ಯಾರಿಗೆ ಬಹುಮತ ಇಲ್ಲ ಎನ್ನುವುದನ್ನು ತಿಳಿಯಲು ಅಕ್ಟೋಬರ್ 8ರವೆಗೆ ಕಾಯೋಣ. ನನಗೆ ಎಕ್ಸಿಟ್ ಪೋಲ್‌ಗಳಲ್ಲಿ ನಂಬಿಕೆ ಇಲ್ಲ. ಅದನ್ನು ನಾನು ಎಂದಿಗೂ ನಂಬಲ್ಲ ಎಂದು ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
2014 ರಲ್ಲಿ, ವಿಧಾನಸಭಾ ಚುನಾವಣೆ ಮತದಾನ ಅಕ್ಟೋಬರ್ 15 ರಂದು ನಡೆದಿತ್ತು. ಅಕ್ಟೋಬರ್ 19ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶೇ. 76.54 ರಷ್ಟು ಮತದಾನವಾಗಿತ್ತು, ಕಳೆದ ಬಾರಿ ಬಿಜೆಪಿ 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಕೂಡ ಬಿಜೆಪಿ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ.
ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಅಕ್ಟೋಬರ್ 5ರಂದು ಸಂಜೆ 6.30ರ ಬಳಿಕ ಮಾತ್ರ ಪ್ರಸಾರ ಮಾಡಲು ಅನುಮತಿ ನೀಡಲಾಗಿದೆ.
ಎನ್‌ಸಿ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಗಂದೇರ್ ಬಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರೆ, ಬಿಜೆಪಿ ಜಮ್ಮು ಮತ್ತು ಕಾಶ್ಮಿರ ಅಧ್ಯಕ್ಷ ರವೀಂದರ್ ರೈನಾ ನೌಶೆರಾದಿಂದ ಸ್ಪರ್ಧೆ ಮಾಡಿದ್ದಾರೆ. ನಗ್ರೋಟಾದಿಂದ ಬಿಜೆಪಿಯ ದೇವೆಂದರ್ ಸಿಂಗ್ ರಾಣಾ, ಶ್ರೀಗುಜ್ವಾರಾ-ಬಿಜ್‌ಬೆಹರಾ ಕ್ಷೇತ್ರದಿಂದ ಪಿಡಿಪಿಯ ಇಲ್ತಿಜಾ ಮುಫ್ತಿ, ಪುಲ್ವಾಮಾದರಿಂದ ಪಿಡಿಪಿಯ ವಹೀದ್ ಪಾರಾ ಸ್ಪರ್ಧೆ ಮಾಡಿದ್ದು, ಈ ಕ್ಷೇತ್ರದ ಫಲಿತಾಂಶಗಳು ಕುತೂಹಲ ಕೆರಳಿಸಿದೆ.
ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 2 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 1,031 ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರಮುಖ ಪಕ್ಷಗಳು ಹರಿಯಾಣ ಗೆಲ್ಲುವ ಕನಸು ಕಾಣುತ್ತಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18 ರಂದು 24 ಕ್ಷೇತ್ರಗಳಲ್ಲಿ, ಸೆಪ್ಟೆಂಬರ್ 25 ರಂದು 26 ಕ್ಷೇತ್ರಗಳಲ್ಲಿ ಹಾಗೂ ಅಕ್ಟೋಬರ್ 1ರಂದು 40 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ. ದಶಕಗಳ ಬಳಿಕ ವಿಧಾನಸಭಾ ಚುನಾವಣೆ ನಡೆದಿದ್ದು, ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications