Mizoram Assembly Election Exit Poll Results 2023: ಈಶಾನ್ಯ ರಾಜ್ಯದಲ್ಲಿ ಕಿಂಗ್ ಮೇಕರ್ ಯಾರು?
ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಪಾರ್ಟಿ (ZPM) ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಉಂಟಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಕಿಂಗ್ ಮೇಕರ್ ಆಗಿ ಹೊರಹೊಮ್ಮುವ ಭರವಸೆ ಇದೆ.
ಸಾಂಕ್ರಾಮಿಕ ರೋಗದಿಂದ ಹಣಕಾಸಿನ ಕೊರತೆಯ ಹೊರತಾಗಿಯೂ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿನ ಅಭಿವೃದ್ಧಿಯನ್ನು ತೋರಿಸುವುದರ ಜೊತೆಗೆ, ಮಿಜೋ ನ್ಯಾಷನ್ ಫ್ರಂಟ್ (ಎಂಎನ್‌ಎಫ್) ಮ್ಯಾನ್ಮಾರ್, ಬಾಂಗ್ಲಾದೇಶ ಮಣಿಪುರ ನಿರಾಶ್ರಿತರು ಸ್ಥಳಾಂತರಗೊಂಡ ಜನರ ಸಮಸ್ಯೆಯನ್ನು ಲಾಭ ಮಾಡಿಕೊಳ್ಳಲು ಪ್ರಯತ್ನಿಸಿತು.

ಪ್ರಮುಖ ಕಾರ್ಯಕ್ರಮದ ಅನುಷ್ಠಾನ, ಸಾಮಾಜಿಕ-ಆರ್ಥಿಕ ಅಭಿವೃದ್ಧಿ (SEDP), ಮೇಲ್ಸೇತುವೆಗಳ ನಿರ್ಮಾಣ ಮತ್ತು ಉತ್ತಮ ರಸ್ತೆಗಳು ಸೇರಿದಂತೆ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಎಂಎನ್‌ಎಫ್ ವಿಫಲವಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಮಾಡಿದರೆ, ಝಡ್‌ಪಿಎಂ ತನ್ನ ಬದಲಾವಣೆಯ ನೀತಿ ಮತ್ತು ಹೊಸ ಆಡಳಿತ ವ್ಯವಸ್ಥೆಯ ಭರವಸೆಯೊಂದಿಗೆ ಪ್ರಚಾರ ಮಾಡಿದೆ.
ಕಿಂಗ್ ಮೇಕರ್ ಯಾರು?
2018 ರಲ್ಲಿ, ಎಂಎನ್‌ಎಫ್ 37.8 ಶೇಕಡಾ ಮತಗಳ ಹಂಚಿಕೆಯೊಂದಿಗೆ ವಿಜಯಶಾಲಿಯಾಗಿ ಹೊರಹೊಮ್ಮಿತು, ದಶಕದ ಸುದೀರ್ಘ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಿತು. 2018 ರ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಪ್ರಾದೇಶಿಕ ಪಕ್ಷವಾದ ಝಡ್‌ಪಿಎಂ ಎಂಟು ಸ್ಥಾನಗಳನ್ನು ಗಳಿಸಿತು. ಕಾಂಗ್ರೆಸ್ ಐದು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೆ ಮತ್ತು ಬಿಜೆಪಿ ಒಂದನ್ನು ಗೆದ್ದು ಈಶಾನ್ಯ ರಾಜ್ಯದಲ್ಲಿ ತನ್ನ ಖಾತೆ ತೆರೆದಿತ್ತು.
ಮಿಜೋರಾಂ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರೊ.ಜೆ.ಡೌಂಗೆಲ್ ಅವರು ಸಮೀಕ್ಷೆಯನ್ನು ರಾಜ್ಯದಲ್ಲಿ ಎಂಎನ್‌ಎಫ್ ಮತ್ತು ಝಡ್‌ಪಿಎಂ ನಡುವಿನ ತೀವ್ರ ಪೈಪೋಟಿ ನಡೆಯಲಿದೆ" ಎಂದು ಅಂದಾಜಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಝಡ್‌ಪಿಎಂ ಜನಪ್ರಿಯತೆ ಹೊಂದಿದ್ದರೆ, ಗ್ರಾಮೀಣ ಭಾಗದಲ್ಲಿ ಎಂಎನ್‌ಎಫ್ ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ. ಇಲ್ಲಿ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ದಟ್ಟವಾಗಿದೆ. ಒಟ್ಟು 40 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 21 ಮ್ಯಾಜಿಕ್ ನಂಬರ್ ಆಗಿದೆ.
ವಿವಿಧ ಸಮೀಕ್ಷೆಗಳು ಹೇಳಿದ್ದೇನು?
ಎಬಿಸಿ - ಸಿ ವೋಟರ್ ಎಕ್ಸಿಟ್ ಪೋಲ್ ಸಮೀಕ್ಷೆಯ ಫಲಿತಾಂಶಗಳು ಆಡಳಿತಾರೂಢ ಎಂಎನ್‌ಎಫ್ ಬಹುಮತದ ಅಂಕವನ್ನು ದಾಟುವ ಸಾಧ್ಯತೆಯನ್ನು ತೋರಿಸುತ್ತವೆ.
ಎಂಎನ್‌ಎಫ್: 15 ರಿಂದ 21
ಐಡ್‌ಪಿಎಂ:12 ರಿಂದ 18
ಕಾಂಗ್ರೆಸ್: 2 ರಿಂದ 8
ಬಿಜೆಪಿ: 0
ಟೈಮ್ಸ್ ನೌ-ಇಟಿಜಿ ಎಕ್ಸಿಟ್ ಪೋಲ್
ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಆದರೆ, ಬಹುಮತ ಪಡೆಯಲು 21ರ ಗಡಿ ಮುಟ್ಟುವ ಸಾಧ್ಯತೆ ಕಡಿಮೆ ಎಂದು ಹೇಳಿದೆ.
ಎಂಎನ್‌ಎಫ್: 14 ರಿಂದ 18
ಝಡ್‌ಪಿಎಂ: 10 ರಿಂದ 14
ಕಾಂಗ್ರೆಸ್: 9 ರಿಂದ 13
ಬಿಜೆಪಿ: 0-2
ಇಂಡಿಯಾ ಟಿವಿ-ಸಿಎನ್‌ಎಕ್ಸ್
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್ ಆಡಳಿತಾರೂಢ ಮಿಜೋ ನ್ಯಾಶನಲ್ ಫ್ರಂಟ್ (ಎಂಎನ್‌ಎಫ್)ಗೆ ಗರಿಷ್ಠ ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದೆ, ಆದರೆ ಮ್ಯಾಜಿಕ್ ನಂಬರ್ 21 ಅನ್ನು ದಾಟುವ ಸಾಧ್ಯತೆಯಿಲ್ಲ.
ಎಂಎನ್‌ಎಫ್: 14-18
ಝಡ್‌ಪಿಎಂ: 12-16
ಕಾಂಗ್ರೆಸ್: 8-10
ಬಿಜೆಪಿ: 0-2
ಜನ್ ಕಿ ಬಾತ್
ಜನ್ ಕಿ ಬಾತ್ ಎಕ್ಸಿಟ್ ಪೋಲ್ ಸಮೀಕ್ಷೆಯು ಜೋರಾಮ್ ಪೀಪಲ್ಸ್ ಮೂವ್‌ಮೆಂಟ್‌ಗೆ ಮೇಲುಗೈ ಎಂದು ಭವಿಷ್ಯ ನುಡಿದಿದೆ.
ಝಡ್‌ಪಿಎಂ: 15 ರಿಂದ 25
ಎಂಎನ್‌ಎಫ್: 10 ರಿಂದ 14
ಕಾಂಗ್ರೆಸ್: 5 ರಿಂದ 9
ಬಿಜೆಪಿ: 0 ರಿಂದ 2












Click it and Unblock the Notifications