ಎಬಿಪಿ ನ್ಯೂಸ್ Exit Poll : ಗುಜರಾತ್ ನಲ್ಲಿ ಬಿಜೆಪಿ ಬಾಯಿಗೆ ಶ್ರೀಖಂಡ
Recommended Video

ನವದೆಹಲಿ, ಡಿಸೆಂಬರ್ 14 : ಗುಜರಾತ್ ವಿಧಾನಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಭರಾಟೆ ಶುರುವಾಗಿದ್ದು, ಯಾವ ಪಕ್ಷ ಜಯಭೇರಿ ಬಾರಿಸುತ್ತದೆ, ಯಾವ ಪಕ್ಷ ಮಣ್ಣು ಮುಕ್ಕುತ್ತದೆ ಎಂಬುದರತ್ತ ಎಲ್ಲರ ಕಣ್ಣು ನೆಟ್ಟಿದೆ.
ಎಬಿಪಿ ನ್ಯೂಸ್ - ಸಿಎಸ್ ಡಿಎಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಭಾರತೀಯ ಜನತಾ ಪಕ್ಷ 117 ಕ್ಷೇತ್ರಗಳಲ್ಲಿ ಗೆಲುವಿನ ಮಾಲೆ ಧರಿಸಲಿದೆ. ಸರಳ ಬಹುಮತಕ್ಕೆ ಬೇಕಾಗಿರುವುದು 92 ಸ್ಥಾನಗಳು. ಕಾಂಗ್ರೆಸ್ 64 ಕ್ಷೇತ್ರಗಳನ್ನು ಪಡೆಯಲಿದ್ದರೆ, 1 ಕ್ಷೇತ್ರ ಮಾತ್ರ ಇತರ ಪಕ್ಷಗಳ ಪಾಲಾಗಲಿದೆ.
ಗುಜರಾತ್ ನ ಸೌರಾಷ್ಟ್ರ ಮತ್ತು ಕಛ್ ಬಿಜೆಪಿ ಜಯಭೇರಿ ಬಾರಿಸಲಿದ್ದು, 54 ಕ್ಷೇತ್ರಗಳಲ್ಲಿ 31-37ರಲ್ಲಿ ಜಯಶಾಲಿಯಾಗಲಿದೆ. ಕಾಂಗ್ರೆಸ್ಸಿಗೆ ಕೇವಲ 16-22 ಸ್ಥಾನಗಳು ಲಭಿಸಲಿವೆ. 1 ಕ್ಷೇತ್ರ ಪಕ್ಷೇತ್ರರ ಪಾಲಾಗಲಿದೆ.

ದಕ್ಷಿಣ ಗುಜರಾತ್ ನಲ್ಲಿ ಬಿಜೆಪಿ ಶೇ.52 ಮತಗಳನ್ನು ಕಬಳಿಸಲಿದ್ದು, 21-27 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ ಶೇ.40 ಮತ ಪಡೆಯಲಿದ್ದು, 9-13 ಸ್ಥಾನಗಳನ್ನು ಗೆಲ್ಲಲಿದೆ. ಶೇ.8ರಷ್ಟು ಮತಗಳು ಇತರ ಪಕ್ಷಗಳ ಪಾಲಾಗಲಿವೆ.
ಉತ್ತರ ಗುಜರಾತ್ ನಲ್ಲಿ ಚುನಾವಣಾಪೂರ್ವ ಸಮೀಕ್ಷೆ ಸಂಪೂರ್ಣವಾಗಿ ತಲೆಕೆಳಗು ಆಗಿದ್ದು, ಬಿಜೆಪಿ 32-38 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 16-18 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಉತ್ತರ ಗುಜರಾತ್ ನಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಎಬಿಪಿ ನ್ಯೂಸ್ ಹೇಳಿತ್ತು.
ಗುಜರಾತ್ ನ ಕೇಂದ್ರ ಭಾಗದಲ್ಲಿ 40 ಕ್ಷೇತ್ರಗಳಲ್ಲಿ ಬಿಜೆಪಿ 21-27, ಕಾಂಗ್ರೆಸ್ 13-19 ಜಯ ಗಳಿಸಲಿವೆ. ಬಿಜೆಪಿ ಶೇ.47ರಷ್ಟು ಮತಗಳನ್ನು ಕಬಳಿಸಲಿದ್ದರೆ, ಕಾಂಗ್ರೆಸ್ ಪಾಲು ಶೇ.42ರಷ್ಟು. ಶೇ.11ರಷ್ಟು ಮತಗಳು ಇತರ ಪಕ್ಷಗಳ ಪಾಲಾಗಲಿವೆ.












Click it and Unblock the Notifications