Exit Poll: ಎಕ್ಸಿಟ್ ಪೋಲ್ ಭವಿಷ್ಯ ಎಷ್ಟು ಸತ್ಯ? 2019ರಲ್ಲಿ ಮಹಾರಾಷ್ಟ್ರ & ಜಾರ್ಖಂಡ್ ಸಮೀಕ್ಷೆ ನಿಜವಾಗಿತ್ತಾ?
ಚುನಾವಣೆ ನಡೆದಾಗ ಪ್ರತಿಬಾರಿ ಕೂಡ ಎಕ್ಸಿಟ್ ಪೋಲ್ ಕಡೆಗೆ ಮತದಾರರು ಗಮನವನ್ನ ಹರಿಸುತ್ತಾರೆ. ಮತದಾನ ಸಂಪೂರ್ಣ ಮುಕ್ತಾಯವಾಗುವ ಕೊನೆಯ ದಿನ ಸಂಜೆಯ ಬಳಿಕ ಹೀಗೆ ಎಕ್ಸಿಟ್ ಪೋಲ್ ಅಂದ್ರೆ ಚುನಾವಣೋತ್ತರ ಸಮೀಕ್ಷೆ ಹೊರ ಬಿಡಲಾಗುತ್ತದೆ. ಆದರೆ ಎಕ್ಸಿಟ್ ಪೋಲ್ ಕೆಲವು ಬಾರಿ ನಿಜವಾದರೆ, ಹಲವು ಬಾರಿ ಸೋತು ಹೋಗಿವೆ ಎಂಬ ಭಾರಿ ಗಂಭೀರ ಆರೋಪ ಕೂಡ ಇದೆ. ಹಾಗಾದ್ರೆ 2019ರ ಮಹಾರಾಷ್ಟ್ರ & ಜಾರ್ಖಂಡ್ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ರಿಸಲ್ಟ್ ನಿಜವಾಗಿತ್ತಾ? ಎಷ್ಟು ನಿಖರತೆ ಕಂಡು ಬಂದಿತ್ತು? ಬನ್ನಿ ತಿಳಿಯೋಣ.
ಮಹಾರಾಷ್ಟ್ರ & ಜಾರ್ಖಂಡ್ ಚುನಾವಣೆ 2019 ರಲ್ಲಿ ಕೂಡ ಇದೇ ರೀತಿ ಗಮನ ಸೆಳೆದಿತ್ತು. ಚುನಾವಣೆ ಗೆಲ್ಲಲು ಬಿಜೆಪಿ & ಕಾಂಗ್ರೆಸ್ ನೇತೃತ್ವದ 2 ಮೈತ್ರಿಕೂಟಗಳು ಭರ್ಜರಿ ಫೈಟಿಂಗ್ ಕೂಡ ನಡೆಸಿದ್ದವು. ಅದರಲ್ಲೂ ಕಾಂಗ್ರೆಸ್ ಈ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆ ನಡುವೆ ಹೋರಾಟ ಆರಂಭಿಸಿತ್ತು. ಮತ್ತೊಂದು ಕಡೆ ಬಿಜೆಪಿ ನಾಯಕರಿಗೆ ಅಧಿಕಾರ ಉಳಿಸಿಕೊಳ್ಳುವ ಹೋರಾಟವಾಗಿತ್ತು. ಹಾಗಾದರೆ 2019ರ ಮಹಾರಾಷ್ಟ್ರ & ಜಾರ್ಖಂಡ್ ವಿಧಾನಸಭೆ ಎಲೆಕ್ಷನ್ ಎಕ್ಸಿಟ್ ಪೋಲ್ ಫಲಿತಾಂಶ ಏನಾಗಿತ್ತು? ರಿಯಲ್ ರಿಸಲ್ಟ್ ಸಮೀಕ್ಷೆಗಳ ಪ್ರಕಾರವೇ ಬಂದಿತ್ತಾ?

2019ರ ಎಕ್ಸಿಟ್ ಪೋಲ್ ಹೀಗಿತ್ತು!
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಬಿಜೆಪಿ 105 ಸ್ಥಾನ ಗೆದ್ದಿತ್ತು. ಹಾಗೇ ಶಿವಸೇನೆ 56 ಸ್ಥಾನದಲ್ಲಿ ಗೆಲುವು ಕಂಡಿತ್ತು. ಇನ್ನು ಎನ್‌ಸಿಪಿ ಪಕ್ಷವು 54 ಸ್ಥಾನಗಳನ್ನ ವಶಕ್ಕೆ ಪಡೆದಿತ್ತು. ಮತ್ತೊಂದು ಕಡೆ ಕಾಂಗ್ರೆಸ್ 44 ಸ್ಥಾನಗಳಿಗೆ ತೃಪ್ತಿಪಟ್ಟಿತ್ತು. ಹೀಗಿದ್ದಾಗ 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್‌ಗಳು ಬೇರೆಯದ್ದೇ ರೀತಿ ಫಲಿತಾಂಶ ನೀಡಿದ್ದವು.
2019 ರಲ್ಲಿ ಇಂಡಿಯಾ ಟುಡೇ-ಆಕ್ಸಿಸ್ ನೀಡಿದ್ದ ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಪ್ರಕಾರ, ಶಿವಸೇನೆ & ಎನ್‌ಡಿಎ ಸೇರಿ 166 ರಿಂದ 194 ಸ್ಥಾನ ಗೆಲ್ಲುವ ಬಗ್ಗೆ ಮುನ್ಸೂಚನೆ ನೀಡಲಾಗಿತ್ತು. ಹಾಗೇ ಮತ್ತೊಂದು ಕಡೆ ಕಾಂಗ್ರೆಸ್ & ಎನ್‌ಸಿಪಿ ಸೇರಿ ಯುಪಿಎ ಒಕ್ಕೂಟ 72 ರಿಂದ 90 ಸ್ಥಾನ ಗೆಲ್ಲಬಹುದು ಎನ್ನಲಾಗಿತ್ತು.
ಎನ್‌ಡಿಎ ಬಹುಮತದ ಮುನ್ಸೂಚನೆ ನೀಡಲಾಗಿತ್ತು
ಇನ್ನು ನ್ಯೂಸ್18-ಐಪಿಎಸ್‌ಒಎಸ್ ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಆಗ 243 ಸ್ಥಾನ ಎನ್‌ಡಿಎ ಗೆಲ್ಲಬಹುದು ಎನ್ನಲಾಗಿತ್ತು, ಹಾಗೇ 41 ಸ್ಥಾನದಲ್ಲಿ ಯುಪಿಎ ಗೆಲ್ಲುವ ನಿರೀಕ್ಷೆ ಇತ್ತು. ಮತ್ತೊಂದು ಕಡೆ ರಿಪಬ್ಲಿಕ್-ಜನ್ ಕಿ ಬಾತ್ ಎನ್‌ಡಿಎ ಒಕ್ಕೂಟಕ್ಕೆ 216 ರಿಂದ 230 ಸ್ಥಾನ ಸಿಗುವ ಬಗ್ಗೆ ಸಮೀಕ್ಷೆಗಳ ಮೂಲಕ ನಿರೀಕ್ಷೆ ಮಾಡಿತ್ತು, ಹಾಗೇ ಟೈಮ್ಸ್ ನೌ ಪ್ರಕಾರ 230 ಸ್ಥಾನದಲ್ಲಿ ಎನ್‌ಡಿಎ ಗೆಲ್ಲುವ ನಿರೀಕ್ಷೆ ಇತ್ತು, ಯುಪಿಎ 48 ಸ್ಥಾನ ಗೆಲ್ಲಬಹುದು ಎಂದು ಹೇಳಲಾಗಿತ್ತು. ಇಷ್ಟೆಲ್ಲದರ ನಡುವೆ ಎಬಿಪಿ ನ್ಯೂಸ್-ಸಿವೋಟರ್ 204 ಸ್ಥಾನ ಎನ್‌ಡಿಎಗೆ & 69 ಸ್ಥಾನ ಯುಪಿಎಗೆ ನೀಡಿತ್ತು.












Click it and Unblock the Notifications