ತಮಿಳುನಾಡು: ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ
ಬೆಂಗಳೂರು, ಜೂನ್ 5: ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿ ತಮಿಳುನಾಡಿನ ತಿರುಚಿ ನಗರ ಪಾಲಿಕೆ ದೇಶದ ಗಮನ ಸೆಳೆದಿದೆ. ತಿರುಚಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಿದೆ.
ರಾಜ್ಯ ಮೊದಲ ತೃತೀಯ ಲಿಂಗಿಗಳ ಶೌಚಾಲಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಂದಾಜು 9.8 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗಾಗಿ ನಿರ್ಮಿಸಲಾಗಿರುವ ಶೌಚಾಲಯ ಪ್ರದೇಶದಲ್ಲೇ ಈ ನೂತನ ಶೌಚಾಲಯವನ್ನು ನಿರ್ಮಿಸಲಾಗಿದ್ದು, ಮೂತ್ರಾಲಯಕ್ಕೆ ಬೇಕಾದ ಸಮರ್ಪಕ ಜಾಗದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಶೌಚಾಲಯದ ಮುಂಭಾಗದಲ್ಲಿ ವಿಶೇಷವಾಗಿ ತೃತೀಯ ಲಿಂಗಿಗಳಿಗೆ ಮಾತ್ರ ಎಂಬ ಸೂಚನಾ ಫಲಕವನ್ನು ಹಾಕಲಾಗಿದ್ದು, ಯಾವುದೇ ಶುಲ್ಕವನ್ನು ವಿಧಿಸದೇ ಉಚಿತ ಪ್ರವೇಶವನ್ನು ನೀಡಿದೆ. ಶೌಚಾಲಯದ ನಿರ್ವಹಣೆಗಾಗಿ ಓರ್ವ ಕೆಲಸಗಾರನನ್ನು ನೇಮಕ ಮಾಡಲಾಗಿದೆ.

ಹಲವು ವರ್ಷಗಳ ಬೇಡಿಕೆಯನ್ನು ಕೊನೆಗೂ ಈಡೇರಿಸಲಾಗಿದೆ ತೃತೀಯ ಲಿಂಗಿಗಳಿಗೆ ಶೌಚಾಲಯ ನಿರ್ಮಿಸಿದ ಮೊದಲ ನಗರ ಎಂಬ ಕೀರ್ತಿಗೂ ತಿರುಚಿ ಪಾತ್ರವಾಗಿದೆ. ಈ ಶೌಚಾಲಯದಿಂದ ತೃತೀಯ ಲಿಂಗಿಗಳು ಎದುರಿಸುತ್ತಿದ್ದ ಒಂದು ಸಮಸ್ಯೆಗೆ ಪರಿಹಾರ ದೊರೆತಂದಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications