ಉದ್ಯೋಗಿಗಳ ಪಿಎಫ್ ದೇಣಿಗೆ ಪ್ರಮಾಣ ಶೇ. 10ಕ್ಕೆ ಇಳಿಕೆ?
ನವದೆಹಲಿ, ಮೇ 26: ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ನಿಯಮಗಳಡಿ, ಪಿಎಫ್ ಗಾಗಿ ಕಡಿತಗೊಳ್ಳುತ್ತಿದ್ದ ವೇತನದಾರರ ಮೂಲ ವೇತನದ ಶೇ. 12ರಷ್ಟು ಹಣವನ್ನು ಶೇ. 10ಕ್ಕೆ ಇಳಿಸುವ ಪ್ರಸ್ತಾವನೆಯು ಸರ್ಕಾರದ ಮುಂದಿದೆ.
ಶನಿವಾರ ನಡೆಯಲಿರುವ ಇಪಿಎಫ್ ಒ ಸಭೆಯಲ್ಲಿ ಈ ಪ್ರಸ್ತಾವನೆ ಚರ್ಚೆಗೆ ಬರಲಿದ್ದು, ಇದಕ್ಕೆ ಅನುಮೋದನೆ ಸಿಕ್ಕಲ್ಲಿ, ವೇತನದಾರರ ಪಿಎಫ್ ನಿಧಿಗಾಗಿ ವರ್ಗಾವಣೆಯಾಗುವ ಹಣದ ಪ್ರಮಾಣ ಶೇ. 10ಕ್ಕೆ ಇಳಿಯಲಿದೆ.[ಪಿಎಫ್ ಖಾತೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ]

ಸದ್ಯಕ್ಕೆ ಚಾಲ್ತಿಯಲ್ಲಿರುವಂತೆ, ಉದ್ಯೋಗಿಗಳ ಮೂಲ ವೇತನದಲ್ಲಿ ಶೇ. 12ರಷ್ಟು ಹಣವನ್ನು ಭವಿಷ್ಯ ನಿಧಿಗೆ ವರ್ಗಾಯಿಸಲಾಗುತ್ತಿದೆ. ಇದೇ ಮೊತ್ತದಷ್ಟು ಹಣವು ಉದ್ಯೋಗದಾರರ ಕೈಯ್ಯಿಂದ ಉದ್ಯೋಗಿಗಳ ಪಿಎಫ್ ಖಾತೆಗೆ ಪ್ರತಿ ತಿಂಗಳ ಲೆಕ್ಕದಲ್ಲಿ ಬಂದು ಸೇರುತ್ತದೆ. ಆದರೆ, ಹೊಸ ಪ್ರಸ್ತಾವನೆ ಅಂಗೀಕಾರವಾದರೆ ಈ ಸೌಲಭ್ಯ ಕುಂಠಿತವಾಗುತ್ತದೆ.
ಅಂದರೆ, ಮೂಲ ವೇತನದಿಂದ ಪಿಎಫ್ ನಿಧಿಗೆ ವರ್ಗಾವಣೆಗೊಳ್ಳುವ ಮೊತ್ತವನ್ನು ಶೇ. 10ಕ್ಕೆ ಇಳಿಸಿದರೆ, ಉದ್ಯೋಗದಾತರ ಕೈಯ್ಯಿಂದ ಬೀಳುವ ಹಣವೂ ಶೇ. 10ಕ್ಕೆ ಇಳಿಯಲಿದೆ. ಇದರಿಂದ, ಉದ್ಯೋಗಿಯ ಒಟ್ಟಾರೆ ಪಿಎಫ್ ಉಳಿತಾಯದಲ್ಲಿ ಇಳಿಮುಖವಾಗುತ್ತದೆ.












Click it and Unblock the Notifications