ಕಾಡಿನಲ್ಲಿ ಬೇರೆಯಾದ ಮರಿಯಾನೆ : 7 ಗಂಟೆಗಳ ಬಳಿಕ ತಾಯಿ ಮಡಿಲು ಸೇರಿದ ಕಂದ; ಭಾವನಾತ್ಮಕ ವಿಡಿಯೋ

Elephant Union Viral Video : ತಾಯಿ ಮಗುವಿನ ಸಂಬಂಧವೇ ಹಾಗೆ. ಅದು ಪ್ರಾಣಿ ಪಕ್ಷಿಯಾಗಿರಲಿ, ಮನುಷ್ಯರಾಗಿರಲಿ. ಮಗುವೇ ತಾಯಿಯ ಪ್ರಪಂಚ. ತಾಯಿಲ್ಲದೆ ಮಗುವಿಗೆ ಪ್ರಪಂಚವೇ ಇಲ್ಲ. ಒಂದು ಕ್ಷಣ ಮಗು ಕಣ್ಣೆದುರು ಇಲ್ಲ ಎಂದಾದರೂ ತಾಯಿ ಆಕಾಶ ಭೂಮಿ ಒಂದು ಮಾಡಿ ಬಿಡುತ್ತಾಳೆ. ಇನ್ನು ಮಗುವಿಗೆ ತಾಯಿ ಮಡಿಲೇ ಸ್ವರ್ಗ.

Elephant Union Mother And Baby Elephant Reunite After Seven hour In Forest Emotional Video Goes Viral On Social Media


ಬೇರೆಯಾದ ತಾಯಿ ಮರಿ :

ಮೊದಲೇ ಹೇಳಿದ ಹಾಗೆ ಈ ತಾಯಿ ಮಗುವಿನ ಭಾವ, ಬಾಂಧವ್ಯ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಹಾಗೆಯೇ ಇರುತ್ತದೆ. ಇದೀಗ ಸೋಶಿಯಲ್ ಮಿಡಿಯಾದಲ್ಲಿ ಆನೆಯ ವಿಡಿಯೋವೊಂದು ಸಖತ್ ವೈರಲ್ ಆಗ್ತಾ ಇದೆ. ಒಂದು ಪುಟ್ಟ ಆನೆ ಮತ್ತು ಅದರ ತಾಯಿಯ ವಿಡಿಯೋ ಇದು. ಮರಿ ಆನೆ ತಾಯಿ ಆನೆಯಿಂದ ಬೇರೆಯಾಗಿದೆ. ಸುಮಾರು 7 ಗಂಟೆ ತಾಯಿ ಮರಿ ಬೇರೆಯಾಗಿ ಕಷ್ಟಪಟ್ಟಿದ್ದಾರೆ. ಮರಿ ತಾಯಿಗಾಗಿ ಹಂಬಲಿಸ್ತಾ ಇದ್ರೆ ತಾಯಿ ತನ್ನ ಕರುಳ ಬಳ್ಳಿಗಾಗಿ ಕಣ್ಣೀರು ಹಾಕ್ತಾ ಇತ್ತು.

ವೈರಲ್ ಆಗುತ್ತಿದೆ Elephant Union ಭಾವನಾತ್ಮಕ ದೃಶ್ಯ :

ತಾಯಿಯಿಂದ ಬೇರೆಯಾದ ಈ ಮರಿ ಮೊದಲು ಅರಣ್ಯ ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ. ಮರಿಯನ್ನು ತಾಯಿಯ ಮಡಿಲಿಗೆ ಸೇರಿಸಬೇಕು ಎಂದು ಸುಮಾರು 7 ಗಂಟೆಗಳ ಕಾಲ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೂ ತಾಯಿ ತನ್ನ ಹಿಂಡಿನೊಂದಿಗೆ ವಾಪಸ್ ಬಂದಿದ್ದಾಳೆ. ಮರಿಯನ್ನು ಕಂಡ ಕೂಡಲೇ ಸೊಂಡಿಲಿನಿಂದ ಬಾಚಿ ತಬ್ಬಿದ್ದಾಳೆ. ಬಿಟ್ಟರೆ ಎಲ್ಲಿ ಮಗು ಮತತೆ ತಪ್ಪಿಸಿಕೊಳ್ಳುವುದೋ ಎಂದು ತನ್ನ ಕಾಲ ಮಧ್ಯೆಯಲ್ಲಿ ಮಗುವನ್ನು ಇರಿಸಿ ಜೋಪಾನ ಮಾಡುತ್ತಾಳೆ. ತಾಯಿ ಮರಿ ಒಂದಾಗುವ ಈ ದೃಶ್ಯ ನಿಜಕ್ಕೂ ಭಾವನಾತ್ಮಕವಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಅರಣ್ಯ ಅಧಿಕಾರಿ ಶೇರ್ ಮಾಡಿದ ವಿಡಿಯೋ :

ಈ ವಿಡಿಯೋವನ್ನು ( video) ಅರಣ್ಯ ಅಧಿಕಾರಿ ಪರ್ವೀನ್ ಕಸ್ವಾನ್ ಸೋಶಿಯಲ್ ಮಿಡಿಯಾ ಪ್ಲಾಟ್ ಫಾರಂ Xನ ತಮ್ಮ ಅಕೌಂಟ್ @ParveenKaswanನಲ್ಲಿ ಶೇರ್ ಮಾಡಿದ್ದಾರೆ. ಈ ಘಟನೆ ಪಶ್ಚಿಮ ಬಂಗಾಳದ ಕುರ್ಸೆಂಗ್ ಪ್ರದೇಶದಲ್ಲಿ ನಡೆದಿದೆ. ಅಲ್ಲಿ ತಾಯಿ ಆನೆ ಮತ್ತು ಅದರ ಮಗು ನೀರಿನ ತೊಟ್ಟಿಗೆ ಬಿದ್ದಿದೆ. ಇದಾದ ನಂತರ ಅರಣ್ಯ ಇಲಾಖೆ ತಂಡ ಇಬ್ಬರನ್ನೂ ರಕ್ಷಿಸಿದೆ. ಆದರೆ ಈ ಮಧ್ಯೆ ಮರಿಯನ್ನು ತಾಯಿಯಿಂದ ಬೇರ್ಪಡಿಸಲಾಯಿತು. ಮರಿಗೆ ಹೆಚ್ಚಿನ ಆರೈಕೆ ಅಗತ್ಯವಿದ್ದ ಕಾರಣ ಮರಿಯನ್ನು ಬೇರೆ ಕಡೆ ಕರೆದುಕೊಮಡು ಹೋಗಬೇಕಾಯಿತು. ನಂತರ, ತಾಯಿ ಆನೆಯನ್ನು ಹುಡುಕಿ ಮತ್ತೆ ಮರಿಯನ್ನು ತಾಯಿ ಮಡಿಲಿಗೆ ಸೇರಿಸಲಾಯಿತು. ಇಲ್ಲಿ ತಾಯಿ ಮತ್ತು ಮರಿ ಆನೆಯನ್ನು ಮತ್ತೆ ಒಂದುಗೂಡಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಇದು ಅರಣ್ಯ ಸಿಬ್ಬಂದಿಗೆ ನಿಜಕ್ಕೂ ಚ್ಯಾಲೆಂಜಿಂಗ್ ಆಗಿತ್ತು.

7 ಗಂಟೆಗಳ ಹುಡುಕಾಟ :

7 ಗಂಟೆಗಳ ಕಾಲ ಅರಣ್ಯ ಇಲಾಖೆ ಸಿಬ್ಬಂದಿ ತಾಯಿ ( mother) ಆನೆಗಾಗಿ ಹುಡುಕಾಟ ನಡೆಸಿದ್ದಾರೆ. ಮರಿಯನ್ನು ಕಾಡಿನಲ್ಲಿ ಬಿಟ್ಟ ನಂತರ, ಅರಣ್ಯ ಸಿಬ್ಬಂದಿ ತಾಯಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಸಮಯದಲ್ಲಿ, ಪುಟ್ಟ ಆನೆ ತನ್ನ ತಾಯಿ ಭೇಟಿಗಾಗಿ ಹಂಬಲಿಸ್ತಾ ಇತ್ತು. ಕೊನೆಗೂ ಎಲ್ಲರೂ ಕಾಯುತ್ತಿದ್ದ ಕ್ಷಣ ಬಂದಿತು. ಕಾಡಿನ ದಟ್ಟವಾದ ಮರಗಳ ಪೊದೆಯಿಂದ ತಾಯಿ ಆನೆ ಹೊರಕ್ಕೆ ಬಂದಿದೆ. ತನ್ನ ಹಿಂಡಿನೊಂದಿಗೆ ಬಂದ ತಾಯಿ ಆನೆ ಮರಿಯನ್ನು ಕಂಡ ತಕ್ಷಣ ಗುರುತು ಹಿಡಿದಿದೆ. ಬಾಚಿ ತಬ್ಬಿಕೊಂಡು ಸ್ವಲ್ಪ ಸಮಯದ ನಂತರ ಮತ್ತೆ ಕಾಡಿಗೆ ಹೋಗಿದೆ.

ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಪ್ರವೀಣ್ ಕಸ್ವಾನ್ ಈ ಘಟನೆಯ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅರಣ್ಯ ಸಿಬ್ಬಂದಿಯ ಕಠಿಣ ಪರಿಶ್ರಮವನ್ನು ಜನ ಶ್ಲಾಘಿಸಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಜನ ಅರಣ್ಯ ಇಲಾಖೆ ತಂಡವನ್ನು ಹೊಗಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+